ಟ್ರೋಲ್ ಮಾಡ್ತೀರಲ್ಲ ರಾವಣ ಹೇಗಿದ್ದ ಅಂತ ನೀವು ನೋಡಿದ್ರಾ ಎಂದ ಆದಿಪುರುಷ್ ವಿತರಕನಿಗೆ ನೆಟ್ಟಿಗರು ಕೊಟ್ರು ಸೂಪರ್ ಕೌಂಟರ್!

ಕಳೆದ ಶುಕ್ರವಾರ ( ಜೂನ್ 23 ) ವಿಶ್ವದಾದ್ಯಂತ ಬಹು ನಿರೀಕ್ಷಿತ ಆದಿಪುರುಷ್ ಚಿತ್ರ ಬಿಡುಗಡೆಗೊಂಡಿದೆ. ರಾಮಾಯಣ ಆಧಾರಿತ ಚಿತ್ರವೆಂದು ಹೇಳಿಕೊಂಡಿದ್ದ ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರೆ, ಸೀತೆ ಪಾತ್ರದಲ್ಲಿ ಕೃತಿ ಸೆನನ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ.

ಚಿತ್ರಕ್ಕೆ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದು, ಬಿಡುಗಡೆಗೂ ಮುನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಹೀನಾಯವಾಗಿ ಟ್ರೋಲ್ ಆಗಿದ್ದ ಚಿತ್ರ ಬಿಡುಗಡೆಯಾದ ಬಳಿಕವೂ ಸಹ ಅಷ್ಟೇ ಮಟ್ಟದಲ್ಲಿ ಟೀಕೆಗೆ ಒಳಗಾಗಿದೆ. ರಾಮಾಯಣ ಆಧಾರಿತ ಸಿನಿಮಾದಲ್ಲಿ ತಪ್ಪಾಗಿ ರಾಮಾಯಣದ ಸನ್ನಿವೇಶಗಳನ್ನು ತೋರಿಸಲಾಗಿದೆ. ರಾಮನಿಗೆ ಸರಿ ಹೊಂದುವಂತಹ ವಸ್ತ್ರಗಳನ್ನು ಕೆಲ ದೃಶ್ಯಗಳಲ್ಲಿ ಧರಿಸಿಲ್ಲ.

Those who are trolling Ravana look are not seen him really says Adipurush distributor

ಸೀತೆ ಪಾತ್ರಧಾರಿ ಕೃತಿ ಸೆನನ್ ಕೆಲ ದೃಶ್ಯಗಳಲ್ಲಿ ಮಾಡರ್ನ್ ನಟಿಯರ ಹಾಗೆ ಹಾಫ್ ಬ್ಲೌಸ್ ತೊಟ್ಟಿದ್ದಾರೆ, ತಲೆಗೆ ಸೆರಗನ್ನೇ ಧರಿಸಿಲ್ಲ. ಹನುಮಂತನ ಲುಕ್ ಸ್ವಲ್ಪವೂ ಸರಿ ಇಲ್ಲ. ವಾನರ ಸೈನ್ಯವನ್ನು ಗೊರಿಲ್ಲಾಗಳ ರೀತಿ ಮಾಡಲಾಗಿದೆ. ರಾವಣನ ತಲೆಗಳ ಆಕಾರವನ್ನೇ ಬದಲಾಯಿಸಲಾಗಿದೆ.

ಹೀಗೆ ಹತ್ತು ಹಲವಾರು ಕಾರಣಗಳಿಂದಾಗಿ ಆದಿಪುರುಷ್ ಟ್ರೋಲಿಗರ ಕೈಗೆ ಸಿಕ್ಕು ಹೀನಾಮಾನವಾಗಿ ಟೀಕೆಗೆ ಒಳಗಾಗಿದೆ. ಇನ್ನು ಆದಿಪುರುಷ್ ತಂಡದ ಈ ಅವಸ್ಥೆಯನ್ನು ಕಂಡು ನೆಟ್ಟಿಗರು ನಗುತ್ತಿದ್ದರೆ, ಚಿತ್ರವನ್ನು ವೀಕ್ಷಿಸಿ ಹೊರಬಂದ ಸಿನಿ ರಸಿಕರು ಚಿತ್ರದಲ್ಲಿ ತಪ್ಪಾದ ರಾಮಾಯಣ ತೋರಿಸಲಾಗಿದೆ, ಚಿತ್ರದಲ್ಲಿ ಅನೇಕ ಸಂಭಾಷಣೆಗಳು ಚೆನ್ನಾಗಿಲ್ಲ, ರಾಮಾಯಣದ ಕಥೆ ಇರುವ ಚಿತ್ರದ ಡೈಲಾಗ್ಸ್ ಸಾಮಾನ್ಯ ಕಮರ್ಷಿಯಲ್ ಸಿನಿಮಾ ಡೈಲಾಗ್ ಎಂಬಂತೆ ಅನಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಇನ್ನು ಈ ಎಲ್ಲಾ ಪಾತ್ರಗಳ ಪೈಕಿ ಅತಿಹೆಚ್ಚು ಟ್ರೋಲ್ ಆಗಿರುವುದು ರಾವಣನ ಪಾತ್ರ. ಅದರಲ್ಲಿಯೂ ರಾವಣನ ತಲೆಗಳ ಬಗ್ಗೆ ತೀವ್ರ ಚರ್ಚೆ ಏರ್ಪಟ್ಟಿದೆ. ರಾವಣನ ಹತ್ತು ತಲೆಗಲು ಒಂದೇ ಸಾಲಿನಲ್ಲಿ ಇರಬೇಕು, ಆದರೆ ಈ ಚಿತ್ರದಲ್ಲಿ ವೃತ್ತಾಕಾರದಲ್ಲಿ ಎಲ್ಲಿ ಬೇಕೆಂದರಲ್ಲಿ ಸೇರಿಸಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಟೀಕಿಸಿದ್ದಾರೆ.

ಈ ಕುರಿತು ಕೆಲವರು ರಾವಣನ ತಲೆಗಳು ಒಂದೇ ಸಾಲಿನಲ್ಲಿ ಇದ್ದವು ಎಂಬುದಕ್ಕೆ ಯಾವ ಸಾಕ್ಷಿಗಳೂ ಸಹ ಇಲ್ಲ ಎಂದು ವಾದಿಸಿದ್ದಾರೆ. ಈ ಸಾಲಿಗೆ ಇದೀಗ ತೆಲುಗು ರಾಜ್ಯಗಳಲ್ಲಿ ಆದಿಪುರುಷ್ ಚಿತ್ರವನ್ನು ಹಂಚಿರುವ ವಿತರಕ ಸಹ ಸೇರಿಕೊಂಡಿದ್ದು, ರಾವಣನ ಲುಕ್ ಬಗ್ಗೆ ಟ್ರೋಲ್ ಮಾಡುವವರಿಗೆ ಪ್ರಶ್ನೆ ಹಾಕಿ ಟೀಕಿಸಿದ್ದಾರೆ.

"ರಾವಣನ ಲುಕ್ ಟ್ರೋಲ್ ಮಾಡುತ್ತಿರುವ ಜನರಿಗೆ ನನ್ನದೊಂದು ಪ್ರಶ್ನೆ. ನೀವು ರಾವಣನನ್ನು ನಿಜವಾಗಿ ನೋಡಿದ್ದೀರಾ? ಸಿನಿಮಾ ಮಾಡಿದ ನಾವಾಗಲೀ, ಸಿನಿಮಾ ನೋಡಿದ ನೀವಾಗಲೀ ನಿಜ ಜೀವನದಲ್ಲಿ ರಾವಣಾಸುರನನ್ನು ನೋಡಿಲ್ಲ. ಅದು ನಮ್ಮ ಊಹೆ ಅಷ್ಟೇ! ಒಂದು ವೇಳೆ ನಾವು ಸಂಸ್ಕೃತ ಸಂಭಾಷಣೆ ಮತ್ತು ಕವಿತೆಗಳೊಂದಿಗೆ ಆದಿಪುರುಷ್ ಚಿತ್ರವನ್ನು ಮಾಡಿದರೆ, ನೀವು ಮತ್ತೆ ನಮ್ಮನ್ನು ಟ್ರೋಲ್ ಮಾಡುತ್ತೀರಿ ಹಾಗೂ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡಿ ಎಂದು ಬಯ್ಯುತ್ತೀರಿ" ಎಂದು ಕಿಡಿಕಾರಿದ್ದಾರೆ.

ಹೀಗೆ ತೆಲುಗು ವಿತರಕ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಾವು ರಾವಣನನ್ನು ನೋಡಿಲ್ಲ ನಿಜ, ಆದರೆ ನೀವು ಯಾವಾಗ ರಾವಣನ ಮಗ ಆಗಿನ ಸಮಯದಲ್ಲಿ ಮೈತುಂಬಾ ಮಾಡರ್ನ್ ದಿನಗಳ ಹಾಗೆ ಟ್ಯಾಟ್ಯೂ ಹಾಕಿಸಿಕೊಂಡಿದ್ದನ್ನು ನೋಡಿದ್ರಿ ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಆದಿಪುರುಷ್ ಚಿತ್ರವನ್ನು ನಿರ್ಮಿಸಿದ ಚಿತ್ರತಂಡಕ್ಕೆ ಟ್ರೋಲ್ ಹಾಗೂ ಟೀಕೆಗಳ ಕಾಟ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ.

More from Filmibeat

English summary
Those who are trolling Ravana look are not seen him really says Adipurush distributor. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X