ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಲು ಹೋಗಿ ಮೂವರು ಅಭಿಮಾನಿಗಳ ಸಾವು
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಬ್ಯಾನರ್ ಹಾಕಲು ಹೋಗಿದ್ದ ಇಬ್ಬರು ಸಹೋದರರು ಸೇರಿದ್ದಂತೆ ಮೂವರು ಅಭಿಮಾನಿಗಳು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಡಪ್ಪ ಹಳ್ಳಿ ಬಳಿ ನಡೆದಿದೆ.
Recommended Video
ಮೃತರು ಸೋಮಶೇಖರ್ (30), ರಾಜಶೇಖರ್ (32) ಮತ್ತು ಅರುಣಾಚಲಂ (28) ಎಂದು ಗುರುತಿಸಲಾಗಿದೆ. ಕಡಪ್ಪಹಳ್ಳಿ ಮತ್ತು ಸುತ್ತಮುತ್ತಲಿನ ಕೆಲವು ಅಭಿಮಾನಿಗಳು ತಡ ರಾತ್ರಿ ಪವನ್ ಕಲ್ಯಾಣ್ ಅವರ ದೊಡ್ಡ ಕಟೌಟ್ ನಿರ್ಮಿಸಲು ಹೋಗಿದ್ದರು. ಕುಪ್ಪಂನ ಕೃಷ್ಣಗಿರಿ-ಪಾಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 25 ಅಡಿ ಎತ್ತರದ ಕಟೌಟ್ ಹಾಕುತ್ತಿದ್ದರು ಎಂದು ವರದಿಯಾಗಿದೆ.
ಈ ಸಮಯದಲ್ಲಿ ರಸ್ತೆಯ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಗಾಯವಾಗಿದ್ದು, ಅವರನ್ನು ಕುಪ್ಪಂನ PES ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿರುವ ಹರಿಕೃಷ್ಣ, ಪವನ್ ಮತ್ತು ಸುಬ್ರಹ್ಮಣ್ಯಂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ನಟ ಮತ್ತು ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಇನ್ನೂ ಜನ ಸೇನಾ ಪಕ್ಷದ ಪರವಾಗಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪ್ರಕಟಿಸಿದ್ದಾರೆ.


Click it and Unblock the Notifications











