For Quick Alerts
  ALLOW NOTIFICATIONS  
  For Daily Alerts

  RRR ದಸೆಯಿಂದ ಮತ್ತೆ ಮೂವರು ಅಭಿಮಾನಿಗಳ ಸಾವು

  |

  ಕೊರೊನಾ ಲಾಕ್‌ಡೌನ್‌ನಿಂದಾಗಿ ಸಿನಿಮಾವನ್ನು ಚಿತ್ರಮಂದಿರವನ್ನು 'ಸೆಲೆಬ್ರೇಟ್' ಮಾಡಲಾಗದೆ ಒದ್ದಾಡಿದ್ದ ಸಿನಿ ಅಭಿಮಾನಿಗಳಿಗೆ, 'RRR' ವರದಂತೆ ಒದಗಿ ಬಂದಿದೆ. 'RRR' ಗಿಂತಲೂ ಮುಂಚೆ ಕೆಲವು ಬಿಗ್ ಸ್ಟಾರ್, ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗಿವೆಯಾದರೂ 'RRR' ಅನ್ನು ನೋಡಲು, ಸಿನಿಮಾವನ್ನು ಸೆಲೆಬ್ರೇಟ್ ಮಾಡಲು ಹಲವು ಕಾರಣಗಳಿವೆ.

  'RRR' ಸಿನಿಮಾವನ್ನು ಜೂ ಎನ್‌ಟಿಆರ್-ರಾಮ್ ಚರಣ್ ಅಭಿಮಾನಿಗಳು ಮಾತ್ರವಲ್ಲ ಒಟ್ಟಾರೆ ಸಿನಿಮಾ ಪ್ರೇಮಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ರಾಜಮೌಳಿ ಸೃಷ್ಟಿಸಿಕೊಟ್ಟಿರುವ ಅದ್ಭುತ ದೃಶ್ಯ ಕಾವ್ಯವನ್ನು ಕಣ್ ತುಂಬಿಕೊಳ್ಳುತ್ತಿದ್ದಾರೆ.

  RRR ಭಾರತದ ಅತಿ ಕೆಟ್ಟ ಸಿನಿಮಾ, ರಾಜಮೌಳಿಗೆ ನಿರ್ದೇಶನ ಬರಲ್ಲ: KRK ವಿಮರ್ಶೆRRR ಭಾರತದ ಅತಿ ಕೆಟ್ಟ ಸಿನಿಮಾ, ರಾಜಮೌಳಿಗೆ ನಿರ್ದೇಶನ ಬರಲ್ಲ: KRK ವಿಮರ್ಶೆ

  ಆದರೆ ಈ 'ಸಿನಿಮಾ ಸೆಲೆಬ್ರೇಶನ್' ಪ್ರೋಸೆಸ್‌ನಲ್ಲಿ ಅಲ್ಲೊಂದು ಇಲ್ಲೊಂದು ಅವಘಡಗಳು ಸಹ ಘಟಿಸುತ್ತಿರುವುದು ಬೇಸರ ಮೂಡಿಸಿದೆ. ವಿಶೇಷವಾಗಿ ಸಿನಿಮಾದಿಂದಾಗಿ ಸಿನಿಮಾ ಪ್ರಿಯರ ಜೀವ ಹೋಗುತ್ತಿರುವುದು ಬಹು ಖೇದಕರ.

  ಸಿನಿಮಾ ಬಿಡುಗಡೆ ಆದ ದಿನವೇ ಆಂಧ್ರದ ಅನಂತಪುರದಲ್ಲಿ ಎಸ್‌ವಿ ಮ್ಯಾಕ್ಸ್ ಹೆಸರಿನ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಾ-ನೋಡುತ್ತಾ ಅಭಿಮಾನಿಯೊಬ್ಬ ಹೃದಯಾಘಾತದಿಂದ ನಿಧನ ಹೊಂದಿದ. ಈ ಘಟನೆ ಇನ್ನು ಸ್ಮೃತಿಯಲ್ಲಿರುವಾಗಲೇ ಅದೇ ದಿನ ಮೂರು ಮಂದಿ ಸಿನಿಮಾ ಪ್ರೇಮಿಗಳು ಜೀವ ಕಳೆದುಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

  ದಾವಣಗೆರೆ: ತಾಂತ್ರಿಕ ದೋಷದಿಂದ RRR ಸಿನಿಮಾ ಪ್ರದರ್ಶನ ರದ್ದು: ಚಿತ್ರಮಂದಿರ ಗಾಜುಗಳು ಪುಡಿ-ಪುಡಿದಾವಣಗೆರೆ: ತಾಂತ್ರಿಕ ದೋಷದಿಂದ RRR ಸಿನಿಮಾ ಪ್ರದರ್ಶನ ರದ್ದು: ಚಿತ್ರಮಂದಿರ ಗಾಜುಗಳು ಪುಡಿ-ಪುಡಿ

  ಶುಕ್ರವಾರ ಮುಂಜಾನೆಯ RRR ಸಿನಿಮಾದ ಬೆನಿಫಿಟ್ ಶೋಗೆ ಟಿಕೆಟ್ ತರಲೆಂದು ಚಿತ್ತೂರು ಜಿಲ್ಲೆಯ ಹಳ್ಳಿಯೊಂದರ ಮೂವರು ಯುವಕರು ಬೈಕ್‌ನಲ್ಲಿ ಪಟ್ಟಣಕ್ಕೆ ಬಂದಿದ್ದಾರೆ. ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನಿಸಿದ ಬಳಿಕ ಟಿಕೆಟ್ ದೊರಕಿಲ್ಲ. ಬೇಸರದಿಂದ ತಡರಾತ್ರಿ ಮನೆಗೆ ವಾಪಸ್ಸಾಗಬೇಕಾದರೆ ಬೈಕ್ ಆಕ್ಸಿಡೆಂಟ್ ಆಗಿ ಮೂವರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಯುವಕ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  RRR ನೋಡಲು ಬಂದೂಕು ತಂದ ಅಭಿಮಾನಿ: ಚಿತ್ರಮಂದಿರದಲ್ಲಿ ಕೋಲಾಹಲRRR ನೋಡಲು ಬಂದೂಕು ತಂದ ಅಭಿಮಾನಿ: ಚಿತ್ರಮಂದಿರದಲ್ಲಿ ಕೋಲಾಹಲ

  ಘಟನೆ ನಡೆದ ಕೂಡಲೇ ಚಿತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಮೃತಪಟ್ಟ ಮೂವರು ಸಹ ಸಿನಿಮಾ ಪ್ರೇಮಿಗಳಾಗಿದ್ದು, ಚಿತ್ರಮಂದಿರದ ಬ್ಲಾಕ್ ಟಿಕೆಟ್‌ಗಳು ದೊರಕುತ್ತಿವೆ ಎಂಬ ಸುದ್ದಿಯನ್ನು ನಂಬಿಕೊಂಡು ಹಳ್ಳಿಯಿಂದ ಪಟ್ಟಣಕ್ಕೆ ಬೈಕ್‌ನಲ್ಲಿ ಬಂದಿದ್ದರಂತೆ. ಆದರೆ ಅವರು ಬರುವ ವೇಳೆಗೆ ಟಿಕೆಟ್‌ಗಳು ಖಾಲಿಯಾಗಿವೆ. ಹಾಗಿದ್ದೂ ಸಿನಿಮಾ ನೋಡುವ ಆಸೆಯಿಂದ ಟಿಕೆಟ್ ದೊರಕುತ್ತವೇನೊ ಎಂದುಕೊಂಡು ಹಲವು ಕಡೆ ವಿಚಾರಿಸಿದ್ದಾರೆ. ಎಲ್ಲೂ ಟಿಕೆಟ್ ಸಿಗದೇ ಹೋದಾಗ ಮನೆಗೆ ವಾಪಸ್ಸಾಗಬೇಕಾದರೆ ಅಪಘಾತ ನಡೆದಿದೆ.

  ಸಿನಿಮಾ ಬಿಡುಗಡೆ ದಿನದಂದು ಅನಂತಪುರದಲ್ಲಿ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ, ಈಗ ಈ ಮೂವರು ಸಾವನ್ನಪ್ಪಿದ್ದಾರೆ. ಆಂಧ್ರ-ತೆಲಂಗಾಣದ ಕೆಲವೆಡೆ ಚಿತ್ರಮಂದಿರದ ಬಳಿ ನಡೆದ ನೂಕಾಟ-ತಳ್ಳಾಟ, ಲಾಠಿ ಚಾರ್ಜ್‌ನಲ್ಲಿ ಕೆಲವು ಅಭಿಮಾನಿಗಳು ಗಾಯ ಮಾಡಿಕೊಂಡಿದ್ದಾರೆ. ಕೆಲವು ಚಿತ್ರಮಂದಿರಗಳು ಜಖಂ ಆಗಿವೆ. ಒಟ್ಟಾರೆ ಏನೇ ಕಷ್ಟವಾದರೂ 'RRR' ಅನ್ನು ಮುಗಿಬಿದ್ದು ನೋಡುತ್ತಿದ್ದಾರೆ ಅಭಿಮಾನಿಗಳು.

  RRR ಸಿನಿಮಾವು ಮಾರ್ಚ್ 25 ರಂದು ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಐತಿಹಾಸಿಕ ಓಪನಿಂಗ್ ದೊರೆತಿದೆ. ಒಂದೇ ದಿನಕ್ಕೆ ವಿಶ್ವದಾದ್ಯಂತ 200 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಸಿನಿಮಾ ದೋಚಿದೆ. ಈ ಸಿನಿಮಾದ ಕಲೆಕ್ಷನ್ ಕೆಲವೇ ದಿನಗಳಲ್ಲಿ 1000 ಕೋಟಿ ಆಗಲಿದೆ ಎಂದು ಸಿನಿ ಪಂಡಿತರು ಲೆಕ್ಕ ಹಾಕಿದ್ದಾರೆ.

  Recommended Video

  RRR OTT release | ಇನ್ನೇನು OTT ಯಲ್ಲಿ ಬರಲಿದೆ RRR, ಯಾವಾಗ..? | Netflix | Ram Charan | Jr NTR

  ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತಾದ ಕಾಲ್ಪನಿಕ ಕತೆಯನ್ನು ಈ ಸಿನಿಮಾ ಹೊಂದಿದ್ದು, ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ, ಕೋಮರಂ ಭೀಮ್ ಆಗಿ ಜೂ ಎನ್‌ಟಿಆರ್ ನಟಿಸಿದ್ದಾರೆ. ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Three movie fans died in an road accident in Chitoor district while trying to get RRR movie ticket for first day show.
  Saturday, March 26, 2022, 19:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X