For Quick Alerts
  ALLOW NOTIFICATIONS  
  For Daily Alerts

  ತೆಲುಗು ಚಿತ್ರರಂಗದಲ್ಲಿ ಗರಿಗೆದರಿದ ರಾಜಕೀಯ: ಒಂದು ಕ್ಷೇತ್ರಕ್ಕಾಗಿ ಮೂರು ಸ್ಟಾರ್‌ಗಳ ಕಿತ್ತಾಟ!

  |

  ತೆಲುಗು ಚಿತ್ರರಂಗದಲ್ಲಿ ರಾಜಕೀಯ ಗರಿಗೆದರಿದೆ. ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇದ್ದು, ಈಗಲೇ ಕ್ಷೆತ್ರಗಳ ಟಿಕೆಟ್‌ಗಾಗಿ ಸಿನಿಮಾ ತಾರೆಯರು ಕಸರತ್ತಿಗಿಳಿದಿದ್ದಾರೆ.

  ಅದರಲ್ಲಿಯೂ ಬಿಜೆಪಿ ಪಕ್ಷ, ತೆಲಂಗಾಣದಲ್ಲಿ ನೆಲೆ ನಿಲ್ಲಲು ಶತಪ್ರಯತ್ನ ಮಾಡುತ್ತಿದ್ದು, ಸಿನಿಮಾ ತಾರೆಯರನ್ನು ತಮ್ಮ ಮುಖ್ಯ ಅಸ್ತ್ರವನ್ನಾಗಿ ಬಳಸುತ್ತಿದೆ. ಹಾಗಾಗಿ ಹಲವು ಸಿನಿಮಾ ನಟ-ನಟಿಯರು ಬಿಜೆಪಿ ಟಿಕೆಟ್‌ಗಾಗಿ ಬಿಜೆಪಿ ಟಿಕೆಟ್‌ಗಾಗಿ ಮುಗಿಬಿದ್ದಿದ್ದು, ಕ್ಷೇತ್ರಗಳಿಗಾಗಿ ಫೈಟ್ ಚಾಲ್ತಿಯಲ್ಲಿದೆ.

  ತೆಲುಗು ಚಿತ್ರರಂಗದ ಹೃದಯವಾಗಿರುವ ಹೈದರಾಬಾದ್‌ನ ಕೆಲವು ಕ್ಷೇತ್ರಗಳ ಟಿಕೆಟ್‌ಗಾಗಿ ಸ್ಟಾರ್ ನಟ-ನಟಿಯರೇ ಪೈಪೋಟಿಗೆ ಇಳಿದಿದ್ದಾರೆ. ಅದರಲ್ಲಿಯೂ ಸಿನಿಮಾ ತಾರೆಯರ ನೆಲೆಯಾದ ಜ್ಯೂಬ್ಲಿ ಹಿಲ್ಸ್, ದಕ್ಷಿಣ ಹೈದರಾಬಾದ್‌ಗಾಗಿ ಹೆಚ್ಚಿನ ಪೈಪೋಟಿ ನಡೆಯುತ್ತಿದೆ.

  ರೇಸ್‌ನಲ್ಲಿ ಜೀವಿತಾ ರಾಜಶೇಖರ್

  ರೇಸ್‌ನಲ್ಲಿ ಜೀವಿತಾ ರಾಜಶೇಖರ್

  ಈಗಾಗಲೇ ಸಕ್ರಿಯ ರಾಜಕೀಯದಲ್ಲಿದ್ದ ನಟ ರಾಜಶೇಖರ್ ಪತ್ನಿ ಜೀವಿತಾ ರಾಜಶೇಖರ್ ಬಿಜೆಪಿ ಸೇರ್ಪಡೆಯಾಗಿದ್ದು, ತಮಗೆ ಜ್ಯೂಬ್ಲಿ ಹಿಲ್ಸ್ ಕ್ಷೇತ್ರದ ಟಿಕೆಟ್ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ತೆಲಂಗಾಣ ಸಿಎಂ ಪುತ್ರಿ ಕವಿತ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಾ, ಮೋದಿ ಆಡಳಿತವನ್ನು ಹೊಗಳುತ್ತಾ ಬಿಜೆಪಿ ಟಿಕೆಟ್‌ಗಾಗಿ ಬಹಿರಂಗ ಹಾಗೂ ತೆರೆ ಮರೆ ಪ್ರಯತ್ನಗಳನ್ನು ಆರಂಭಿಸಿದ್ದಾರೆ.

  ಟಿಕೆಟ್ ಕೊಡಿಸಲು ಯತ್ನಿಸುತ್ತಿರುವ ನಿತಿನ್

  ಟಿಕೆಟ್ ಕೊಡಿಸಲು ಯತ್ನಿಸುತ್ತಿರುವ ನಿತಿನ್

  ಇನ್ನು ನಟ ನಿತಿನ್ ಸಹ ತಮ್ಮ ಕುಟುಂಬದ ಸದಸ್ಯರಿಗೆ ಬಿಜೆಪಿ ಟಿಕೆಟ್ ಕೊಡಿಸಲು ಸತತ ಯತ್ನ ಮಾಡುತ್ತಿದ್ದಾರೆ. ನಿತಿನ್ ತಂದೆ ಸುಧಾಕರ್ ರೆಡ್ಡಿ ಅಥವಾ ಅವರ ಸಹೋದರಿ ಈ ಬಾರಿ ಬಿಜೆಪಿ ಯಿಂದ ಚುನಾವಣೆಗೆ ಸ್ಪರ್ಧಿಸುವುದು ಪಕ್ಕಾ ಆಗಿದೆ. ನಿತಿನ್ ಸಹ ಜ್ಯೂಬ್ಲಿ ಹಿಲ್ಸ್ ಕ್ಷೇತ್ರದ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಆದರೆ ಅದರ ಹೊರತಾಗಿ ದಕ್ಷಿಣ ಹೈದರಾಬಾದ್ ಕ್ಷೇತ್ರ ಕೊಟ್ಟರೂ ಪರವಾಗಿಲ್ಲ ಎಂಬ ಮನಸ್ಥಿತಿಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ನಟ ನಿತಿನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿಯಾಗಿದ್ದರು.

  ನಿರ್ಮಾಪಕ ಅಭಿಷೇಕ್ ಅಗರ್ವಾಲ್

  ನಿರ್ಮಾಪಕ ಅಭಿಷೇಕ್ ಅಗರ್ವಾಲ್

  ಇನ್ನೊಂದೆಡೆ, 'ದಿ ಕಾಶ್ಮೀರ್ ಫೈಲ್ಸ್', 'ಕಾರ್ತಿಕೇಯ 2' ಸಿನಿಮಾಗಳ ನಿರ್ಮಾಪಕರಾಗಿರುವ ಅಭಿಷೇಕ್ ಅಗರ್ವಾಲ್ ಸಹ ಜ್ಯೂಬ್ಲಿ ಹಿಲ್ಸ್‌ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಇವರಿಗೆ ಕೇಂದ್ರ ಬಿಜೆಪಿಯ ಆಪ್ತ ಪರಿಚಯ ಇದೆ ಎನ್ನಲಾಗುತ್ತಿದ್ದು, ರಾಷ್ಟ್ರನಾಯಕರ ಮಟ್ಟದಲ್ಲಿ ಟಿಕೆಟ್‌ಗಾಗಿ ಲಾಭಿ ನಡೆಸುತ್ತಿದ್ದಾರೆ.

  ಪವನ್ ಕಲ್ಯಾಣ್ ಜೊತೆ ಬಿಜೆಪಿ ಮೈತ್ರಿ

  ಪವನ್ ಕಲ್ಯಾಣ್ ಜೊತೆ ಬಿಜೆಪಿ ಮೈತ್ರಿ

  ಇನ್ನು ತೆಲಂಗಾಣದಲ್ಲಿ ಪ್ರಸ್ತುತ ಕೆಸಿಆರ್ ಸಿಎಂ ಆಗಿದ್ದು ಕೆಟಿಆರ್ ಪಕ್ಷ ಅಧಿಕಾರದಲ್ಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಕೆಸಿಆರ್ ಅಧಿಕಾರಕ್ಕೆ ಬಂದಿದ್ದಾರೆ. ಈ ಬಾರಿಯೂ ಅವರೇ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಆದರೆ ಅವರಿಗೆ ಪ್ರಬಲ ಪೈಪೋಟಿ ನೀಡಲು ಬಿಜೆಪಿ ಸಜ್ಜಾಗುತ್ತಿದೆ. ಇದಕ್ಕೆ ಸಿನಿಮಾ ತಾರೆಯರ ಬೆಂಬಲ ಪಡೆದುಕೊಂಡಿದೆ. ನಟ ಪವನ್‌ ಕಲ್ಯಾಣ್ ಜೊತೆ ಮೈತ್ರಿ ಸಹ ಮಾಡಿಕೊಂಡಿದೆ. ಜನಸೇನಾ ಪಕ್ಷ ಕಟ್ಟಿರುವ ಪವನ್ ಕಲ್ಯಾಣ್ ರಾಜಕೀಯದಲ್ಲಿ ನಿಧಾನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯು ಮುಂದಿನ ವರ್ಷ ಡಿಸೆಂಬರ್‌ಗೆ ಮುನ್ನ ನಡೆಯಲಿದೆ.

  English summary
  Three movie celebrities trying to get BJP ticket for Jubli Hills assembly constituency. Telangana Elections are near
  Thursday, September 22, 2022, 10:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X