For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ-2ಕ್ಕೆ ಮೂರು ವರ್ಷದ ಸಂಭ್ರಮ: ಭಾವುಕ ಮಾತು ಹಂಚಿಕೊಂಡ ಪ್ರಭಾಸ್

  |

  ಇಡೀ ದೇಶವೇ ದಕ್ಷಿಣ ಭಾರತದತ್ತ ಬೆರಗಿನಿಂದ ನೋಡುವಂತೆ ಮಾಡಿದ್ದ 'ಬಾಹುಬಲಿ' ಸರಣಿಯ ಎರಡನೆಯ ಭಾಗ ಬಿಡುಗಡೆಯಾಗಿ ಏಪ್ರಿಲ್ 28ಕ್ಕೆ ಮೂರು ವರ್ಷ ಪೂರೈಸಿದೆ. ಎಸ್ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರ ತನ್ನ ಎರಡೂ ಭಾಗಗಳಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿತ್ತು.

  ಕನ್ನಡದಲ್ಲೇ ಧನ್ಯವಾದ ಹೇಳಿದ ಬಾಹುಬಲಿ ಮಾಂತ್ರಿಕ | RRR | Rajmouli | NTR | Ram Charan

  ಬಾಹುಬಲಿಯಾಗಿ ಪ್ರಭಾಸ್, ಬಲ್ಲಾಳದೇವನಾಗಿ ರಾಣಾ ದಗ್ಗುಬಾಟಿ, ಶಿವಗಾಮಿಯಾಗಿ ರಮ್ಯಾಕೃಷ್ಣ, ದೇವಸೇನಾಳಾಗಿ ಅನುಷ್ಕಾ ಶೆಟ್ಟಿ ಸಿನಿಮಾ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಈ ಚಿತ್ರ ಎಸ್ಎಸ್ ರಾಜಮೌಳಿ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿತ್ತು. ಅಷ್ಟೇ ಅಲ್ಲ ಈ ಅದ್ಧೂರಿ ವೆಚ್ಚದ ಐತಿಹಾಸಿಕ ಕಥನದ ಸಿನಿಮಾ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದರು.

  ಮೆಗಾಸ್ಟಾರ್ ಕುಟುಂಬದ ಅಳಿಯ ಆಗುತ್ತಾರಾ ಪ್ರಭಾಸ್: ನಿಹಾರಿಕಾ ಹೇಳಿದ್ದೇನು?ಮೆಗಾಸ್ಟಾರ್ ಕುಟುಂಬದ ಅಳಿಯ ಆಗುತ್ತಾರಾ ಪ್ರಭಾಸ್: ನಿಹಾರಿಕಾ ಹೇಳಿದ್ದೇನು?

  'ಬಾಹುಬಲಿ' ಹುಟ್ಟುಹಾಕಿದ್ದ ಕ್ರೇಜ್‌ಅನ್ನು 'ಬಾಹುಬಲಿ-2' ಮುಂದುವರಿಸಿತ್ತು. 'ಬಾಹುಬಲಿ: 2 ದಿ ಕಂಕ್ಲ್ಯೂಷನ್' ಬಿಡುಗಡೆಯಾಗಿ ಇಂದಿಗೆ (ಏ. 28) ಮೂರು ವರ್ಷ. ಪ್ರಭಾಸ್ ಅಭಿಮಾನಿಗಳು ಈ ದಿನದ ಸಂಭ್ರಮಾಚರಣೆಯಲ್ಲಿದ್ದಾರೆ. ಮುಂದೆ ಓದಿ...

  ಬದುಕಿನ ಅತಿ ದೊಡ್ಡ ಚಿತ್ರ

  ಬದುಕಿನ ಅತಿ ದೊಡ್ಡ ಚಿತ್ರ

  'ಬಾಹುಬಲಿ 2 ಈ ದೇಶ ಇಷ್ಟಪಟ್ಟ ಒಂದು ಸಿನಿಮಾ ಮಾತ್ರವೇ ಅಲ್ಲ. ಆದರೆ ಅದು ನನ್ನ ಜೀವನದ ಅತಿ ದೊಡ್ಡ ಸಿನಿಮಾ ಕೂಡ' ಎಂದು 'ಬಾಹುಬಲಿ'ಯ ನಾಯಕ ಪ್ರಭಾಸ್ ಮೂರನೇ ವರ್ಷಾಚರಣೆಯ ಸಂಭ್ರಮದ ವೇಳೆ ಹೇಳಿಕೊಂಡಿದ್ದಾರೆ.

  ಸ್ಮರಣೀಯ ಚಿತ್ರವಾಗಿಸಿದ್ದಾರೆ

  ಸ್ಮರಣೀಯ ಚಿತ್ರವಾಗಿಸಿದ್ದಾರೆ

  'ನನ್ನ ಅಭಿಮಾನಿಗಳಿಗೆ, ತಂಡ ಹಾಗೂ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಇದನ್ನು ಅತ್ಯಂತ ಸ್ಮರಣೀಯ ಚಿತ್ರವನ್ನಾಗಿಸಿದ್ದಾರೆ. ಬಾಹುಬಲಿ 2 ಮೂರು ವರ್ಷಗಳನ್ನು ಪೂರೈಸಿದೆ. ಈ ಚಿತ್ರ ಮತ್ತು ನನಗೆ ದೊರೆತ ಎಲ್ಲ ಪ್ರೀತಿಗೆ ಆಭಾರಿಯಾಗಿದ್ದೇನೆ' ಎಂದಿದ್ದಾರೆ.

  ರಾಜಮೌಳಿ ಸಿನಿಮಾವನ್ನೂ ಮೀರಿಸುತ್ತೆ ಪ್ರಭಾಸ್ ಮುಂದಿನ ಸಿನಿಮಾದ ಬಜೆಟ್ರಾಜಮೌಳಿ ಸಿನಿಮಾವನ್ನೂ ಮೀರಿಸುತ್ತೆ ಪ್ರಭಾಸ್ ಮುಂದಿನ ಸಿನಿಮಾದ ಬಜೆಟ್

  ಕನಸು ನನಸಾದ ದಿನ ಎಂದ ತಮನ್ನಾ

  ಕನಸು ನನಸಾದ ದಿನ ಎಂದ ತಮನ್ನಾ

  ನಟಿ ತಮನ್ನಾ ಕೂಡ ತಮ್ಮ ಸ್ಮರಣೀಯ ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 'ಸುಂದರ ಮತ್ತು ಭವ್ಯವಾದ ಬಾಹುಬಲಿ 2ದ ಮೂರು ವೈಭವಯುತ ವರ್ಷ ಈಗಲೇ ಪೂರೈಸಿದ್ದೇವೆ ಎನ್ನುವುದನ್ನು ಊಹಿಸಲೂ ಆಗುತ್ತಿಲ್ಲ. ಎಸ್ಎಸ್ ರಾಜಮೌಳಿ ಅವರ ನಿರ್ದೇಶನದಲ್ಲಿ ನಟಿಸಬೇಕು ಎಂಬ ನನ್ನ ಕನಸು ನನಸಾದ ಸೆಟ್‌ನಲ್ಲಿನ ನನ್ನ ಮೊದಲ ದಿನವನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

  ಕಲಿಕೆಯ ಖುಷಿ ಹಂಚಿಕೊಂಡ ರಾಣಾ

  ಕಲಿಕೆಯ ಖುಷಿ ಹಂಚಿಕೊಂಡ ರಾಣಾ

  ಚಿತ್ರೀಕರಣದ ವೇಳೆ ರಾಜಮೌಳಿ ಅವರಿಗೆ ಮುಖಾಮುಖಿಯಾಗಿರುವ ಚಿತ್ರ ಹಂಚಿಕೊಂಡಿರುವ ನಟ ರಾಣಾ ದಗ್ಗುಬಾಟಿ, 'ಕಲಿಕೆ ಮತ್ತು ಸಂತೋಷ' ಎಂಬ ಕ್ಯಾಪ್ಷನ್ ನೀಡಿದ್ದಾರೆ. ಅತ್ಯುತ್ತಮ ಗಳಿಗೆಯಿದು ಎಂದು ಹೇಳಿದ್ದಾರೆ. ನಟಿ ಅನುಷ್ಕಾ ಶರ್ಮಾ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

  ಮಹೇಶ್ ಬಾಬು, ಅಲ್ಲು ಅರ್ಜುನ್ ಹಿಂದಿಕ್ಕಿ ದಾಖಲೆ ನಿರ್ಮಿಸಿದ ನಟ ಪ್ರಭಾಸ್ಮಹೇಶ್ ಬಾಬು, ಅಲ್ಲು ಅರ್ಜುನ್ ಹಿಂದಿಕ್ಕಿ ದಾಖಲೆ ನಿರ್ಮಿಸಿದ ನಟ ಪ್ರಭಾಸ್

  English summary
  SS Rajamouli's Bahubali: 2 The Conclusion team is celebrating the three years of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X