ಅನುಪಮಾ ಪರಮೇಶ್ವರನ್ 'ಹಾಟ್' ಅವತಾರ ; 'ಟಿಲ್ಲು ಸ್ಕ್ವೇರ್' ನಲ್ಲಿ ಹಣವೋ ಹಣ..!

''ಟಿಲ್ಲು ಸ್ಕ್ವೇರ್'' ಚಿತ್ರಕ್ಕೆ ಪಕ್ಕದ ಆಂಧ್ರದಲ್ಲಿ ಕಾದು ಕುಳಿತಿದ್ದವರು ಒಬ್ಬಿಬ್ಬರಲ್ಲ. ಯಾಕೆಂದರೆ ಇದು ''ಡಿಜೆ ಟಿಲ್ಲು'' ಚಿತ್ರದ ಸಿಕ್ವೆಲ್. ಇನ್ನೂ ಕಥಾನಾಯಕ 'ಸಿದ್ದು ಜೊನ್ನಲಗಡ್ಡ' ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ''ಟಿಲ್ಲು ಸ್ಕ್ವೇರ್'' 'ಅನುಪಮಾ ಪರಮೆಶ್ವರ್' ಅವರ ಮೊದಲ ''ಬೋಲ್ಡ್'' ವೆಂಚರ್.

ಈ ಕಾರಣಕ್ಕೆ ಮೊದಲ ದಿನ ಟಿಲ್ಲು ಸ್ಕ್ವೇರ್ ''ಹೌಸ್ ಫುಲ್'' ಆಗುವುದು ಖಚಿತ ಅನ್ನುವ ಭವಿಷ್ಯವಾಣಿ ಕೇಳಿ ಬಂದಿತ್ತು. ಚಿತ್ರದ ನಿರ್ಮಾಪಕರಲ್ಲಿಯೂ ಕೂಡ ಗೆಲ್ಲುವ ವಿಶ್ವಾಸ ಇತ್ತು. ಆ ವಿಶ್ವಾಸಕ್ಕೆ ಧಕ್ಕೆ ಉಂಟಾಗಿಲ್ಲ, ಕೇಳಿ ಬಂದ ಭವಿಷ್ಯವಾಣಿ ಕೂಡ ಸುಳ್ಳಾಗಲಿಲ್ಲ ಅನ್ನುವುದು ಈ ಕ್ಷಣದ ವಿಶೇಷ.

Tillu Square Day 1 Box Office Collection

ಹೌದು, ''ಟಿಲ್ಲು ಸ್ಕ್ವೇರ್'' ಚಿತ್ರಕ್ಕೆ ಭವ್ಯವಾದ ''ಸ್ವಾಗತ'' ಸಿಕ್ಕಿದೆ. ಹೆಚ್ಚು ಕಡಿಮೆ ''1250''ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ನಿನ್ನೆ ತೆರೆಗೆ ಬಂದ ಟಿಲ್ಲು ಸ್ಕ್ವೇರ್ ಸಿನಿಮಾ ಮೊದಲ ದಿನ ''23 ಕೋಟಿ''ಯನ್ನ ಗಳಿಸಿದೆ. ಆ ಪೈಕಿ ಭಾರತದ ಪಾಲು ''12 ಕೋಟಿ 09 ಲಕ್ಷ''. ಮಿಕ್ಕಿದ ಹಣ ಬಂದಿದ್ದು ಹೊರದೇಶಗಳಿಂದ.

ಇನ್ನೂ ಟಿಲ್ಲು ಸ್ಕ್ವೇರ್ ಸಿನಿಮಾ ''ಕರ್ನಾಟಕ''ದಲ್ಲಿಯೂ ಕೂಡ ಬಿಡುಗಡೆಯಾಗಿದೆ. ಅದು ''150 ಸ್ಕ್ರೀನ್'' ಗಳಲ್ಲಿ. ಈ 150 ಸ್ಕ್ರೀನ್ ಗಳಿಂದ ನಿರ್ಮಾಪಕರಿಗೆ ''ಕರ್ನಾಟಕ'' ಕೊಟ್ಟ ''ಕಾಣಿಕೆ'' ಭರ್ತಿ ''ಒಂದು ಕೋಟಿ''. ನಿನ್ನೆಯ ಪ್ರತಿಕ್ರಿಯೆಯಿಂದ ಇಂದು ಕೂಡ ಬೆಂಗಳೂರಿನಲ್ಲಿ ಚಿತ್ರ ಅಲ್ಲಲ್ಲಿ ''ಹೌಸ್ ಫುಲ್'' ಆಗಿದೆ. ಘಂಟೆ ಉರುಳಿದಂತೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಬೆಂಗಳೂರಿಗರು ಬಂದು ಚಿತ್ರವನ್ನ ನೋಡುವ ಭರವಸೆ ಕೂಡ ಚಿತ್ರತಂಡಕ್ಕೆ ಇದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ನಾಳೆಯ ''ನಾಲ್ಕು ಆಟ''ದ ಪ್ರದರ್ಶನದ ಟಿಕೆಟ್ ''ಸೋಲ್ಡ್ ಔಟ್'' ಆಗಿವೆ.

Tillu Square Day 1 Box Office Collection

ಇನ್ನೂ ಬಿಡುಗಡೆಗೂ ಮುನ್ನವೇ, ಟಿಲ್ಲು ಸ್ಕ್ವೇರ್ ಸಿನಿಮಾ ಭರ್ಜರಿ ''ವ್ಯಾಪಾರ''ವನ್ನೂ ಮಾಡಿದೆ. ಹೈದ್ರಾಬಾದ್ ನಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಈ ಸಿನಿಮಾದ 'ನಿಜಾಮ್' ಥಿಯೇಟ್ರಿಕಲ್ ರೈಟ್ಸ್ '8 ಕೋಟಿ' ರೂಪಾಯಿಗೆ ಮತ್ತು 'ಆಂಧ್ರ' ರೈಟ್ಸ್ '14 ಕೋಟಿ' ರೂಪಾಯಿಗೆ ಮಾರಾಟವಾಗಿದೆ. ಇನ್ನೂ ತೆಲುಗು ರಾಜ್ಯದಲ್ಲಿ ''22 ಕೋಟಿ'ಯನ್ನ ಚಿತ್ರ ಆಗಲೇ ಕೊಳ್ಳೆ ಹೊಡೆದಿದೆ. 'ಕರ್ನಾಟಕ'ದಲ್ಲಿ ಈ ಚಿತ್ರದ ಹಕ್ಕುಗಳನ್ನ '2 ಕೋಟಿ' ರೂಪಾಯಿಗೆ ಖರೀದಿಸಲಾಗಿದೆ ಅನ್ನುವ ಸುದ್ದಿಯೂ ಇದೆ. ಉಳಿದಂತೆ ಸಪ್ತಸಾಗರದಾಚೆಯ ವ್ಯಾಪಾರ ವಹಿವಾಟು '4 ಕೋಟಿ' ರೂಪಾಯಿಗೆ ಮುಕ್ತಾಯವಾಯಿತು ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಕೂಡಿ ಕಳೆದು ಲೆಕ್ಕ ಹಾಕಿದರೆ, ಚಿತ್ರ ಬಿಡುಗಡೆಗೆ ಮುನ್ನವೇ 28 ಕೋಟಿ ರೂಪಾಯಿಯನ್ನ ಚಿತ್ರ ಗಳಿಸಿದೆ ಅನ್ನುವುದು ತೆಲುಗು ಉದ್ಯಮದವರ ವಾದ.

Tillu Square Day 1 Box Office Collection

ಈ '28 ಕೋಟಿ'ಗೆ ಈಗ ಇನ್ನೂ '23 ಕೋಟಿ' ಬಂದು ಸೇರಿಕೊಂಡಿದೆ. ಹೀಗಾಗಿ ಚಿತ್ರಕ್ಕೆ ಬಂಡವಾಳ ಹೂಡಿದ 'ನಿರ್ಮಾಪಕರು' ಹಾಗೂ ಟಿಲ್ಲು ಸ್ಕ್ವೇರ್ ಚಿತ್ರವನ್ನ 'ನಂಬಿಕೊಂಡವರು' 'ಸೇಫ್ ಝೋನ್' ನಲ್ಲಿದ್ದಾರೆ ಎನ್ನಲು ಅಡ್ಡಿ ಇಲ್ಲ. ಯಾಕೆಂದರೆ ಚಿತ್ರಕ್ಕೆ ಖರ್ಚಾಗಿದ್ದು '40 ಕೋಟಿ' ಮಾತ್ರ ಅನ್ನುವ ಲೆಕ್ಕಾಚಾರವನ್ನ ಹೈದ್ರಾಬಾದ್ ನ ಸಿನಿ ಪಂಡಿತರು ನೀಡುತ್ತಿದ್ದಾರೆ

ಒಟ್ನಲ್ಲಿ ಟಿಲ್ಲು ಸ್ಕ್ವೇರ್ ಚಿತ್ರಕ್ಕೆ ಎಲ್ಲೆಡೆ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ 23 ಕೋಟಿಯನ್ನ ಚಿತ್ರ ಗಳಿಸಿದೆ. ಸೋಮವಾರದ ನಂತರವೂ ಇದೇ 'ಮ್ಯಾಜಿಕ್' ಮುಂದುವರೆದರೆ ನಿರ್ಮಾಪಕರಿಗೆ 'ಕುಬೇರ ವರ' ಪ್ರಾಪ್ತವಾಗಲಿದೆ.

More from Filmibeat

English summary
Siddhu Jonnalagadda and Anupama Parameswaran's latest release, Tillu Square, is minting money at the global box office on Day 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X