twitter
    For Quick Alerts
    ALLOW NOTIFICATIONS  
    For Daily Alerts

    Tollywood: ಟಾಲಿವುಡ್ ಸ್ಟಾರ್ ನಟರ ಕಾರು ನಿಲ್ಲಿಸಿ ದಂಡ ಹಾಕಿದ ಸಂಚಾರಿ ಪೋಲಿಸರು: ಕಾರಣವೇನು?

    |

    ಕಾನೂನು ಯಾರಿಗೆ ಆದರೂ ಒಂದೇ . ಅವರು ಜನಸಾಮಾನ್ಯರೇ ಆಗಿರಲಿ. ಇಲ್ಲಾ ಸೆಲೆಬ್ರೆಟಿಗಳು, ರಾಜಕಾರಣಿಗಳು ಶ್ರೀಮಂತರೇ ಆಗಿರಲಿ ಕಾನೂನೂ ಎಲ್ಲರಿಗೂ ಒಂದೇ. ಇದಕ್ಕೆ ಉದಾಹರಣೆ ಎಂಬಂತಿದೆ ಈ ಸ್ಟೋರಿ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ಟ್ರಾಫಿಕ್ ಪೊಲೀಸರು ಬ್ಲ್ಯಾಕ್ ಟಿಂಟ್ (ಬ್ಲ್ಯಾಕ್ ಫಿಲ್ಮ್) ಉಲ್ಲಂಘನೆ ಮಾಡಿದವರ ಭೇಟೆಗಾಗಿ ಬಲೆ ಬೀಸಿದ್ದಾರೆ. ಈ ಸಂದರ್ಭದಲ್ಲಿ ಜನಸಾಮಾನ್ಯರಿಂದ ಹಿಡಿದು ಸ್ಟಾರ್ ಸೆಲೆಬ್ರೆಟಿಗಳ ಕಾರುಗಳ ಬ್ಲ್ಯಾಕ್ ಟಿಂಟ್ ಅನ್ನು ತೆಗೆದು ಫೈನ್ ಹಾಕಿದ್ದಾರೆ.

    ಹೈದರಾಬಾದ್‌ನ ಜುಬಿಲಿ ಹಿಲ್ಸ್‌ ರಸ್ತೆಯಲ್ಲಿ ಕಾರ್ಯಚರಣೆಯಲ್ಲಿ ನಿರತರಾಗಿದ್ದ ಸಂಚಾರಿ ಪೋಲಿಸರು ಟಾಲಿವುಡ್‌ನ ಹೆಸರಾಂತ ನಟರುಗಳಾದ ಅಲ್ಲು ಅರ್ಜುನ್, ಕಲ್ಯಾಣ್ ರಾಮ್, ಜೂ.ಎನ್‌ಟಿಆರ್ ಕಾರುಗಳ ವಿಂಡೋಗಳಿಂದ ಟಿಂಟೆಡ್ ಕವರ್ ಅನ್ನು ತೆಗೆದುಹಾಕಿದ್ದಾರೆ. ಹಾಗೇ ಫೈನ್ ಕೂಡ ಹಾಕಿದ್ದಾರೆ ಅನ್ನೋದು ತಿಳಿದುಬಂದಿದೆ. ಟಾಲಿವುಡ್ ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಕಾರನ್ನು ಸಹ ಸಂಚಾರ ಪೊಲೀಸರು ತಡೆದಿದ್ದಾರೆ.

    'RRR' ಸಿನಿಮಾ ಬಿಟ್ಟುಬಿಡುವ ಯೋಚನೆ ಮಾಡಿದ್ದ ಜೂ ಎನ್‌ಟಿಆರ್: ಕಾರಣ?'RRR' ಸಿನಿಮಾ ಬಿಟ್ಟುಬಿಡುವ ಯೋಚನೆ ಮಾಡಿದ್ದ ಜೂ ಎನ್‌ಟಿಆರ್: ಕಾರಣ?

    ಹಾಗೇ ಕಾರಿನ ಕಿಟಕಿಗಳಲ್ಲಿ ಇದ್ದ ಬ್ಲ್ಯಾಕ್ ಟಿಂಟ್ ಅನ್ನು ತೆಗೆದಿದ್ದಾರೆ. ಜೂನಿಯರ್ ಎನ್ ಟಿಆರ್ ಚಾಲಕನ ಜೊತೆಗೆ ಅವರ ಮಗ ಹಾಗೂ ಮತ್ತೊಬ್ಬ ವ್ಯಕ್ತಿ ಕೂಡ ಕಾರಿನಲ್ಲಿದ್ದರು ಎಂದು ತಿಳಿದು ಬಂದಿದೆ. ನಟ ಜೂನಿಯರ್ ಎನ್‌ಟಿಆರ್‌ಗೆ ಸೇರಿದ ಕಾರಿನಲ್ಲಿ ಟಿಂಟೆಡ್ ಗ್ಲಾಸ್ ಇದ್ದ ಕಾರಣಕ್ಕೆ ಫೈನ್ ಹಾಕಲಾಗಿದೆ ಎಂಬ ವರದಿಗಳು ತಿಳಿಸಿವೆ.

    Tinted film on car window Cases against Tollywood actors

    ಟ್ರಾಫಿಕ್ ಪೊಲೀಸರು ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 36 ರಲ್ಲಿ ನಟರಿಗೆ ಸೇರಿದ ಎರಡು ರೇಂಜ್ ರೋವರ್ ಕಾರುಗಳ ಬ್ಲ್ಯಾಕ್ ಟಿಂಟ್‌ಗಳನ್ನು ತೆಗೆದು ಹಾಕಿದ್ದಾರೆ. ಜೂ. ಎನ್‌ಟಿಆರ್ ಕಾರಿನ ಜೊತೆಗೆ ಅಲ್ಲು ಅರ್ಜುನ್ ಅವರ ರೇಂಜ್ ರೋವರ್ ಕಾರು, ಕಲ್ಯಾಣ್ ರಾಮ್ ಅವರ ಬಿಎಮ್‌ಡಬ್ಲ್ಯೂ ಕಾರು ಮತ್ತು ಇನ್ನೂ ಸ್ಟಾರ್ ನಟರ ಕಾರುಗಳನ್ನು ತಡೆ ಹಿಡಿದು ಬ್ಲ್ಯಾಕ್ ಟಿಂಟ್ ಅನ್ನು ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.

    Tinted film on car window Cases against Tollywood actors

    ಮೋಟಾರು ವಾಹನಗಳ ಕಾಯಿದೆ 1989 ರ ಅಡಿಯಲ್ಲಿ, 2012 ರಲ್ಲಿ ಸರ್ವೋಚ್ಚ ನ್ಯಾಯಾಲಯವು ವಿಂಡೋಶೀಲ್ಡ್‌ಗಳು ಮತ್ತು ವಾಹನಗಳ ಕಿಟಕಿಗಳ ಮೇಲೆ ಟಿಂಟೆಡ್ ಗ್ಲಾಸ್ ಅಥವಾ ಸನ್ ಫಿಲ್ಮ್ ಅನ್ನು ಬಳಸುವುದನ್ನು ನಿಷೇಧಿಸಿತು, ಈ ನಿಬಂಧನೆಯ ಅಡಿಯಲ್ಲಿ, ಮೋಟಾರು ವಾಹನ ಕಾಯ್ದೆ ಪ್ರತಿ ಮೋಟಾರು ವಾಹನದ ಮುಂಭಾಗದ ವಿಂಡೋಸ್ಕ್ರೀನ್ ಮತ್ತು ಹಿಂಭಾಗದ ಕಿಟಕಿಗಳ ಮೇಲೆ ಯಾವುದೇ ಟಿಂಟ್‌ಗಳು ಇರುವಂತಿಲ್ಲ ಎಂದಿದೆ. ಆದರೆ, ಸಾಮಾನ್ಯವಾಗಿ ಸೆಲೆಬ್ರೆಟಿಗಳು ತಮ್ಮ ಅಭಿಮಾನಿಗಳಿಂದ ಮರೆಮಾಚಲು ಕಾರುಗಳಲ್ಲಿ ಸನ್ ಗ್ಲಾಸ್ ಬಳಸುತ್ತಾರೆ.

    Tinted film on car window Cases against Tollywood actors

    ವಾಸ್ತವವಾಗಿ, ಕಾರಿನ ವಿಂಡೋ ಗ್ಲಾಸ್ ಮೇಲೆ ಬ್ಲ್ಯಾಕ್ ಫಿಲ್ಮ್‌ಗಳನ್ನು ಬಳಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಸೆಲೆಬ್ರಿಟಿಗಳನ್ನು ಹೊರತುಪಡಿಸಿ ಝಡ್ ಪ್ಲಸ್ ಕೆಟಗರಿ ಭದ್ರತೆ ಹೊಂದಿರುವ ಯಾರೂ ತಮ್ಮ ವಾಹನಗಳಲ್ಲಿ ಕಪ್ಪು ಚಿತ್ರಗಳನ್ನು ಬಳಸಬಾರದು. ಮೋಟಾರು ವಾಹನ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ಹೊರಗಿನಿಂದ ನೋಡಿದಾಗ ಕಾರಿನ ಒಳಗೆ ಇದ್ದವರು ಕಾಣಿಸಬೇಕು. ದೇಶಾದ್ಯಂತ ನಾಲ್ಕು ಚಕ್ರದ ವಾಹನಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ಡಾರ್ಕ್ ಟಿಂಟ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.

    English summary
    The traffic police booked cases for ‘black film’ violation and removed the tinted film from the windows of cars of Tollywood actors Allu Arjun and Kalyan Ram at Jubilee Hills.
    Monday, March 28, 2022, 10:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X