ಅಲ್ಲು ಅರ್ಜುನ್ ಸಹೋದರನ ಮದುವೆ ನಿಶ್ಚಯ; ಅಲ್ಲು ಫ್ಯಾಮಿಲಿಯಲ್ಲಿ ಮದುವೆ ಕಳೆ

ತೆಲುಗು ನಟ ಅಲ್ಲು ಅರ್ಜುನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅಲ್ಲು ಶಿರೀಶ್‌ ಮದುವೆ ಮಾತುಕತೆ ನಡೆದಿದ್ದು ನಿಶ್ಚಿತಾರ್ಥ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅಲ್ಲಿ ಶಿರೀಶ್ ಮಾಡಿರುವ ಪೋಸ್ಟ್ ಹಂಚಿಕೊಂಡು ಸಹೋದರ ಅಲ್ಲು ಅರ್ಜುನ್ ಶುಭ ಕೋರಿದ್ದಾರೆ. ಶಿರೀಶ್ ಕೂಡ ಕೆಲ ಸಿನಿಮಾಗಳಲ್ಲಿ ನಟಿಸಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಸೋದರಳಿಯ ಅಲ್ಲು ಶಿರಿಶ್ ಮದುವೆ ವಿಚಾರ ಇದೀಗ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಪ್ಯಾರಿಸ್‌ನಲ್ಲಿರುವ ಐಫಿಲ್ ಟವರ್ ಎದುರು ತಾನು ಮದುವೆ ಆಗುತ್ತಿರುವ ಯುವತಿ ನೈನಿಕಾ ಕೈ ಹಿಡಿದು ಶಿರೀಶ್ ಪೋಸ್ ಕೊಟ್ಟಿದ್ದಾರೆ. ಅಕ್ಟೋಬರ್ 31ರಂದು ಇಬ್ಬರ ಮದುವೆ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.

"ಇಂದು, ನನ್ನ ತಾತ ಅಲ್ಲು ರಾಮಲಿಂಗಯ್ಯ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನನ್ನ ಹೃದಯಕ್ಕೆ ಹತ್ತಿರವಾದ ಸುದ್ದಿಯನ್ನು ನಾನು ನಿಮಗೆ ಹೇಳುತ್ತಿದ್ದೇನೆ. ನೈನಿಕಾ ಅವರೊಂದಿಗಿನ ನನ್ನ ನಿಶ್ಚಿತಾರ್ಥ ನಡೆದಿದೆ. ನನ್ನ ಅಜ್ಜಿ ಇತ್ತೀಚೆಗೆ ನಿಧನರಾದರು. ಅವರು ಯಾವಾಗಲೂ ನನ್ನ ಮದುವೆಯನ್ನು ನೋಡಲು ಬಯಸುತ್ತಿದ್ದರು. ಅವರು ಈಗ ಎಲ್ಲಿದ್ದರೂ ನಮ್ಮನ್ನು ಆಶೀರ್ವದಿಸುತ್ತಾರೆ. ನಮ್ಮ ಕುಟುಂಬಗಳು ನಮ್ಮ ಪ್ರೀತಿಯನ್ನು ಸ್ವೀಕರಿಸಿದ್ದಾರೆ" ಎಂದು ಶಿರೀಶ್ ಪೋಸ್ಟ್ ಮಾಡಿದ್ದಾರೆ.

Tollywood Actor Allu Shirish Announces Engagement with Nainika

ಈ ಪೋಸ್ಟ್ ಶೇರ್ ಮಾಡಿ "ಹೊಸ ಆರಂಭ" ಎಂದು ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ. 1990ರಲ್ಲಿ ಬಂದಿದ್ದ 'ಪ್ರತಿಬಂಧ್' ಚಿತ್ರದಲ್ಲಿ ಶಿರೀಶ್ ಬಾಲನಟನಾಗಿ ಕಾಣಿಸಿಕೊಂಡಿದ್ದರು. 2013ರಲ್ಲಿ ತೆರೆಗೆ ಬಂದ 'ಗೌರವಂ' ಹೀರೊ ಆಗಿ ನಟಿಸಿದ ಮೊದಲ ಸಿನಿಮಾ. ಬಳಿಕ 'ಕೊತ್ತ ಜಂಟ', 'ಶ್ರೀರಸ್ತು ಶುಭಮಸ್ತು', 'ಒಕ ಕ್ಷಣಂ', 'ಬಡ್ಡಿ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಹೀರೊ ಆಗಿ ಮಿಂಚಿದ್ದಾರೆ. ಆದರೆ ದೊಡ್ಡ ಬ್ರೇಕ್ ಸಿಗಲಿಲ್ಲ.

ತಂದೆ ಅಲ್ಲು ಅರವಿಂದ್ ದೊಡ್ಡ ನಿರ್ಮಾಪಕರು. ಗೀತಾ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಶಿರೀಶ್ ಕೈಹಿಡಿಯುತ್ತಿರುವ ಯುವತಿ ನೈನಿಕಾ ಹೈದರಾಬಾದ್ ಮೂಲದ ಉದ್ಯಮಿ ಪುತ್ರಿ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಕುಟುಂಬಕ್ಕೆ ಬಹಳ ಆಪ್ತ ಎನ್ನುವ ಮಾತುಗಳು ಕೇಳಿಬರ್ತಿದೆ. ಆಕೆ ಮುಂದೆ ನಿಂತು ಈ ಮದುವೆ ಮಾತುಕತೆ ನಡೆಸಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. ಶೀಘ್ರದಲ್ಲೇ ನೈನಿಕಾ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಅಲ್ಲು ಅರ್ಜುನ್ ಮಾಸ್ ಹೀರೊ ಆಗಿ ಅಬ್ಬರಿಸುತ್ತಿದ್ದಾರೆ. ಆದರೆ ಶಿರೀಶ್ ಆ ಸಾಹಸ ಮಾಡಲಿಲ್ಲ. ಸಣ್ಣ ಪುಟ್ಟ ಸಿನಿಮಾಗಳಲ್ಲಿ ಮಾತ್ರ ನಟಿಸಿದರು. ದೊಡ್ಡ ಸಿನಿಮಾ ಮಾಡಿ ಗೆಲ್ಲುವ ಹಠಕ್ಕೆ ಬೀಳಲಿಲ್ಲ. ಮುಂದಿನ ದಿನಗಳಲ್ಲಿ ನಟನೆಯಲ್ಲಿ ಮುಂದುವರೆಯುತ್ತಾರಾ? ಅಥವಾ ತಮ್ಮದೇ ಗೀತಾ ಆರ್ಟ್ಸ್ ಬ್ಯಾನರ್ ಜವಾಬ್ದಾರಿ ವಹಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಇತ್ತೀಚಿನ ದಿನಗಳಲ್ಲಿ ಮೆಗಾ ಹಾಗೂ ಅಲ್ಲು ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಶಿರೀಶ್ ಮದುವೆ ನಿಶ್ಚಯವಾಗಿರುವ ಬಗ್ಗೆ ಮೆಗಾ ಫ್ಯಾಮಿಲಿ ಸ್ಟಾರ್ಸ್ ಪ್ರತಿಕ್ರಿಯಿಸಿಲ್ಲ. ಅಲ್ಲು ರಾಮಲಿಂಗಯ್ಯ ತೆಲುಗಿ ಖ್ಯಾತ ಹಾಸ್ಯನಟ. ಅವರ ಮಗಳು ಸುರೇಖಾ ಅವರನ್ನು ನಟ ಚಿರಂಜೀವಿ ಮದುವೆ ಆಗಿದ್ದಾರೆ. ಸುರೇಖಾ ಸಹೋದರ ಅಲ್ಲು ಅರವಿಂದ್ ಮಕ್ಕಳು ಅಲ್ಲು ಅರ್ಜುನ್ ಹಾಗೂ ಅಲ್ಲು ಶಿರೀಶ್.

More from Filmibeat

English summary
Allu Shirish and Nainika’s Engagement Officially Announced
Read more about: allu arjun tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X