For Quick Alerts
  ALLOW NOTIFICATIONS  
  For Daily Alerts

  Jr.NTRಗೆ ಕೊರೊನಾ ನೆಗೆಟಿವ್: ಕೋವಿಡ್ 19ಅನ್ನು ಗಂಭೀರವಾಗಿ ಪರಿಗಣಿಸಿ ಎಂದ ನಟ

  |

  ತೆಲುಗು ಸಿನಿಮಾರಂಗದ ಖ್ಯಾತ ನಟ ಜ್ಯೂ.ಎನ್ ಟಿ ಆರ್ ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಕೋವಿಡ್ ನೆಗೆಟಿವ್ ವರದಿ ಬಂದಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಜ್ಯೂ.ಎನ್ ಟಿ ಆರ್ ನೆಗೆಟಿವ್ ವರದಿ ಬಂದಿದೆ ಎಂದು ಹೇಳಲು ಸಂತೋಷವಾಗುತ್ತೆ. ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

  ಈ ಬಗ್ಗೆ ಟ್ವೀಟ್ ಮಾಡಿರುವ ಜ್ಯೂ.ಎನ್ ಟಿ ಆರ್, 'ನನಗೆ ಕೋವಿಡ್ 19 ನೆಗೆಟಿವ್ ವರದಿ ಬಂದಿದೆ ಎಂದು ಹೇಳಲು ಸಂತೋಷವಾಗುತ್ತೆ. ಕಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರವೀಣ್ ಕುಲಕರ್ಣಿ ಮತ್ತು ನನ್ನ ಸೋದರ ಸಂಬಂಧಿ ಡಾ.ವೀರು ಮತ್ತು ಟೆನೆಟ್ ಡಯಾಗ್ನೋಸ್ಟಿಕ್ಸ್ ಅವರಿಗೆ ಧನ್ಯವಾದಗಳು. ಅದ್ಭುತವಾಗಿ ಆರೈಕೆ ಮಾಡಿದ್ದಾರೆ' ಎಂದು ಹೇಳಿದ್ದಾರೆ.

  ಎನ್‌ಟಿಆರ್ 31ನೇ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ಪಡೆದ ಸಂಭಾವನೆ ಇಷ್ಟೇನಾ?ಎನ್‌ಟಿಆರ್ 31ನೇ ಚಿತ್ರಕ್ಕಾಗಿ ಪ್ರಶಾಂತ್ ನೀಲ್ ಪಡೆದ ಸಂಭಾವನೆ ಇಷ್ಟೇನಾ?

  ಜೊತೆಗೆ ಕೊರೊನಾವನ್ನು ಗಂಭೀರವಾಗಿ ಪರಿಗಣಸಬೇಕಾಗಿದೆ ಎಂದಿದ್ದಾರೆ. 'ಉತ್ತಮ ಕಾಳಜಿ ಮತ್ತು ಸಕಾರಾತ್ಮಕ ಮನಸ್ಸಿನಿಂದ ಕೊರೊನಾ ಸೋಲಿಸ ಬಹುದು. ಕೊರೊನಾ ವಿರುದ್ಧ ಹೋರಾಟಕ್ಕೆ ನಿಮ್ಮ ವಿಲ್ ಪವರ್ ದೊಡ್ಡ ಅಸ್ತ್ರ' ಎಂದಿದ್ದಾರೆ.

  ಸದ್ಯ ಚೇತರಿಸಿಕೊಳ್ಳುತ್ತಿರುವ ಜ್ಯೂ.ಎನ್ ಟಿ ಆರ್ ಕೊರೊನಾ ಸೋಂಕು ದೃಢಪಟ್ಟ ತಕ್ಷಣ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಕ್ವಾರಂಟೈನ್ ನಲ್ಲೇ ಹುಟ್ಟುಹಬ್ಬ ಕೂಡ ಬಂದಿತ್ತು. ಆದರೆ ಹುಟ್ಟುಹಬ್ಬ ಆಚರಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

  ಮನೆಯಲ್ಲೇ ಇರಿ ಅದೇ ನೀವು ನನಗೆ ಕೊಡುವ ದೊಡ್ಡ ಉಡುಗೊರೆ ಎಂದು ಹೇಳಿದ್ದರು. ಜೊತೆಗೆ ಹುಟ್ಟುಹಬ್ಬದ ವಿಶೇಷವಾಗಿ ಆರ್ ಆರ್ ಆರ್ ಸಿನಿಮಾತಂಡ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದರು.

  ಕೊರೊನಾ ಪಾಸಿಟಿವ್ ಬಂದ ಬಳಿಕ ಟ್ವೀಟ್ ಮಾಡಿದ್ದ ಜ್ಯೂ.ಎನ್ ಟಿ ಆರ್

  ತೆಲುಗಿನಲ್ಲಿ ಪ್ರಶಾಂತ್ ನೀಲ್ ಗೆ ಸಿಕ್ತಿದೆ ಕೋಟಿ ಕೋಟಿ ಸಂಭಾವನೆ | Filmibeat Kannada

  'ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಆತಂಕ ಪಡುವ ಅಗತ್ಯವಿಲ್ಲ. ನಾನು ಆರಾಮಾಗಿದ್ದೇನೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದು, ನಾನು ಮತ್ತು ನನ್ನ ಕುಟುಂಬ ಐಸೋಲೆಟ್ ಆಗಿದ್ದೇವೆ. ದಯವಿಟ್ಟು ನನ್ನ ಸಂಪರ್ಕಕ್ಕೆ ಬಂದಿದ್ದವರು ಕೂಡಲೇ ಪರೀಕ್ಷಿಸಿಕೊಳ್ಳಿ' ಎಂದು ಹೇಳಿದ್ದರು.

  English summary
  Tollywood Actor Jr.NTR tests Negative for Corona. Says Covid 19 needs to be taken very seriously.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X