ಮತ್ತೊಂದು ಪುಟ್ಟ ಕಂದಮ್ಮನ ಜೀವ ಉಳಿಸಿದ ಮಹೇಶ್ ಬಾಬು
ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್ ಮಹೇಶ್ ಬಾಬು ತೆರೆಮೇಲೆ ಮಾತ್ರ ಹೀರೋ ಆಗಿ ಉಳಿದಿಲ್ಲ. ರಿಯಲ್ ಲೈಫ್‌ನಲ್ಲೂ ನಿಜವಾದ 'ಹೀರೋ' ಎನಿಸಿಕೊಂಡಿದ್ದಾರೆ. ಸಿನಿಮಾ, ಕುಟುಂಬ, ಮಕ್ಕಳು ಹಾಗೂ ಎಂಜಾಯ್ ಅಂತ ಎಷ್ಟೇ ಬ್ಯುಸಿಯಿದ್ದರೂ ಸಮಾಜಮುಖಿ ಕೆಲಸಗಳಿಗೂ ಅಷ್ಟೇ ಸಮಯ ಮೀಸಲಿಟ್ಟಿರುವ ನಟ.
ಅನಾರೋಗ್ಯದಿಂದ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿರುವ ಪುಟ್ಟ ಪುಟ್ಟ ಮಕ್ಕಳು ಅನೇಕರಿದ್ದಾರೆ. ಇಂತಹ ಮಕ್ಕಳ ಆರೋಗ್ಯ ವಿಚಾರದಲ್ಲಿ ಮಹೇಶ್ ಬಾಬು ಬಹಳ ಸೂಕ್ಷ್ಮವಾಗಿ ಗಮನ ಹರಿಸುವ ಕೆಲಸ ಮಾಡ್ತಿದ್ದಾರೆ. ಇದೀಗ, ಅನಾರೋಗ್ಯದಿಂದ ಅಪಾಯದಲ್ಲಿ ಮಗುವಿನ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿರುವ ಘಟನೆ ವರದಿಯಾಗಿದೆ. ಮುಂದೆ ಓದಿ...

ಭಾರ್ಗವಿ ಬಾಳಿಗೆ ಆಸರೆಯಾದ ಪ್ರಿನ್ಸ್
ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನ ಶಸ್ತ್ರ ಚಿಕಿತ್ಸೆಗೆ ನಟ ಮಹೇಶ್ ಬಾಬು ನೆರವು ನೀಡಿದ್ದಾರೆ. ಪ್ರಿನ್ಸ್ ಸಹಾಯದಿಂದ ಅಪಾಯದ ಅಂಚಿನಲ್ಲಿದ್ದ ಮಗು ಈಗ ಆರೋಗ್ಯವಾಗಿ ಪೋಷಕರ ಮಡಿಲು ಸೇರಿದೆ. ಪುಟ್ಟ ಕಂದಮ್ಮನ ಆಪರೇಷನ್ (ವಿಎಸ್ಡಿ ಮತ್ತು ಪಿಡಿಎ ಶಸ್ತ್ರಚಿಕಿತ್ಸೆ) ಯಶಸ್ವಿಯಾಗಿ ಮುಗಿದಿರುವ ಸಂತಸವನ್ನು ಮಹೇಶ್ ಬಾಬು ಪತ್ನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಸ್‌ಮಸ್ ವಿಶೇಷದಲ್ಲಿ ಸಾರ್ಥಕ ಭಾವನೆ
ಇದಕ್ಕೂ ಮುಂಚೆ ಡಿಸೆಂಬರ್ ತಿಂಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಉಮಾ ಎಂಬ ಪುಟ್ಟ ಕಂದಮ್ಮನಿಗೆ ಶಸ್ತ್ರಿ ಚಿಕಿತ್ಸೆ ಮಾಡಿಸಲಾಗಿತ್ತು. ಈ ಮಗುವು ಅಪಾಯದಿಂದ ಪಾರಾಗಿತ್ತು. ಈ ವೇಳೆಯೂ ನಮ್ರತಾ ಪೋಸ್ಟ್ ಹಾಕಿ ಸಂತಸ ಹಂಚಿಕೊಂಡಿದ್ದರು.

ನವೆಂಬರ್ ತಿಂಗಳಲ್ಲಿ ಒಂದು ಘಟನೆ
ನವೆಂಬರ್ ತಿಂಗಳಲ್ಲಿ ಇಂತಹದ್ದ ಘಟನೆ ವರದಿಯಾಗಿದೆ. ತನುಶ್ರೀ ಎಂಬ ಪುಟ್ಟ ಮಗುವಿನ ಶಸ್ತ್ರ ಚಿಕಿತ್ಸೆಗೆ ಮಹೇಶ್ ಬಾಬು ನೆರವು ನೀಡಿದ್ದರು. ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಆ ಮಗು ಸಂಪೂರ್ಣವಾಗಿ ಚೇತರಿಕೆ ಕಂಡು ಪೋಷಕರ ಮುಖದಲ್ಲಿ ಸಂತಸ ತಂದಿತ್ತು ಎಂದು ನಮ್ರತಾ ತಿಳಿಸಿದ್ದರು.
Recommended Video

ಸರ್ಕಾರು ವಾರಿ ಪಾಟ ಚಿತ್ರದಲ್ಲಿ ಪ್ರಿನ್ಸ್
ಲಾಕ್‌ಡೌನ್ ನಂತರ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರೀಕರಣ ಆರಂಭವಾಗಿತ್ತು. ದುಬೈನಲ್ಲಿ ಸಿನಿಮಾ ಶೂಟಿಂಗ್ ಮಾಡಿ ಬಂದಿದ್ದರು. ನಟಿ ಕೀರ್ತಿ ಸುರೇಶ್ ಸಹ ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇದರ ಜೊತೆಗೆ 'ಮೇಜರ್' ಎಂಬ ಸಿನಿಮಾವನ್ನು ಮಹೇಶ್ ಬಾಬು ನಿರ್ಮಿಸುತ್ತಿದ್ದಾರೆ.


Click it and Unblock the Notifications











