ಮಹೇಶ್ ಬಾಬುಗೆ ಶಸ್ತ್ರ ಚಿಕಿತ್ಸೆ: 3 ತಿಂಗಳು ಸಂಪೂರ್ಣ ವಿಶ್ರಾಂತಿ
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕುಟುಂಬದ ಜೊತೆ ಯು ಎಸ್ ಎ ಪ್ರವಾಸ ಕೈಗೊಂಡಿದ್ದಾರೆ. ಅಂದ್ಹಾಗೆ ಮಹೇಶ್ ಬಾಬು ಜಾಲಿ ಟ್ರಿಪ್ ಗೆ ಹೋಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿರುವ ಪ್ರಿನ್ಸ್ ಯು ಎಸ್ ಎಯಲ್ಲಿ ಮೊಣಕಾಲಿನ ಸರ್ಜರಿಗೆ ಒಳಗಾಗಲಿದ್ದಾರಂತೆ.
'ಸರಿಲೇರು ನೀಕೆವ್ವರು' ಸಿನಿಮಾ ಸಕ್ಸಸ್ ನ ಖುಷಿಯಲ್ಲಿದ್ದ ಮಹೇಶ್ ಬಾಬು ದಿಢೀರನೆ ಸರ್ಜರಿಗೆ ಒಳಗಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅಂದ್ಹಾಗೆ ಮಹೇಶ್ ಬಾಬು ಕಳೆದ 7 ವರ್ಷಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. 2014ರಲ್ಲಿ ಆಗಡು ಸಿನಿಮಾ ಶೂಟಿಂಗ್ ಸಮಯದಲ್ಲಿ ಮಹೇಶ್ ಬಾಬು ಕಾಲಿಗೆ ಪೆಟ್ಟಾಗಿತ್ತು.

ಕರ್ನಾಟಕದಲ್ಲಿ ಗಾಯಗೊಂಡಿದ್ದ ಮಹೇಶ್ ಬಾಬು
ಕರ್ನಾಟಕದ ಬಳ್ಳಾರಿಯಲ್ಲಿ ಆಗಡು ಚಿತ್ರದ ಟೈಟಲ್ ಟ್ರ್ಯಾಕ್ ಚಿತ್ರೀಕರಣ ವೇಳೆ ಮೊಣಕಾಲಿಗೆ ತೀವ್ರ ಪೆಟ್ಟಾಗಿತ್ತು. ಅಂದಿನಿಂದ ನೋವಿನಲ್ಲಿ ಬಳಲುತ್ತಿದ್ದ ಮಹೇಶ್ ಈಗ ಚಿಕಿತ್ಸೆಗೆ ಒಳಗಾಗಿದ್ದಾರೆ. ಬ್ಯಾಕು ಟು ಬ್ಯಾಕ್ ಚಿತ್ರೀಕರಣದ ಕಾರಣ ಮಹೇಶ್ ಚಿಕಿತ್ಸೆಯನ್ನು ಮುಂದೂಡುತ್ತಲೆ ಬಂದಿದ್ದರಂತೆ.

ಸ್ಪೈಡರ್ ಸಮಯದಲ್ಲಿ ಚಿಕಿತ್ಸೆ ಆಗಬೇಕಿತ್ತು
ಈ ಹಿಂದೆ ಸ್ಪೈಡರ್ ಸಿನಿಮಾ ನಂತರ ಚಿಕಿತ್ಸೆಗೆ ಒಳಗಾಗಬೇಕಿತ್ತಂತೆ. ಆದರೆ ದೀರ್ಘಕಾಲ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಮತ್ತೆ ಚಿಕಿತ್ಸೆಯನ್ನು ಮುಂದೂಡಿದ್ದಾರೆ. ಆದರೀಗ ಇತ್ತೀಚಿಗೆ ಮೊಣಕಾಲು ನೋವು ಜಾಸ್ತಿ ಆದ ಕಾರಣ ಮತ್ತು ಸದ್ಯ ಸರಿಲೇರು ನೀಕೆವ್ವರು ಸಿನಿಮಾದ ಎಲ್ಲಾ ಕೆಲಸಗಳನ್ನು ಮುಗಿಸಿರುವ ಮಹೇಶ್ ಯು ಎಸ್ ಎಗೆ ತೆರಳಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಶಸ್ತ್ರ ಚಿಕಿತ್ಸೆ
ಸದ್ಯ ಕುಟುಂಬದ ಜೊತೆ ಯು ಎಸ್ ಎ ಪ್ರವಾಸ ಕೈಕೊಂಡಿರುವ ಮಹೇಶ್ ಈ ತಿಂಗಳ ಕೊನೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರಂತೆ. ಯಾವ ಆಸ್ಪತ್ರೆ ಯಾವ ದಿನ ಎನ್ನುವ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

3 ರಿಂದ 5 ತಿಂಗಳು ರೆಸ್ಟ್
ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ದೀರ್ಘಾವದಿ ರೆಸ್ಟ್ ಮಾಡಬೇಕೆನ್ನುವ ಕಾರಣಕ್ಕೆ ಮಹೇಶ್ ಶಸ್ತ್ರ ಚಿಕಿತ್ಸೆಯನ್ನು ಮುಂದೂಡುತ್ತಲೆ ಬಂದಿದ್ದರು. ಆದರೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗಲೆ ಬೇಕಾಗಿದೆ. ಚಿಕಿತ್ಸೆ ನಂತರ ಮೂರರಿಂದ ಐದು ತಿಂಗಳು ಸಂಪೂರ್ಣ ರೆಸ್ಟ್ ನಲ್ಲಿ ಇರಲಿದ್ದಾರೆ. ಆ ನಂತರ ವಂಶಿ ಪೈಡಿಪಲ್ಲಿ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹರ್ಶಿ ಚಿತ್ರದ ನಿರ್ದೇಶಕರ ಜೊತೆ ಮತ್ತೆ ಸಿನಿಮಾ ಮಾಡಲಿದ್ದಾರೆ.


Click it and Unblock the Notifications