For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಮುಖಂಡನ ಮಗಳ ಜೊತೆ ನಟ ಮಂಚು ಮನೋಜ್ 2ನೇ ಮದುವೆ?

  |

  ತೆಲುಗು ನಟ ಮಂಚು ಮನೋಜ್ 2ನೇ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ತಂದೆ ಮೋಹನ್ ಬಾಬು ಹಾದಿಯಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಿರಿಮಗ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಸದ್ದು ಮಾಡಲು ಸಿದ್ಧತೆ ನಡೆಸಿದ್ದಾರೆ. ಇಂತಹ ಹೊತ್ತಲ್ಲೇ ಮನೋಜ್ 2ನೇ ಮದುವೆ ಸುದ್ದಿ ಕೇಳಿಬರ್ತಿದೆ. 2015ರಲ್ಲಿ ಪ್ರಣತಿ ರೆಡ್ಡಿ ಜೊತೆ ಹಸೆಮಣೆ ಏರಿದ್ದ ಮನೋಜ್ 2019ರಲ್ಲಿ ಡೈವೋರ್ಸ್ ತೆಗೆದುಕೊಂಡು ದೂರಾಗಿದ್ದರು.

  ಮೆಗಾ Vs ಅಲ್ಲು ಫ್ಯಾಮಿಲಿ: ಸ್ಟೈಲಿಶ್ ಸ್ಟಾರ್ ಆ ನಡೆಗೆ ಪವನ್ ಕಲ್ಯಾಣ್ ಫ್ಯಾನ್ಸ್ ಗರಂ!ಮೆಗಾ Vs ಅಲ್ಲು ಫ್ಯಾಮಿಲಿ: ಸ್ಟೈಲಿಶ್ ಸ್ಟಾರ್ ಆ ನಡೆಗೆ ಪವನ್ ಕಲ್ಯಾಣ್ ಫ್ಯಾನ್ಸ್ ಗರಂ!

  2ನೇ ಮದುವೆ ಕುರಿತ ಪ್ರಶ್ನೆಗೆ ಸ್ವತಃ ನಟ ಮಂಚು ಮನೋಜ್ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದೆರಡು ವರ್ಷಗಳಿಂದ ಮೋಹನ್ ಬಾಬು ಕಿರಿಯಪುತ್ರ ಒಬ್ಬ ಯುವತಿ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಗುಸುಗುಸು ಶುರುವಾಗಿತ್ತು. ಆಕೆ ಬೇರೆ ಯಾರು ಅಲ್ಲ, ರಾಜಕೀಯ ಮುಖಂಡ ದಿವಂಗತ ಭೂಮ ನಾಗಿ ರೆಡ್ಡಿ ದಂಪತಿಯ 2ನೇ ಪುತ್ರಿ ಭೂಮಾ ಮೌನಿಕಾ ರೆಡ್ಡಿ. ನಿನ್ನೆ(ಸೆಪ್ಟೆಂಬರ್ 4) ಈ ಜೋಡಿ ಹೈದರಾಬಾದ್‌ನ ಸೀತಾಫಲ್ಮಂಡಿಯಲ್ಲಿ ನಡೆದ ಗಣೇಶ ಉತ್ಸವದ ಪೂಜೆಯಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಈ ವೇಳೆ ಮೌನಿಕಾ ರೆಡ್ಡಿ ಜೊತೆ 2ನೇ ಮದುವೆ ಬಗ್ಗೆ ಕೂಡ ಪತ್ರಕರ್ತರಿಂದ ಪ್ರಶ್ನೆ ಎದುರಾಗಿತ್ತು. ಮದುವೆ ನಮ್ಮ ವೈಯಕ್ತಿಕ ವಿಚಾರ. ಸಮಯ ಬಂದಾಗ ಖಂಡಿತವಾಗಿ ಹೇಳುತ್ತೇವೆ ಎಂದು ಮನೋಜ್ ಉತ್ತರಿಸಿದ್ದಾರೆ. ಅಲ್ಲಿಗೆ ಇಬ್ಬರು ಮದುವೆ ಆಗುವ ಖಚಿತ ಅನ್ನು ಚರ್ಚೆ ಶುರುವಾಗಿದೆ.

  ಅಂದಹಾಗೆ ಮಂಚು ಮನೋಜ್ ಹಾಗೂ ಮೌನಿಕಾ ರೆಡ್ಡಿ ಇಬ್ಬರಿಗೂ ಇದು 2ನೇ ಮದುವೆ. ಮೌನಿಕಾ ರೆಡ್ಡಿ 2016ರಲ್ಲಿ ಬೆಂಗಳೂರು ಮೂಲದ ಗಣೇಶ್ ರೆಡ್ಡಿ ಎಂಬುವವರನ್ನು ಮದುವೆ ಆಗಿದ್ದರು. ಇವರಿಗೆ 5 ವರ್ಷದ ಮಗ ಕೂಡ ಇದ್ದಾನೆ. ಆದರೆ 3 ವರ್ಷಗಳ ಹಿಂದೆ ವೈಯಕ್ತಿ ಕಾರಣಗಳಿಂದ ಡೈವೋರ್ಸ್ ತಗೆದುಕೊಂಡಿದ್ದಾರೆ. ಕೆಲ ದಿನಗಳಿಂದ ನಟ ಮನೋಜ್ ಹಾಗೂ ಮೌನಿಕಾ ಚೆನ್ನೈನ ಈಸ್ಟ್‌ ಕೋಸ್ಟ್‌ ರೋಡ್‌ನಲ್ಲಿರುವ ವಿಲ್ಲಾದಲ್ಲಿ ಒಟ್ಟಿಗೆ ಇದ್ದಾರೆ ಅನ್ನುವ ಮಾತುಗಳು ಕೇಳಿಬರ್ತಿತ್ತು. ಇನ್ನು ಮನೋಜ್ ಮಂಚು ಫ್ಯಾಮಿಲಿಯಿಂದ ದೂರಾಗಿ ಬೇರೆ ಕಡೆ ವಾಸಿಸುತ್ತಿರುವುದಾಗಿಯೂ ಟಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. ಮೌನಿಕಾ ಎದುರು ಮನೋಜ್ 3 ತಿಂಗಳ ಹಿಂದೆಯಷ್ಟೆ ಮದುವೆ ಪ್ರಪೋಜಲ್ ಇಟ್ಟಿದ್ದಾರಂತೆ. ಆಕೆ ಅದಕ್ಕೆ ಓಕೆ ಹೇಳಿಲ್ಲವಂತೆ. ಮನೋಜ್ ತಂದೆ ಮೋಹನ್ ಬಾಬುಗು ಇವರಿಬ್ಬರ ಮದುವೆ ಇಷ್ಟವಿಲ್ಲ ಎನ್ನಲಾಗುತ್ತಿದೆ.

  Tollywood Actor Manchu Manoj Reacts to Second Marriage Reports

  ಕೆಲ ವರ್ಷಗಳಿಂದ ಮಂಚು ಫ್ಯಾಮಿಲಿ ಹಾಗೂ ಭೂಮಾ ರೆಡ್ಡಿ ಫ್ಯಾಮಿಲಿ ಜೊತೆ ಆತ್ಮೀಯ ಒಡನಾಟವಿದೆ. ಇದೇ ಕಾರಣಕ್ಕೆ ಮನೋಜ್ ಹಾಗೂ ಮೌನಿಕಾ ಹತ್ತಿರವಾಗಿದ್ದಾರೆ. ಭೂಮಾ ರೆಡ್ಡಿ ಕುಟುಂಬ ಟಿಡಿಪಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದರೆ, ಸದ್ಯ ಮೋಹನ್ ಬಾಬು ವೈಸಿಪಿ ಪಕ್ಷದಲ್ಲಿದ್ದಾರೆ. ಅದೇ ಕಾರಣಕ್ಕೆ ಮೌನಿಕಾ ಜೊತೆ ಮನೋಜ್ 2ನೇ ಮದುವೆಗೆ ತಂದೆ ಒಪ್ಪುತ್ತಿಲ್ಲ ಎನ್ನುವ ವಾದವೂ ಇದೆ. ಇದು ಯಾವ ಮಟ್ಟಿಗೆ ಹೋಗಿದೆ ಎಂದರೆ ಮನೋಜ್ ತಮ್ಮ ಪಾಲಿನ ಆಸ್ತಿ ಪಾಲು ಮಾಡಿಕೊಂಡು ಬೇರೆ ಹೋಗಿ ಮೌನಿಕಾ ಕೈ ಹಿಡಿಯಲು ಮುಂದಾಗಿದ್ದಾರಂತೆ. ಸದ್ಯ ಮೋಹನ್ ಬಾಬು ಇಬ್ಬರು ಮಕ್ಕಳಿಗೂ ಆಸ್ತಿ ಭಾಗ ಮಾಡಿಕೊಡವ ಬಗ್ಗೆ ಚರ್ಚೆ ನಡೆಸ್ತಿದ್ದಾರಂತೆ. ಮನೋಜ್ ಬೇರೆ ಹೋದ ಮೇಲೆ ಮೌನಿಕಾರನ್ನು ಮದುವೆ ಆಗುವ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮನೋಜ್ 'ಅಹಂ ಬ್ರಹ್ಮಾಸ್ಮಿ' ಎನ್ನುವ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸ್ತಿದ್ದಾರೆ.

  English summary
  Tollywood Actor Manchu Manoj Reacts to Second Marriage Reports. Know More.
  Monday, September 5, 2022, 10:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X