ಬಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಸೌತ್ ಸ್ಟಾರ್ ನಾಗ ಚೈತನ್ಯ

ತೆಲುಗು ಸಿನಿಮಾರಂಗದ ಖ್ಯಾತ ನಟ ನಾಗ ಚೈತನ್ಯ ಸದ್ಯ ಬಹುನಿರೀಕ್ಷೆಯ ಲವ್ ಸ್ಟೋರಿ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದೀಗ ನಾಗ ಚೈತನ್ಯ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ತೆಲುಗು ನಟ ಬಾಲಿವುಡ್ ಸ್ಟಾರ್ ನಟನ ಜೊತೆ ತೆರೆ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹೌದು, ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಬೇಕಿತ್ತು. ಆದರೆ ವಿಜಯ್ ಸಿನಿಮಾದಿಂದ ಹೊರಬಂದಿದ್ದಾರೆ.

ಡೇಟ್ ಹೊಂದಾಣಿಕೆಯಾಗದ ಕಾರಣ ವಿಜಯ್ ಸೇತುಪತಿ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಸಿನಿಮಾತಂಡದ ಜೊತೆಗಿನ ಭಿನ್ನಾಭಿಪ್ರಾಯದಿಂದ ಸಿನಿಮಾದಿಂದ ಹೊರಬಂದಿದ್ದರು ಎಂದು ಹೇಳಲಾಗಿದೆ. ವಿಜಯ್ ಸೇತುಪತಿ ಜಾಗಕ್ಕೆ ನಟ ನಾಗ ಚೈತನ್ಯ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ನಾಗ ಚೈತನ್ಯ ಫ್ಯಾನ್ ಪೇಜ್ ಗಳಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಬಹಿರಂಗ ಪಡಿಸುವ ಸಾದ್ಯತೆ ಇದೆ.

Tollywood Actor Nag Chaitanya likely to make bollywood debut with Aamir Khans Laal Singh Chaddha

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಚಿತ್ರದಲ್ಲಿ ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. ಕರೀನಾ ಗರ್ಭಿಣಿ ಆದ ಬಳಿಕವೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಮುಗಿದ ಬಳಿಕ ಭಾವನಾತ್ಮಕವಾದ ಪೋಸ್ಟ್ ಹಾಕಿದ್ದರು.

ಲಾಲ್ ಸಿಂಗ್ ಚಡ್ಡಾ ಅಮೆರಿಕದ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್. ಈ ಸಿನಿಮಾದ ನೋಡಿ ಇಂಪ್ರೆಸ್ ಆಗಿದ್ದ ಆಮೀರ್ ಖಾನ್ ಹಿಂದಿಯಲ್ಲೂ ರಿಮೇಕ್ ಮಾಡಬೇಕು ಎಂದು ನಿರ್ಧರಿಸಿ ಹಿಂದಿಗೆ ರಿಮೇಕ್ ಮಾಡಿದ್ದಾರೆ. ಈಗಾಗಲೇ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು. ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

More from Filmibeat

English summary
Tollywood Actor Nag Chaitanya likely to make bollywood debut with Aamir Khan's Laal Singh Chaddha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X