For Quick Alerts
  ALLOW NOTIFICATIONS  
  For Daily Alerts

  ನನ್ನನ್ನು ಭೇಟಿಯಾಗಲು ಬರಬೇಡಿ: ಅಭಿಮಾನಿಗಳಲ್ಲಿ ನಟ ಬಾಲಕೃಷ್ಣ ಮನವಿ

  |

  ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಇನ್ನೊಂದೆ ದಿನ ಬಾಕಿ ಇದೆ. ಜೂನ್ 10 ಬಾಲಯ್ಯ ಜನ್ಮದಿನ. 61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಯ್ಯಗೆ ಈಗಾಗಲೇ ಅಭಿಮಾನಿಗಳಿಂದ ಶುಭಾಶಯಗಳು ಹರಿದುಬರುತ್ತಿದೆ.

  ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿರುವ ಬಾಲಯ್ಯ ಹುಟ್ಟುಹಬ್ಬವನ್ನು ಪ್ರತಿವರ್ಷ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಮತ್ತು ಈ ಬಾರಿ ಅದ್ದೂರಿ ಹುಟ್ಟುಹಬ್ಬ, ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

  ಹುಟ್ಟುಹಬ್ಬದ ಪ್ರಯುಕ್ತ ಬಾಲಯ್ಯ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇಂಥ ಕಠಿಣ ಸಮಯದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಿಲ್ಲ, ಯಾರು ಮನೆಯ ಬಳಿ ಬರಬೇಡಿ, ದೂರದಿಂದ ಶುಭಹಾರೈಸಿ ಎಂದು ಕೇಳಿಕೊಂಡಿದ್ದಾರೆ. ನಿಮ್ಮ ಕುಟುಂಬದ ಜೊತೆ ಸಮಯ ಕಳೆಯುವುದೇ ನನ್ನ ಹುಟ್ಟುಹಬ್ಬ ಆಚರಣೆ ಎಂದು ದೀರ್ಘವಾದ ಪತ್ರ ಬರೆದಿದ್ದಾರೆ.

  'ಪ್ರೀತಿಯ ಅಭಿಮಾನಿಗಳೇ, ಪ್ರತಿವರ್ಷ ಜೂನ್ 10ರಂದು ನನ್ನ ಜನ್ಮದಿನದಂದು ನನ್ನನ್ನು ಭೇಟಿ ಮಾಡುತ್ತಿದ್ರಿ, ಶುಭಾಶಯ ತಿಳಿಸುತ್ತಿದ್ರಿ ನಿಮ್ಮ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಕೊರೊನಾ ಸಮಯದಲ್ಲಿ ನನ್ನನ್ನು ಭೇಟಿ ಮಾಡಲು ಬರುವುದು ಒಳ್ಳೆಯದಲ್ಲ. ನಾನು ಇವತ್ತು ಏನಾಗಿದ್ದೇನೊ ಅದು ನಿಮ್ಮ ಪ್ರೀತಿ, ಬೆಂಬಲದಿಂದ. ನಿಮ್ಮ ಪ್ರೀತಿಗಿಂತ ಯಾವುದು ದೊಡ್ಡದಲ್ಲ.' ಎಂದಿದ್ದಾರೆ.

  'ನಿಮ್ಮ ಆರೋಗ್ಯಕ್ಕಿಂತ ಬೇರೆ ಮತ್ತೇನು ಇಲ್ಲ. ನಿಮ್ಮ ಕುಟುಂಬದ ಜೊತೆ ನೀವು ಕಳೆಯುವ ಸಂತೋಷದ ಸಮಯವೇ ನನ್ನ ಜನ್ಮ ದಿನ ಆಚರಣೆ. ಪ್ರತಿಯೊಬ್ಬ ಅಭಿಮಾನಿಯಲ್ಲೂ ಕೇಳಿಕೊಳ್ಳುತ್ತೇನೆ. ಈ ಕಠಿಣ ಸಮಯದಲ್ಲಿ ಪ್ರಾಣ ಕಳೆದುಕೊಂಡು ಅಭಿಮಾನಿಗಳಿಗೆ ನನ್ನ ಸಂತಾಪ' ಎಂದು ಬರೆದುಕೊಂಡಿದ್ದಾರೆ.

  ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಬಾಲಯ್ಯ ಸದ್ಯ ಬೊಯಪಟಿ ಶ್ರೀನು ಅವರ ಅಖಂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬೊಯಪಟಿ ಮತ್ತು ಬಾಲಯ್ಯ ಕಾಂಬಿನೇಷನ್ ಮೂರನೇ ಸಿನಿಮಾವಾಗಿದೆ. ಈ ಸಿನಿಮಾ ಜೊತೆಗೆ ಬಾಲಯ್ಯ ಸದ್ಯದಲ್ಲೇ ನಿರ್ದೇಶಕ ಗೋಪಿಚಂದ್ ಅವರ ಜೊತೆ ಹೊಸ ಸಿನಿಮಾ ಬಹಿರಂಗ ಪಡಿಸುವ ಸಾಧ್ಯತೆ ಇದೆ.

  English summary
  Tollywood Actor Nandamuri Balakrishna requests his fans not visit to him on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X