ರಶ್ಮಿಕಾ ಬಿಟ್ಟು ಹೋದ ನಿತಿನ್‌ಗೆ ಟೈಟಲ್ ಫಿಕ್ಸ್: 'ಎಕ್ಸ್ಟ್ರಾ ಆರ್ಡಿನರಿ ಮ್ಯಾನ್'ಗೆ ಶ್ರೀಲೀಲಾ ಜೋಡಿ!

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್‌ ಪ್ರಾಮಿಸಿಂಗ್ ಹೀರೊ ನಿತಿನ್ ಹೊಸ ಸಿನಿಮಾ ಹಲವು ದಿನಗಳ ಹಿಂದೆನೇ ಅನೌನ್ಸ್ ಆಗಿತ್ತು. ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗಿತ್ತು. 'ಭೀಷ್ಮ' ಸಿನಿಮಾ ನಿರ್ದೇಶಿಸಿದ್ದ ವಕ್ಕಂತಂ ವಂಶಿನೇ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ನಿತಿನ್ ಜೊತೆಯಾಗಿ ನಟಿಸಿದ್ದ 'ಭೀಷ್ಮ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮತ್ತದೇ ಜೋಡಿಯನ್ನಿಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ವಕ್ಕಂತಂ ವಂಶಿ ಮುಂದಾಗಿದ್ದರು. ಆದರೆ, ಸಿನಿಮಾಗೆ ಟೈಟಲ್ ಮಾತ್ರ ಫಿಕ್ಸ್ ಮಾಡಿರಲಿಲ್ಲ.

Tollywood Actor Nithin 32nd Movie Title announced as Extraordinary Man

ಇದೇ ವೇಳೆ ರಶ್ಮಿಕಾ ಮಂದಣ್ಣ ಸಿನಿಮಾದಿಂದ ಹೊರಗೆ ಹೋದರು. ಇದಕ್ಕೆ ನಿಖರವಾದ ಕಾರಣ ತಿಳಿಯದೇ ಹೋದರೂ, ಡೇಟ್ ಸಮಸ್ಯೆಯೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದೇ ವೇಳೆ ರಶ್ಮಿಕಾ ಮಂದಣ್ಣ ಜಾಗಕ್ಕೆ ಶ್ರೀಲೀಲಾರನ್ನು ಆಯ್ಕೆ ಮಾಡಲಾಯ್ತು. ಇಷ್ಟು ದಿನ ಟೈಟಲ್ ಅನ್ನು ಬಚ್ಚಿಟ್ಟಿಕೊಂಡಿದ್ದ ತಂಡ ರಿವೀಲ್ ಮಾಡಿದೆ. ಇದು ನಿತಿನ್ ನಟಿಸುತ್ತಿರುವ 32ನೇ ಸಿನಿಮಾ ಆಗಿದ್ದು, 'ಎಕ್ಸ್ಟ್ರಾ ಆರ್ಡಿನರಿ ಮ್ಯಾನ್' ಎಂದು ಅನೌನ್ಸ್ ಮಾಡಲಾಗಿದೆ.

ಹೀರೋ‌ ನಿತಿನ್ 32ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾದ ಒಂದೇ ಪೋಸ್ಟರ್‌ನಲ್ಲಿ ಎರಡು ಲುಕ್ ರಿವೀಲ್ ಮಾಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ನಿತಿನ್ ಗಡ್ಡ, ಕೂದಲು ಬಿಟ್ಟು ರಗಡ್ ಲುಕ್ ಕೊಟ್ಟಿದ್ದರೆ, ಮತ್ತೊಂದು ಫೋಟೋದಲ್ಲಿ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಎರಡು ಶೇಡ್‌ನಲ್ಲಿ ಹೀರೊ ಇಂಟ್ರುಡ್ಯೂಸ್ ಮಾಡಿದ್ದು, ಅಭಿಮಾನಿಗಳಿಗೆ ಕುತೂಹಲ ಮೂಡಿದೆ.

'ಎಕ್ಸ್ಟ್ರಾ ಆರ್ಡಿನರಿ ಮ್ಯಾನ್' ಔಟ್ ಅಂಡ್ ಔಟ್ ಎಂಟರ್‌ಟೈನ್ಮೆಂಟ್ ಸಿನಿಮಾ. ಈಗಾಗಲೇ ಬಹುತೇಕ 60 ಪರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಮಾಡಲಾಗಿದೆ. ಇನ್ನು, ನಿತಿನ್‌ಗೆ ಜೋಡಿಯಾಗಿ ಮತ್ತೊಬ್ಬ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ.

Tollywood Actor Nithin 32nd Movie Title announced as Extraordinary Man

ಈ ಮೊದಲು ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿರುವುದಾಗಿ ಚಿತ್ರತಂಡ ತಿಳಿಸಿತ್ತು. ನಿತಿನ್- ರಶ್ಮಿಕಾ ನಟನೆಯ 'ಭೀಷ್ಮ' ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ನಟಿಸೋದು ಕನ್ಫರ್ಮ್ ಆಗಿತ್ತು. ಸಿನಿಮಾ ಮುಹೂರ್ತ ಸಮಾರಂಭದಲ್ಲೂ ರಶ್ಮಿಕಾ ಭಾಗಿ ಆಗಿದ್ದರು. ಡೇಟ್ಸ್ ಕಾರಣದಿಂದ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.

'ಎಕ್ಸ್ಟ್ರಾ ಆರ್ಡಿನರಿ ಮ್ಯಾನ್' ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಸಿನಿಮಾಗೆ ಹಣ ಹಾಕುತ್ತಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣ ಆಗುತ್ತಿದ್ದು, ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರೆಡಿಯಾಗುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಸಿನಿಮಾ ತಂಡ ಇದೇ ವರ್ಷದ ಕೊನೆಯ ಡಿಸೆಂಬರ್ 23ಕ್ಕೆ ಬಿಡುಗಡೆಯಾಗುತ್ತಿದೆ.

More from Filmibeat

English summary
Tollywood Actor Nithin 32nd Movie Title announced as Extraordinary Man
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X