For Quick Alerts
  ALLOW NOTIFICATIONS  
  For Daily Alerts

  'ಫೇಸ್ ಬುಕ್'ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 10 ನಟರಲ್ಲಿ ದಕ್ಷಿಣ ಭಾರತದ ಏಕೈಕ ಸ್ಟಾರ್

  |

  ಟಾಲಿವುಡ್ ಹೀರೋ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಏಷ್ಯಾದ ಅತ್ಯಂತ ಸುಂದರ ಪುರುಷರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪ್ರಭಾಸ್ ಹೆಸರಿನಲ್ಲಿ ಈಗಾಗಲೇ ಅನೇಕ ದಾಖಲೆಗಳಿವೆ. ಈ ನಡುವೆ ಏಷ್ಯಾದ ಅತ್ಯಂತ ಸುಂದರ ಪುರುಷ ಸ್ಥಾನ ಸಿಕ್ಕಿರುವುದು ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಈಗ ಪ್ರಭಾಸ್ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 10 ನಟರ ಪೈಕಿ ಪ್ರಭಾಸ್ ಕೂಡ ಒಬ್ಬರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ಯಂತ ದೊಡ್ಡ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ಕೂಡ ಒಂದು. ಭಾರತೀಯರು ಹೆಚ್ಚಾಗಿ ಫೇಸ್‌ಬುಕ್‌ ಬಳಸುತ್ತಾರೆ. ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಸಾಕಷ್ಟು ಸಾಮಾಜಿಕ ಮಾಧ್ಯಮಗಳು ಸಕ್ರೀಯವಾಗುವ ಮೊದಲೇ ಫೇಸ್‌ಬುಕ್‌ ಹೆಚ್ಚು ಬಳಕೆಯಲ್ಲಿತ್ತು. ನಟ ಪ್ರಭಾಸ್ ಕೂಡ ಹೆಚ್ಚಾಗಿ ಫೇಸ್ ಬುಕ್ ಬಳಸುತ್ತಾರೆ. ಫೇಸ್‌ಬುಕ್‌ನಲ್ಲಿ ಪ್ರಭಾಸ್‌ಗೆ ಎಷ್ಟು ಫಾಲೋವರ್ಸ್ ಇದ್ದಾರೆ? ಬಾಹುಬಲಿ ಸ್ಟಾರ್ ಯಾವ ಸ್ಥಾನದಲ್ಲಿದ್ದಾರೆ? ಇಲ್ಲಿದೆ ಮಾಹಿತಿ...

  ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣದ ಏಕೈಕ ತಾರೆ

  ಹೆಚ್ಚು ಫಾಲೋವರ್ಸ್ ಹೊಂದಿದ ದಕ್ಷಿಣದ ಏಕೈಕ ತಾರೆ

  ಫೇಸ್‌ಬುಕ್‌ಅನ್ನು ಹೆಚ್ಚಾಗಿ ಬಳಸುವ ಸ್ಟಾರ್‌ಗಳಲ್ಲಿ ನಟ ಪ್ರಭಾಸ್ ಕೂಡ ಒಬ್ಬರು. ಫೇಸ್‌ಬುಕ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತದ ಟಾಪ್ 10 ನಟರ ಪಟ್ಟಿಯಲ್ಲಿ ನಟ ಪ್ರಭಾಸ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಫೇಸ್ ಬುಕ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ಜಾಗ ಪಡೆದ ಏಕೈಕ ದಕ್ಷಿಣ ಭಾರತದ ಸ್ಟಾರ್ ಎನ್ನುವ ಖ್ಯಾತಿ ಕೂಡ ಗಳಿಸಿದ್ದಾರೆ. ಅಂದಹಾಗೆ ಪ್ರಭಾಸ್ ಫೇಸ್‌ಬುಕ್‌ನಲ್ಲಿ 9ನೇ ಸ್ಥಾನ ಗಳಿಸಿದ್ದಾರೆ.

  ಮೊದಲ ಸ್ಥಾನದಲ್ಲಿ ಸಲ್ಮಾನ್ ನಂತರ ಅಕ್ಷಯ್

  ಮೊದಲ ಸ್ಥಾನದಲ್ಲಿ ಸಲ್ಮಾನ್ ನಂತರ ಅಕ್ಷಯ್

  ಮೊದಲ ಸ್ಥಾನದಲ್ಲಿ ನಟ ಸಲ್ಮಾನ್ ಖಾನ್ ಇದ್ದಾರೆ. 50.7 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಸಲ್ಮಾನ್ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು 2ನೇ ಸ್ಥಾನ ಅಕ್ಷಯ್ ಕುಮಾರ್ ಪಾಲಾಗಿದೆ. 48 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಅಕ್ಷಯ್ 2ನೇ ಸ್ಥಾನ ಪಡೆದಿದ್ದಾರೆ. 42.6 ಮಿಲಿಯನ್ ಫಾಲೋರ್ಸ್ ಪಡೆಯುವ ಮೂಲಕ ನಟ ಶಾರುಖ್ ಖಾನ್ 3ನೇ ಸ್ಥಾನದಲ್ಲಿದ್ದಾರೆ.

  9ನೇ ಸ್ಥಾನದಲ್ಲಿ ಪ್ರಭಾಸ್

  9ನೇ ಸ್ಥಾನದಲ್ಲಿ ಪ್ರಭಾಸ್

  ಉಳಿದಂತೆ 4ನೇ ಸ್ಥಾನದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, 5ನೇ ಸ್ಥಾನದಲ್ಲಿ ಕಪಿಲ್ ಶರ್ಮಾ ಮತ್ತು ಕ್ರಮವಾಗಿ ಹೃತಿಕ್ ರೋಷನ್, ಟೈಗರ್ ಶ್ರಾಫ್ ಮತ್ತು ಅಜಯ್ ದೇವಗನ್ ಇದ್ದಾರೆ. ಟಾಲಿವುಡ್ ಸ್ಟಾರ್ ಪ್ರಭಾಸ್ 24 ಮಿಲಿಯನ್ ಫಾಲೋವರ್ಸ್ ಮೂಲಕ 9ನೇ ಸ್ಥಾನದಲ್ಲಿದ್ದಾರೆ. 10ನೇ ಸ್ಥಾನದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಇದ್ದಾರೆ. 23 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಶಾಹಿದ್.

  ಫೇಸ್ ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಪ್ರಭಾಸ್ ಸಕ್ರಿಯ

  ಫೇಸ್ ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಪ್ರಭಾಸ್ ಸಕ್ರಿಯ

  ಪ್ರಭಾಸ್ ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್ ಎರಡರಲ್ಲಿ ಸಕ್ರಿಯರಾಗಿದ್ದಾರೆ. ಪ್ರಭಾಸ್ ಇತ್ತೀಚಿಗೆಷ್ಟೆ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅದಕ್ಕೂ ಮೊದಲು ಫೇಸ್ ಬುಕ್ ಮಾತ್ರ ಬಳಸುತ್ತಿದ್ದರು. ಇನ್ನು ಪ್ರಭಾಸ್ ಟ್ವಿಟ್ಟರ್‌ಗೆ ಎಂಟ್ರಿಕೊಟ್ಟಿಲ್ಲ. ಸದ್ಯ ಎರಡು ಸಾಮಾಜಿಕ ಜಾಲತಾಣಗಳನ್ನು ಮಾತ್ರ ಬಳಸುತ್ತಿರುವ ಪ್ರಭಾಸ್ ಸಿನಿಮಾ ಮತ್ತು ಉಳಿದ ವಿಚಾರಗಳ ಮಾಹಿತಿಯನ್ನು ಅಲ್ಲೇ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್

  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್

  ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿರುವ ಪ್ರಭಾಸ್ ದೇಶ-ವಿದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ನಟ. ಗಡಿಗೂ ಮೀರಿ ಮಾರುಕಟ್ಟೆ ವಿಸ್ತರಿಸಿಕೊಂಡಿರುವ ಪ್ರಭಾಸ್ ಜೊತೆ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಕಾಯುತ್ತಿದ್ದಾರೆ. ಪ್ರಭಾಸ್ ಮೇಲೆ ಹಣ ಸುರಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.

  ಸಂಕ್ರಾಂತಿಗೆ ಬರ್ತಿದೆ ರಾಧೆ ಶ್ಯಾಮ್

  ಸಂಕ್ರಾಂತಿಗೆ ಬರ್ತಿದೆ ರಾಧೆ ಶ್ಯಾಮ್

  ಪ್ರಭಾಸ್ ಬಳಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಸದ್ಯ ರಾಧೆ ಶ್ಯಾಮ್ ಸಿನಿಮಾ ಮುಗಿಸಿರುವ ಪ್ರಭಾಸ್ ಇತ್ತೀಚಿಗೆ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಬಿಡುಗಡೆ ಕುತೂಹಲಕ್ಕೆ ತೆರೆಎಳೆದಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರುತ್ತಿದೆ.

  ಪ್ರಭಾಸ್ ಬಳಿ ಇರುವ ಸಿನಿಮಾಗಳು

  ಪ್ರಭಾಸ್ ಬಳಿ ಇರುವ ಸಿನಿಮಾಗಳು

  ಈ ಸಿನಿಮಾ ಜೊತೆಗೆ ಪ್ರಭಾಸ್ ಕನ್ನಡದ ನಿರ್ದೇಶಕ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿಸಿದ್ದಾರೆ. ಇನ್ನು ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆದಿಪುರುಷ್ ಮತ್ತು ನಾಗ್ ಅಶ್ವಿನ್ ಅವರ ಇನ್ನು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಕೂಡ ನಟಿಸುತ್ತಿದ್ದು, ದೀಪಿಕಾ ಪಡುಕೋಣೆ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Tollywood Actor Prabhas, only actor from south in top 10 most followed on Facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X