ಚಿತ್ರೀಕರಣದಲ್ಲಿ ನಟ ಪ್ರಭಾಸ್: ಸಿನಿಮಾ ಸೆಟ್ಟಿಂದ ರಿವೀಲ್ ಆಯ್ತು ಭರ್ಜರಿ ಫೋಟೋ
ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮುಂದಿನ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಸಾಹೊ ಸಿನಿಮಾದಿಂದ ಭಾರಿ ನಿರಾಸೆ ಪಟ್ಟಿದ್ದ ಅಭಿಮಾನಿಗಳೀಗ ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿ ಇದ್ದಾರೆ. ಪ್ರಭಾಸ್ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶನ ಮಾಡ್ತಾರೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು.
ಕೊನೆಗೂ ಪ್ರಭಾಸ್ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಚಿತ್ರೀಕರಣದ ಮೊದಲ ದಿನದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಚಿತ್ರಕ್ಕೆ 'ಜಾನ್' ಎನ್ನುವ ಟೈಟಲ್ ಬಹುತೇಕ ಖಚಿತವಾಗಿದೆ. ಚಿತ್ರಕ್ಕೆ ರಾಧ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಪ್ರಭಾಸ್ ಮೊದಲ ದಿನದ ಫೋಟೋ ಶೇರ್ ಮಾಡಿದ್ದಾರೆ. ಕಲಾತ್ಮಕ ವರ್ಣಚಿತ್ರಗಳು ಇರುವ ಗೋಡೆಯ ಮಧ್ಯೆ, ಪಿಯಾನೋ ಮುಂದೆ ನಿಂತಿರುವ ಪ್ರಭಾಸ್ ಫೋಟೋ ವೈರಲ್ ಆಗಿದೆ. ಫೋಟೋ ಜೊತೆಗೆ ನನ್ನ ಮುಂದಿನ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದವೆ ಎಂದು ಹೇಳಲು ಸಂತೋಷವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ ಪ್ರಭಾಸೆ ಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಟಾಲಿವುಡ್ ನಲ್ಲಿ ಎಲ್ಲಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಪೂಜಾ ಈಗ ಪ್ರಭಾಸ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್ ಫೋಟೋವನ್ನು ನಟಿ ಪೂಜಾ ಹೆಗ್ಡೆ ಶೇರ್ ಮಾಡಿ "ಸೆಟ್ ನಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಜಾನ್ ಚಿತ್ರದ ಚಿತ್ರೀಕರಣ ಸದ್ಯ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಜಾನ್ ಪಕ್ಕಾ ಲವ್ ಸ್ಟೋರಿಯ ಸಿನಿಮಾವಾಗಿದೆ. ಇದು ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಯಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ.


Click it and Unblock the Notifications











