ಮಹೇಶ್​ ಬಾಬುಗೆ ರಿಯಲ್​ ಹೀರೋ ಎಂದ ಕೃತಿ ಶೆಟ್ಟಿ: ಒಳ್ಳೆ ಸ್ಕೆಚ್​​ ಎಂದ ಫ್ಯಾನ್ಸ್​

ತೆಲುಗು 'ಉಪ್ಪೇನ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕರಾವಳಿ ಬೆಡಗಿ ಕೃತಿ ಶೆಟ್ಟಿ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಕ್ಯೂಟ್​ ಸ್ಮೈಲ್​ ಮೂಲವೇ ಪ್ರೇಕ್ಷಕರ ಮನ ಗೆದ್ದ ಕೃತಿ ಇತ್ತೀಚಿಗೆ ತಿಂಗಳಿಗೆ 1 ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೇಲೆ ಅಚ್ಚರಿ ನೀಡುತ್ತಿದ್ದಾರೆ.

ಸದ್ಯ ಕನ್ನಡದ ಹುಡುಗಿ ಕೃತಿ ಶೆಟ್ಟಿಗೆ ಲಕ್​ ಕೈಕೊಟ್ಟಿದ್ದು, ಅವರು ನಟಿಸಿದ ಚಿತ್ರಗಳು ಸೋಲು ಕಾಣುತ್ತಿವೆ. ತೆಲುಗು ನಟ ರಾಮ್​ ಜೊತೆ ನಟಿಸಿದ 'ವಾರಿಯರ್'​ ಹಾಗೂ ನಿತಿನ್​ ಜೊತೆ ನಟಿಸಿದ 'ಮಚೆರ್ಲಾ ನಿಯೋಜಕವರ್ಗಮ್'​ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಕನಿಷ್ಟವೂ ಸದ್ದು ಮಾಡದೇ ಮಕಾಡೆ ಮಲಗಿದೆ. ಚಿತ್ರಗಳ ಸೋಲುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಕೃತಿ ಶೆಟ್ಟಿ ತಮ್ಮ ಮುಂದಿನ ಚಿತ್ರಗಳ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಹಿಂದಿನ ಚಿತ್ರ ಸೋಲು ಕಂಡ ಒಂದು ತಿಂಗಳ ಅಂತರದಲ್ಲೇ ಕೃತಿ ಶೆಟ್ಟಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಸಪ್ಟೆಂಬರ್​ 16ರಂದು ಬಿಡುಗಡೆಗೊಂಡಿರುವ 'ಆ ಅಮ್ಮಾಯಿ ಗುರುಂಚಿ ಮೀಕು ಚಪ್ಪಾಲಿ' ಚಿತ್ರದಲ್ಲಿ ಸುಧೀರ್​ ಬಾಬು ಜೊತೆ ಕೃತಿ ಸ್ಕ್ರೀನ್​ ಶೇರ್​ ಮಾಡಿದ್ದಾರೆ. 'ಅಮ್ಮಾಯಿ ಗುರುಂಚಿ ಮೀಕು ಚಪ್ಪಾಲಿ' ಚಿತ್ರದ ಪ್ರಚಾರದ ವೇಳೆ ಚಿತ್ರರಂಗದ ಬಗ್ಗೆ ಮಾತಾನಾಡಿದ ಕೃತಿ ಶೆಟ್ಟಿ ತಮಗೆ ಇಷ್ಟವಾದ ಹೀರೋಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

Tollywood Actress Krithi Shetty Praises Thalapathy Vijay And Mahesh Babu

ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಹಾಗೂ ತಮಿಳು ನಟ ದಳಪತಿ ವಿಜಯ್ ​ ನನ್ನ ಫೇವರಿಟ್​​ ನಟರು ಎಂದಿರುವ ಕೃತಿ ಇವರಿಬ್ಬರ ಬಗೆಗಿನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಮಹೇಶ್​ ಬಾಬು ರೀಲ್​ ಅಷ್ಟೇ ಅಲ್ಲ ರೀಯಲ್​ ಲೈಫ್​ನಲ್ಲೂ ​ ಸೂಪರ್​ ಸ್ಟಾರ್​ ಹಾಗೂ ದಳಪತಿ ವಿಜಯ್​ ಒಬ್ಬ ಮಹಾತ್ವಾಕಾಂಕ್ಷಿ ಸೂಪರ್ ಸ್ಟಾರ್​ ಎಂದು ಕೃತಿ ಶೆಟ್ಟಿ ಹಾಡಿ ಹೊಳಿದ್ದಾರೆ.

ಇನ್ನು ಕೃತಿ ಶೆಟ್ಟಿ ತಮ್ಮ ಫೇವರಿಟ್​​ ನಟರಾದ ಮಹೇಶ್​ ಬಾಬು ಹಾಗೂ ದಳಪತಿ ವಿಜಯ್​ ಅವರನ್ನು ಹೊಗಳಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ನೋಡುಗರು ಕೃತಿ ಶೆಟ್ಟಿಯ ಕಾಲು ಎಳೆದಿದ್ದಾರೆ. ಇಬ್ಬರು ಸೂಪರ್​ ಸ್ಟಾರ್​ಗಳ ಜೊತೆ ನಟಿಸಲು ಕೃತಿ ಶೆಟ್ಟಿ ಈ ಹೇಳಿಕೆ ಮೂಲಕ ಒಳ್ಳೆ ಸ್ಕೆಚ್​ ಹಾಕಿದ್ದಾರೆ ಎಂದು ಜನ ಕಮೆಂಟ್​ ಮಾಡಿದ್ದಾರೆ. ಇನ್ನು ಮೋಹನ್​ ಕೃಷ್ಣ ನಿರ್ದೇಶನದ ಸುಧೀರ್​ ಬಾಬು ಹಾಗೂ ಕೃತಿ ಶೆಟ್ಟಿ ಅಭಿನಯದ 'ಅಮ್ಮಾಯಿ ಗುರುಂಚಿ' ಮೀಕು ಚಪ್ಪಾಲಿ ಚಿತ್ರ ಸಪ್ಟೆಂಬರ್​ 16ರಂದು ಬಿಡುಗಡೆಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

More from Filmibeat

English summary
Tollywood actress Krithi Shetty praises Thalapathy Vijay and Mahesh babu in her new movie promotion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X