"ಅಲ್ಲು ಅರ್ಜುನ್, ನಿನ್ನ ಪತನ ಆರಂಭ, ಏನ್ ಮಾಡ್ಕೊತ್ತೀಯಾ ಮಾಡ್ಕೋ"; ಹಾಸ್ಯನಟನ ಸವಾಲ್

ಆಂಧ್ರ ಪ್ರದೇಶದಲ್ಲಿ ಚುನಾವಣೆ ಮುಗಿದರೂ ಆರೋಪ ಪ್ರತ್ಯಾರೋಪ ಪರ್ವ ಮುಗಿಯುತ್ತಿಲ್ಲ. ಸೋತ ವೈಸಿಪಿ ಮುಖಂಡರು ಮೈತ್ರಿ ಬಣದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಗೆದ್ದ ಮೈತ್ರಿ ಪಾಳಯದವರು ವೈಸಿಪಿಗೆ ತಿರುಗೇಟು ನೀಡುತ್ತಿದ್ದಾರೆ. ಇದ್ದೆಲ್ಲದರ ನಡುವೆ ವೈಸಿಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ ನಟ ಅಲ್ಲು ಅರ್ಜುನ್ ಟ್ರೋಲ್ ಆಗುತ್ತಿದ್ದಾರೆ.

ಈ ಬಾರಿ ಆಂಧ್ರ ಚುನಾವಣೆ ಬಹಳ ಕಳೆಗಟ್ಟಿತ್ತು. ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಸಲೇಬೇಕು ಎಂದು ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಕೈ ಜೋಡಿಸಿತ್ತು. ಪವನ್ ಕಲ್ಯಾಣ್ ಅದರ ಉಸ್ತುವಾರಿ ವಹಿಸಿಕೊಂಡಿದ್ದರು. ಎಲ್ಲರ ನಿರೀಕ್ಷೆ ಮೀರಿ ಮೈತ್ರಿ ಬಣಕ್ಕೆ ಗೆಲುವು ಸಿಕ್ಕಿದೆ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಐತಿಹಾಸಿಕ ದಾಖಲೆ ಬರೆದಿದೆ.

Tollywood Comedian kiraak rp hits back at allu arjun and his fans

21 ವಿಧಾನಸಭೆ ಹಾಗೂ 2 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜನಸೇನಾ ಪಕ್ಷ ಗೆಲುವಿ ನ ನಗೆಬೀರಿದೆ. ಕೊನೆ ಕ್ಷಣದಲ್ಲಿ ರಾಮ್‌ಚರಣ್ ಚಿಕ್ಕಪ್ಪನ ಪರ ಪ್ರಚಾರ ಮಾಡಿದ್ದರು. ಆದರೆ ಮೆಗಾ ಫ್ಯಾಮಿಲಿಯ ಅಲ್ಲು ಅರ್ಜುನ್ ಮಾತ್ರ ಪವನ್ ಕಲ್ಯಾಣ್ ಬಿಟ್ಟು ಎದುರಾಳಿ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದರು ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಜನಸೇನಾ ಪಕ್ಷವನ್ನು ಬೆಂಬಲಿಸುತ್ತಾ ಬರುತ್ತಿರುವ ಕಿರುತೆರೆ ನಟ, ಹಾಸ್ಯ ನಟ ಕಿರಾಕ್ ಆರ್‌ಪಿ ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ನಿಮ್ಮ ಕುಟುಂಬದವರನ್ನು ಬಿಟ್ಟು ನೀವು ಬೇರೆ ಪಕ್ಷದವರನ್ನು ಬೆಂಬಲಿಸಿ ತಪ್ಪು ಮಾಡಿದಿರಿ ಅಲ್ಲು ಅರ್ಜುನ್ ಎಂದು ಕಿರಾಕ್ ಆರ್‌ಪಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕಿರುತೆರೆಯ ಜಬರ್ದಸ್ತ್‌ ಶೋನಿಂದ ಅವರು ಜನಪ್ರಿಯತೆ ಸಾಧಿಸಿದರು. ತಮ್ಮ ಹೋಟೆಲ್ ಬ್ಯುಸಿನೆಸ್ ಸಹ ಆರಂಭಿಸಿದ್ದಾರೆ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಹ ಸಿಗುತ್ತಿದೆ. ಕಿರಾಕ್ ಆರ್‌ಪಿ ಹೇಳಿಕೆಗೆ ಅಲ್ಲು ಅರ್ಜುನ್ ಫ್ಯಾನ್ಸ್ ಗರಂ ಆಗಿದ್ದಾರೆ. ಅವರು ಹೋಟೆಲ್‌ಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Tollywood Comedian kiraak rp hits back at allu arjun and his fans

ಮತ್ತೊಮ್ಮೆ ಅಲ್ಲು ಅರ್ಜುನ್ ಮೇಲೆ ಗುಡುಗಿರುವ ಕಿರಾಕ್‌ ಆರ್‌ಪಿ ಕೆಂಡಾಮಂಡಲವಾಗಿದ್ದಾರೆ. "ನಾನು ಯಾರಿಗೂ ಹೆದರುವುದಿಲ್ಲ" ಎಂದು ಸ್ಪಷ್ಟಪಡಿಸಿರುವ ಹಾಸ್ಯ ನಟ ನಮ್ಮ ಕುಟುಂಬದವರ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದಿದ್ದಾರೆ. "ನಿಮ್ಮನ್ನು ಟೀಕಿಸಿದರೆ.. ನನ್ನನ್ನು ಏನು ಬೇಕಾದರೂ ಮಾಡಿ.. ಆದರೆ ನಮ್ಮ ಮನೆಯ ಹೆಣ್ಣುಮಕ್ಕಳ ತಂಟೆಗೆ ಬರಬೇಡಿ ಡಂದು ವೈಸಿಪಿ ಸರ್ಕಾರಕ್ಕೆ ಆಗ ಹೇಳಿದ್ದೆ.. ಈಗ ಅಲ್ಲು ಅರ್ಜುನ್ ಆರ್ಮಿಗೆ(ಫ್ಯಾನ್ಸ್) ಹೇಳುತ್ತಿದ್ದೇನೆ. ಅಲ್ಲು ಅರ್ಜುನ್, ನಿಮ್ಮ ಆರ್ಮಿ ಆ ಸರ್ಕಾರದಂತೆ ವರ್ತಿಸುತ್ತಿದೆ, ನಿಜವಾಗಿಯೂ ನಿಮ್ಮ ಬಳಿ ಆರ್ಮಿ ಇದ್ಯಾ..? ಅಥವಾ ನನಗೂ ಗೊತ್ತಿಲ್ಲ. ಮಹಿಳೆಯರ ತಂಟೆಗೆ ಬಂದ ಸರ್ಕಾರ ಪತನವಾಯಿತು. ನಿಮಗೂ ಅದೇ ಗತಿ" ಎಂದಿದ್ದಾರೆ.

"ಅಲ್ಲು ಅರ್ಜುನ್ ನೆನಪಿರಲಿ.. ನೀವು ಇದನ್ನು ಪ್ರೋತ್ಸಾಹಿಸುತ್ತಿದ್ದೀರಿ. ನೀವು ಅದನ್ನು ಮಾಡುತ್ತಿರುವುದರಿಂದ ನಿಮ್ಮ ಪತನ ಶುರುವಾಗಲಿದೆ. ನಾನು ಯಾರಿಗೂ ಹೆದರುವುದಿಲ್ಲ, ನಿಮ್ಮ ಹೆಸರು ಅಲ್ಲು ಅರ್ಜುನ್ ಆದರೆ ನನ್ನ ಹೆಸರು ಕಿರಾಕ್ ಆರ್‌ಪಿ. ಯಾರ ಧೈರ್ಯ ಅವರಿಗೆ ಇರುತ್ತದೆ.. ಯಾರ ಕುಟುಂಬ ಅವನದು. ಈಗಲೂ ಹೇಳುತ್ತೇನೆ.. ಆ ದಿನ ನೀನು ಮಾಡಿದ್ದು ತಪ್ಪು. ಇದು ನಿಜ ಅನಿಸಿದರೆ ನಂಬಿ.. ಇಲ್ಲವಾದರೆ ಕತ್ತೆಯ ಮಾತು ಎಂದು ಬಿಡಿ. ಮನೆಯಲ್ಲಿ ಮಹಿಳೆಯನ್ನು ಗುರಿಯಾಗಿಸುವ ಅಗತ್ಯವೇನು? ನಿಮ್ಮ ಮನೆಯಲ್ಲಿ ಮಹಿಳೆಯರು ಇಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

"ಈಗಲೂ ನಾನು ಹೇಳುತ್ತೇನೆ. ಆರ್ಮಿ ಎಂದರೆ ಜನಸೇನಾ ಕಾರ್ಯಕರ್ತರು. ಟಿಡಿಪಿ ನಾಯಕರು. ಯಾವುದೇ ಸ್ವಾರ್ಥವಿಲ್ಲದೇ ಅವರೆಲ್ಲ ನಿಂತರು. ಎಷ್ಟು ಜಗಳ.. ಎಷ್ಟು ಪೊಲೀಸ್ ಕೇಸ್.. ಇವೆಲ್ಲವನ್ನೂ ಸಹಿಸಿಕೊಂಡಿದ್ದಾರೆ. ನೀನು ಸಿನಿಮಾ ಮಾಡು.. ಪ್ಯಾನ್ ಇಂಡಿಯಾ ಸ್ಟಾರ್ ಆಗು.. ದೇಶಕ್ಕೆ ಹೆಸರು ತಗೊಂಡು ಬಾ.. ನಾವೂ ನೋಡುತ್ತೇವೆ. ನೀನು ಮಹಾ ವೀರ. ನಿಮಗೆ ಆರ್ಮಿ ಬಂತು?" ಎಂದು ಅವರು ಕೇಳಿದ್ದಾರೆ. ಕಿರಾಕ್ ಆರ್‌ಪಿ ಕಾಮೆಂಟ್ಸ್ ವೈರಲ್ ಆಗುತ್ತಿದೆ.

More from Filmibeat

English summary
Kiraak rp angry over allu arjun fans troll;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X