ಸುಂದರ ಸ್ಥಳದಲ್ಲಿ ನಿರ್ಮಾಣವಾಗುತ್ತಿದೆ ಸಮಂತಾ ದಂಪತಿಯ ದುಬಾರಿ ಫಾರ್ಮ್ ಹೌಸ್; ಯಾವುದು ಆ ಜಾಗ?

ತೆಲುಗು ಸಿನಿಮಾರಂಗದ ಖ್ಯಾತ ಜೋಡಿಗಳಲ್ಲಿ ನಾಗ ಚೈತನ್ಯ ಮತ್ತು ಸಮಂತಾ ಜೋಡಿ ಕೂಡ ಒಂದು. ಸದಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಈ ಜೋಡಿ ಇತ್ತೀಚಿಗಷ್ಟೆ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸ್ಟಾರ್ ಜೋಡಿ ಹೆಚ್ಚು ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದೆೆ. ಇದೀಗ ಅಕ್ಕಿನೇನಿ ಜೋಡಿ ಮತ್ತೊಂದು ಸುದ್ದಿ ಇಂಟ್ರಸ್ಟಿಂಗ್ ಸುದ್ದಿ ಕೇಳಿಬರುತ್ತಿದೆ.

ನಾಗ ಚೈತನ್ಯ ಮತ್ತು ಸಮಂತಾ ಜೋಡಿ ಫಾರ್ಮ್ ಹೌಸ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಂದಹಾಗೆ ಈ ಸ್ಟಾರ್ ಜೋಡಿ ಫಾರ್ಮ್ ಹೌಸ್ ಕಟ್ಟಿಸುತ್ತಿರುವುದು ಎಲ್ಲಿ ಅಂತ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಸಮಂತಾ-ನಾಗ ಚೈತನ್ಯ ಜೋಡಿ ಗೋವಾದ ಸುಂದರ ಕಡಲ ತೀರದ ಸಮೀಪದಲ್ಲಿಯೇ ಹೊಸ ಜಾಗ ಖರೀದಿ ಮಾಡಿದ್ದಾರಂತೆ. ಆ ಜಾಗದಲ್ಲಿ ಸುಂದರವಾದ ಫಾರ್ಮ್ ಹೌಸ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಈಗಾಗಲೇ ಫಾರ್ಮ್ ಹೌಸ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಗೋವಾದ ಪ್ರಸಿದ್ಧ ವಾಸ್ತುಶಿಲ್ಪ ಕಂಪನಿಯು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದೆಯಂತೆ. ಎಲ್ಲವೂ ಅಂದುಕೊಂಡ ಪ್ರಕಾರವೇ ನಿರ್ಮಾಣ ಕಾರ್ಯ ನಡೆದರೆ ಮುಂದಿನ ವರ್ಷ 2022ರ ಮಧ್ಯದಷ್ಟೊತ್ತಿಗೆ ಫಾರ್ಮ್ ಹೌಸ್ ನಿರ್ಮಾಣ ಕಾರ್ಯ ಸಂಪೂರ್ಣವಾಗುವ ನಿರೀಕ್ಷೆ ಇದೆ.

Tollywood Couple Samantha Akkineni and Naga Chaitanya building a luxury farmhouse in Goa

ಈ ಬಗ್ಗೆ ಅಕ್ಕಿನೇನಿ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇತ್ತೀಚಿಗಷ್ಟೆ ಸಮಂತಾ ಜೋಡಿ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು. ಫ್ಯಾಮಿಲಿ ಮ್ಯಾನ್-2 ವೆಬ್ ಸರಣಿ ಸಕ್ಸಸ್ ಕಂಡ ಬೆನ್ನಲ್ಲೇ ಸಮಂತಾ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದು, ಅಲ್ಲೇ ನೆಲೆಸಿರುತ್ತಾರೆ ಎನ್ನಲಾಗಿತ್ತು. ಇನ್ಮುಂದೆ ಹೆಚ್ಚಾಗಿ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಸಹ ಕೇಳಿಬಂದಿತ್ತು.

ಇದೆಲ್ಲದರ ನಡುವೆ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೂ ಕಾಳ್ಗಿಚ್ಚಿನಷ್ಟೆ ವೈರಲ್ ಆಗಿತ್ತು. ನಟಿ ಸಮಂತಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹೆಸರು ಬದಲಾಯಿಸುತ್ತಿದ್ದಂತೆ ಇಬ್ಬರ ದಾಂಪತ್ಯದ ಬಗ್ಗೆಯೇ ಅನುಮಾನ ಹುಟ್ಟುಕೊಂಡಿತ್ತು. ಸಮಂತಾ ಅಕ್ಕಿನೇನಿ ಎನ್ನುವ ಹೆಸರನ್ನು ತೆಗೆದುಹಾಕಿ ಕೇವಲ 'S' ಹೆಸರನ್ನು ಮಾತ್ರ ಇಟ್ಟುಕೊಂಡಿದ್ದಾರೆ. ಇದು ಅನೇಕರ ಅನುಮಾನಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಸಮಂತಾ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tollywood Couple Samantha Akkineni and Naga Chaitanya building a luxury farmhouse in Goa

ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸಮಂತಾ ಸದ್ಯ ಬಹುನಿರೀಕ್ಷೆಯ ಶಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಪೌರಾಣಿಕ ಸಿನಿಮಾ ಇದಾಗಿದ್ದು, ಸಮಂತಾ, ಶಕುಂತಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುಣಶೇಖರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಸಮಂತಾ ಚಿತ್ರತಂಡದ ಬಗ್ಗೆ ಭಾವುಕ ಪತ್ರ ಹಂಚಿಕೊಂಡಿದ್ದರು. ಈ ಸಿನಿಮಾ ಜೊತೆಗೆ ತಮಿಳು ಸಿನಿಮಾ ಕೂಡ ಸಮಂತಾ ಕೈಯಲ್ಲಿದೆ. ಇದಲ್ಲದೆ ಹೊಸ ಸಿನಿಮಾ ಇನ್ನು ಘೋಷಣೆ ಮಾಡಿಲ್ಲ.

ಇನ್ನು ನಾಗ ಚೈತನ್ಯ ಸದ್ಯ ಬಹುನಿರೀಕ್ಷೆಯ ಲವ್ ಸ್ಟೋರಿ ಸಿನಿಮಾ ಬಿಡುಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಮೊದಲ ಬಾರಿಗೆ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾವಾಗಿದೆ. ಈ ಸಿನಿಮಾ ಮುಂದಿನ ತಿಂಗಳು ಗಣೇಶ ಹಬ್ಬದ ದಿನ ತೆರೆಗೆ ಬರುತ್ತಿದೆ.

ಲವ್ ಸ್ಟೋರಿ ಸಿನಿಮಾ ಜೊತೆಗೆ ನಾಗ ಚೈತನ್ಯ ಹಿಂದಿ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಹಿಂದಿಯ ಚೊಚ್ಚಲ ಸಿನಿಮಾದಲ್ಲಿ ಆಮೀರ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

More from Filmibeat

English summary
Naga Chaitanya and Samantha build lavish Farmhouse in Goa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X