ಪ್ರೀತಿಸಿ ಜಾತಕ ಹೊಂದಾಣಿಕೆ ಆಗ್ತಿಲ್ಲ ಅಂತ ಕೈ ಕೊಟ್ಟಿದ್ದ ನಟ: ಕಣ್ಣೀರಲ್ಲಿ ಕೈ ತೊಳೆದ ನಟಿ ಮಧುಮಿತಾ.. ಆದರೆ..

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಯಾರಿಗೆ ಯಾರು ಜೊತೆಯಾಗುತ್ತಾರೆ ಅನ್ನೋದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಎಷ್ಟೋ ಬಾರಿ ಪ್ರೀತಿಸಿದರವರು ದೂರಾಗುತ್ತಾರೆ. ಕೆಲವೊಮ್ಮೆ ಸಾವಿರಾರು ಕಿಲೋ ಮೀಟರ್‌ ದೂರ ಇರುವವರು ಗುರುತು ಪರಿಚಯ ಇಲ್ಲದವರು ಒಂದಾಗುತ್ತಾರೆ. ಟಾಲಿವುಡ್ ಕ್ಯೂಟ್ ಕಪಲ್ ಶಿವ ಬಾಲಾಜಿ- ಮಧುಮಿತಾ ಅವರ ಮ್ಯಾರೇಜ್‌ ಸ್ಟೋರಿ ಕೂಡ ಸಖತ್ ಇಂಟ್ರೆಸ್ಟಿಂಗ್.

2004ರಲ್ಲಿ 'ಇಂಗ್ಲೀಷ್‌ಕಾರನ್' ಎನ್ನುವ ತಮಿಳು ಸಿನಿಮಾದಲ್ಲಿ ನಟ ಶಿವ ಬಾಲಾಜಿ ಹಾಗೂ ನಟಿ ಮಧುಮಿತಾ ಒಟ್ಟಿಗೆ ನಟಿಸಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಪರಿಚಯ, ಸ್ನೇಹ ಶುರುವಾಗಿತ್ತು. ನಂತರ ಅದು ಪ್ರೀತಿಯಾಗಿ ಬದಲಾಗಿತ್ತು. 2009ರಲ್ಲಿ ಜೋಡಿ ಪೋಷಕರು ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಇಬ್ಬರ ಮದುವೆ ಅಷ್ಟು ಸುಲಭವಾಗಿ ನಡೆಯಲಿಲ್ಲ. ಈ ಹಾದಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಬ್ರೇಕಪ್‌ ಕೂಡ ಆಗಿತ್ತು.

Tollywood couple Siva Balaji and Madhumitha

ಪ್ರೀತಿಸಿ ಮದುವೆ ಆಗೋಣ ಎಂದು ಇಬ್ಬರು ಮಾತನಾಡಿಕೊಂಡಿದ್ದರು. ಆದರೆ ನಂತರ ಇದ್ದಕ್ಕಿಂದಂತೆ ಶಿವ ಬಾಲಾಜಿ ಬ್ರೇಕಪ್ ಹೇಳಿಬಿಟ್ಟಿದ್ದರು. ಮಧುಮಿತಾಳನ್ನು ಮದುವೆ ಆದರೆ ತಮ್ಮ ತಾಯಿ ಸತ್ತು ಹೋಗುತ್ತಾರೆ ಎನ್ನುವ ಕಾರಣಕ್ಕೆ ಶಿವ ಬಾಲಾಜಿ ಇಂತಾದೊಂದು ನಿರ್ಧಾರ ಕೈಗೊಂಡಿದ್ದರು. ಮದುವೆ ಆಗೋಣ ಎಂದು ನಿರ್ಧರಿಸಿದ ಮೇಲೆ ಇಬ್ಬರ ಜಾತಕ ತೋರಿಸಿದಾಗ ಅದು ಹೊಂದಾಣಿಕೆ ಆಗಿರಲಿಲ್ಲವಂತೆ. ಹಾಗಾಗಿ ಇಬ್ಬರೂ ದೂರಾಗಿದ್ದರು.

ಒಂದೂವರೆ ವರ್ಷದ ನಂತರ ಮತ್ತೆ ಇಬ್ಬರು ಒಂದಾಗಿದ್ದಾರೆ. ಕೊನೆಗೆ ಮನೆಯವರನ್ನು, ಮಧುಮಿತಾಳನ್ನು ಒಪ್ಪಿಸಿ ಶಿವ ಬಾಲಾಜಿ ಮದುವೆ ಆಗಿದ್ದಾರೆ. ಇದೇ ವಿಚಾರವಾಗಿ ಗಂಡ ಹೆಂಡತಿ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಇತ್ತೀಚೆಗೆ ಮಾತನಾಡಿದ್ದಾರೆ. ಮಧುಮಿತಾ ಮಾತನಾಡುತ್ತಾ "ನಾವಿಬ್ಬರು ಬರೋಬ್ಬರಿ 4 ವರ್ಷ ಪ್ರೀತಿಸಿದ್ದೆವು. ಆ ನಂತರ ಮದುವೆ ಆಗಬೇಕು ಎಂದು ನಿರ್ಧರಿಸಿದೆವು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಬಾಲಾಜಿ ಫೋನ್ ಮಾಡಿ 'ನಮ್ಮಿಬ್ಬರಿಗೂ ಸೆಟ್ ಆಗುವುದಿಲ್ಲ. ಜಾತಕ ಹೊಂದಾಣಿಕೆ ಆಗ್ತಿಲ್ಲ, ನಾವು ಮದುವೆ ಆದರೆ ನಮ್ಮ ತಾಯಿ ಸಾಯುತ್ತಾರಂತೆ' ಎಂದು ಹೇಳಿದ್ದ" ಎಂದು ಭಾವುಕರಾಗಿದ್ದಾರೆ.

Tollywood couple Siva Balaji and Madhumitha

"ಆ ಕ್ಷಣ ಏನು ಮಾತನಾಡಬೇಕು ಎಂದು ಅರ್ಥವಾಗಲಿಲ್ಲ. ಓಕೆ ಎಂದು ಹೇಳಿ ಗೊಳೋ ಎಂದು ಅತ್ತುಬಿಟ್ಟೆ. ನಾವು ಫ್ರೆಂಡ್ಸ್ ಆಗಿ ಇರೋಣ ಎಂದು ಬಾಲಾಜಿ ಹೇಳಿದರು ನಾನು ಒಪ್ಪಲಿಲ್ಲ. ಕಾರಣ ಅಷ್ಟೊತ್ತಿಗಾಗಲೇ ನಾನು ಆತನನ್ನು ನನ್ನ ಗಂಡ ಎಂದು ಊಹಿಸಿಕೊಂಡಿದ್ದೆ. ನಮ್ಮ ಮನೆಯಲ್ಲಿ ಜಾತಕದ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳಲ್ಲ. ಆದರೆ ನಮ್ಮ ಅತ್ತೆ ಮನೆಯಲ್ಲಿ ಅದನ್ನೆಲ್ಲಾ ಬಹಳ ನಂಬ್ತಾರೆ. ಒಂದೂವರೆ ವರ್ಷದ ನಂತರ ಮತ್ತೆ ಇಬ್ಬರು ಸಂಪರ್ಕಕ್ಕೆ ಬಂದ್ವಿ. ಮದುವೆ ಆಗೋಣ ಎಂದು ಹೇಳ್ದ"

"ಮತ್ತೆ ಜಾತಕಗಳು ತೋರಿಸಿದಾಗ ಚೆನ್ನಾಗಿದೆ ಎಂದು ಹೇಳಿದರು. ಆಗ ನಮ್ಮ ಮದುವೆ ನಡೆಯಿತು" ಎಂದು ಹೇಳಿದ್ದಾರೆ. ಇನ್ನು ಶಿವ ಬಾಲಾಜಿ ಮಾತನಾಡುತ್ತಾ "ಮಧುಮಿತಾಗೆ ಬ್ರೇಕಪ್ ಹೇಳಿದ ಬಳಿಕ ತುಂಬಾ ನೋವು ಅನುಭವಿಸಿದೆ. ಹೀಗೆ ಮಾಡುವುದು ಸರಿ ಅಲ್ಲ ಎನಿಸಿತ್ತು. ಒಂದು ವರ್ಷ ನೋಡ್ತಿನಿ. ಅಲ್ಲಿಯವರೆಗೆ ಆಕೆ ಬೇರೆಯವರನ್ನು ಮದುವೆ ಆಗ್ದೇ ಇದ್ರೆ ಹೇಗಾದರೂ ಮಾಡಿ ಮನೆಯಲ್ಲಿ ಎಲ್ಲರನ್ನು ಒಪ್ಪಿಸೋಣ ಎಂದುಕೊಂಡೆ"

"ಎಷ್ಟೇ ಸಂಬಂಧಗಳನ್ನು ತೋರಿಸಿದರೂ ಆಕೆ ರಿಜೆಕ್ಟ್ ಮಾಡ್ತಿದ್ದಾಳೆ ಅಂತ ಗೊತ್ತಾಯಿತು. ಅದೇ ಸಮಯದಲ್ಲಿ ಮಾ(Movie Artists Association) ಚುನಾವಣೆ ನಡೀತು. ಈ ವೇಳೆ ಇಬ್ಬರು ಮತ್ತೆ ಭೇಟಿ ಆದ್ವಿ. ಒಂದು ದಿನ'ಯಾಕೆ ನನ್ನ ಜೀವನಕ್ಕೆ ಮತ್ತೆ ಬರ್ತಿದ್ದೀಯಾ' ಅನ್ನುವ ಮೆಸೇಜ್ ನನ್ನ ಮೊಬೈಲ್‌ಗೆ ಬಂದಿತ್ತು. ಆ ನಂತರ ಭೇಟಿ ಆಗಿ ಮಾತನಾಡಿದೆವು. ಮನೆಯಲ್ಲಿ ಒಪ್ಪಿಸಿ ಮದುವೆಗೆ ಮಾಡಿಕೊಂಡೆವು" ಎಂದಿದ್ದಾರೆ.

ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಮಧುಮಿತಾ 'ಸಂದಡೇ ಸಂದಡಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಕನ್ನಡದ 'ಹುಚ್ಚನ ಮದ್ವೇಲಿ ಉಂಡವನೇ ಜಾಣ' ಹಾಗೂ 'ನಾನು ನೀನು ಜೋಡಿ' ಎನ್ನುವ ಸಿನಿಮಾಗಳಲ್ಲಿ ಮಧುಮಿತಾ ಬಣ್ಣ ಹಚ್ಚಿದ್ದರು.

More from Filmibeat

English summary
Tollywood couple Siva Balaji and Madhumitha opens up about their break up and marriage story. The couple shared the hardships of their love marriage. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X