ಡ್ರಗ್ಸ್ ಪ್ರಕರಣ: ಸಿನಿಮಾ ಸೆಲೆಬ್ರಿಟಿಗಳಿಗೆ ಕ್ಲೀನ್ ಚಿಟ್!
ಬಾಲಿವುಡ್ ಹಾಗೂ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಪ್ರಕರಣ ದೊಡ್ಡದಾಗಿ ಬೆಳಕಿಗೆ ಬರುವ ಮುನ್ನವೇ ತೆಲುಗು ಚಿತ್ರರಂಗದಲ್ಲಿ ದೊಡ್ಡ-ದೊಡ್ಡ ತಾರೆಯರೇ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.
2017ರಲ್ಲಿ ಟಾಲಿವುಡ್ ಡ್ರಗ್ಸ್ ಪ್ರಕರಣ ಹೊರಬಿದ್ದಿತ್ತು, ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ, ಬಾಹುಬಲಿ ನಟ ರಾಣಾ ದಗ್ಗುಬಾಟಿ, ನಟ ನವದೀಪ್, ತರುಣ್, ಐಟಂ ಹಾಡುಗಳಲ್ಲಿ ನಟಿಸುತ್ತಿದ್ದ ಮುಮೈತ್ ಖಾನ್, ನಟ ರವಿತೇಜ ಸಹೋದರ, ರವಿ ತೇಜ ಸೇರಿ ಹಲವರ ಹೆಸರು ಕೇಳಿ ಬಂದಿತ್ತು. ಕೆಲವರ ಬಂಧನವೂ ಆಗಿತ್ತು.
ಆ ಬಳಿಕ ಇದೇ ವರ್ಷದ ಆರಂಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಹ ಈ ಪ್ರಕರಣವನ್ನು ವಿಚಾರಣೆ ಮಾಡಿತು. ಪುರಿ ಜಗನ್ನಾಥ್, ಚಾರ್ಮಿ ಸೇರಿದಂತೆ 2017ರ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಹಲವರನ್ನು ಇಡಿ ಮರು ವಿಚಾರಣೆ ನಡೆಸಿತು. ಅವರೆಲ್ಲರಿಗೂ ಇಡಿ ಈಗ ಕ್ಲೀನ್ ಚಿಟ್ ನೀಡಿದೆ.

ಇತ್ತೀಚೆಗೆ ಕೆಲ್ವಿನ್ ಎಂಬ ಡ್ರಗ್ಸ್ ಪೆಡ್ಲರ್ ಅನ್ನು ತೆಲಂಗಾಣದಲ್ಲಿ ಬಂಧಿಸಲಾಗಿತ್ತು. ಹಾಗಾಗಿ ಆತನೊಂದಿಗೆ ಟಾಲಿವುಡ್ ಸೆಲೆಬ್ರಿಟಿಗಳೊಂದಿಗೆ ನಂಟು ಇರಬುದೆಂಬ ಗುಮಾನಿಯಿಂದ ವಿಚಾರಣೆ ನಡೆಸಲಾಗಿತ್ತು. ಅಲ್ಲದೆ ಕೆಲವು ಸೆಲೆಬ್ರಿಟಿಗಳು ಬ್ಯಾಂಕ್ ಖಾತೆಗಳನ್ನು ಸಹ ಇಡಿ ಪರಿಶೀಲನೆ ನಡೆಸಿತು. ಆದರೆ ಈಗ ಇಡಿಯು ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದ ಎಲ್ಲ ಸೆಲೆಬ್ರಿಟಿಗಳಿಗೆ ಕ್ಲೀನ್ ಚಿಟ್ ನೀಡಿದೆ.
ಇನ್ನು ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಪ್ರಕರಣ ಇನ್ನೂ ಚಾಲ್ತಿಯಲ್ಲಿದ್ದು, ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧನಕ್ಕೆ ಒಳಪಟ್ಟಿದ್ದ ಬಹುತೇಕರು ಇದೀಗ ಜಾಮೀನಿನ ಮೇಲೆ ಹೊರಗಿದ್ದಾರೆ.
ಬಾಲಿವುಡ್‌ನಲ್ಲಿ ಸುಶಾಂತ್ ಸಿಂಗ್ ಅಕಾಲಿಕ ಮರಣದ ತನಿಖೆ ನಡೆವ ವೇಳೆ ಡ್ರಗ್ಸ್ ಪ್ರಕರಣ ಹೊರಬಿದ್ದಿತ್ತು. ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ದೊಡ್ಡ-ದೊಡ್ಡ ಸೆಲೆಬ್ರಿಟಿಗಳ ಹೆಸರುಗಳು ಕೇಳಿಬಂದವು. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಅರ್ಜುನ್ ರಾಮ್‌ಪಾಲ್, ಸಾರಾ ಅಲಿ ಖಾನ್, ಮಹೇಶ್ ಭಟ್, ಕರಣ್ ಜೋಹರ್ ಇನ್ನೂ ಹಲವರನ್ನು ವಿಚಾರಣೆ ಮಾಡಲಾಯ್ತು. ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರನನ್ನು ಬಂಧಿಸಿ ಹಲವು ದಿನ ಜೈಲಿನಲ್ಲಿ ಇಡಲಾಗಿತ್ತು.


Click it and Unblock the Notifications











