ಖ್ಯಾತ ಹಾಸ್ಯ ನಟ ಸುನಿಲ್ ವರ್ಮ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ಚಿಕಿತ್ಸೆ
ಟಾಲಿವುಡ್ ನ ಖ್ಯಾತ ಹಾಸ್ಯ ನಟ ಸುನಿಲ್ ವರ್ಮ ತೀವ್ರ ಅನಾರೋಗ್ಯದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸುನಿಲ್ ಅವರನ್ನು ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೈದರಾಬಾದ್ ನ ಗಚಿಬೌಲಿ ಆಸ್ಪತ್ರೆಗೆ ದಾಖಲಾಗಿದ್ದು ಕುಟುಂಬದವರು ಜೊತೆಯಲ್ಲಿ ಇದ್ದಾರೆ.
ಸುನಿಲ್ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರಂತೆ. ಜ್ವರ ಕಮ್ಮಿ ಆಗಲೆಂದು ಆ್ಯಂಟಿ ಬಯೋಟಿಕ್ಸ್ ಅನ್ನು ಅತೀ ಹೆಚ್ಚು ತೆಗೆದುಕೊಂಡ ಕಾರಣ ಶ್ವಾಸಕೋಶದ ಸೋಂಕು ಆಗಿದೆ ಎಂದು ಹೇಳಲಾಗಿದೆ. ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಪ್ರಮೋಷನ್ ನಲ್ಲಿ ಭಾಗಿಯಾಗಬೇಕೆಂದು ಮತ್ತು ಮುಂದಿನ ಸಿನಿಮಾದ ಚಿತ್ರೀಕರಣ ಇರುವ ಕಾರಣ ಬೇಗ ಗುಣಮುಖರಾಗಬೇಕೆಂದು ಹೆಚ್ಚು ಆ್ಯಂಟಿ ಬಯೋಟಿಕ್ಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಸುನಿಲ್ ಚೇತರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಇನ್ನು ಕೆಲವು ದಿನಗಳು ಆಸ್ಪತ್ರೆಯಲ್ಲಿ ಇರಬೇಕಿದ್ದು, ನಂತರ ಒಂದಿಷ್ಟು ದಿನಗಳು ರೆಸ್ಟ್ ಮಾಡಬೇಕೆಂದು ಎಂದು ವೈದ್ಯರು ಹೇಳಿದ್ದಾರಂತೆ.

ಹಾಸ್ಯನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಸುನಿಲ್ ನಂತರ ನಾಯಕನಾಗಿಯು ಮಿಂಚಿದ್ದಾರೆ. ಇತ್ತೀಚಿಗೆ ನಾಯಕನ ಪಾತ್ರಕ್ಕೆ ಬೇಡಿಕೆ ಕಮ್ಮಿ ಆದ ಕಾರಣ ಹಾಸ್ಯ ಕಲಾವಿದನಾಗಿ ಮುಂದುವರೆದಿದ್ದಾರೆ. ಅನೇಕ ವರ್ಷಗಳಿಂದ ಹಾಸ್ಯ ಕಲಾವಿದನಾಗಿ ಅಭಿಮಾನಿಗಳನ್ನು ರಂಜಿಸುತ್ತ ಬಂದಿದ್ದಾರೆ. ಇತ್ತೀಚಿಗೆ ತೆರೆ ಕಂಡು ಉತ್ತಮ ಪ್ರದರ್ಶನ ಕಾಣುತ್ತಿರುವ ಅಲಾ ವೈಕುಂಟಪುರಂಲೋ ಸಿನಿಮಾದಲ್ಲೂ ಮಿಂಚಿದ್ದರು.


Click it and Unblock the Notifications











