For Quick Alerts
  ALLOW NOTIFICATIONS  
  For Daily Alerts

  ಮೆಗಾ Vs ಅಲ್ಲು ಫ್ಯಾಮಿಲಿ: ಕೊನೆಗೂ ಕ್ಲಾರಿಟಿ ಕೊಟ್ಟ ಅಲ್ಲು ಅರ್ಜುನ್ ಅಪ್ಪ!

  |

  ಟಾಲಿವುಡ್‌ನಲ್ಲಿ ಅಲ್ಲು ಫ್ಯಾಮಿಲಿ ಬೇರೆ ಅಲ್ಲ. ಮೆಗಾ ಫ್ಯಾಮಿಲಿ ಬೇರೆ ಅಲ್ಲ. ಎರಡೂ ಕುಟುಂಬಗಳು ಒಂದೇ ನಾಣ್ಯದ ಎರಡು ಮುಖಗಳಂತೆ. ಮೆಗಾ ಫ್ಯಾಮಿಲಿ ಸಿನಿಮಾ ರಿಲೀಸ್ ಆದಾಗ ಅಲ್ಲು ಫ್ಯಾನ್ಸ್ ಸಪೋರ್ಟ್ ಮಾಡೋದು. ಅಲ್ಲು ಅರ್ಜುನ್ ಸಿನಿಮಾ ರಿಲೀಸ್ ಆದಾಗ ಮೆಗಾ ಫ್ಯಾಮಿಲಿ ಸಪೋರ್ಟ್ ಮಾಡುತ್ತಿತ್ತು.

  ಇಷ್ಟು ಅನ್ಯೋನ್ಯವಾಗಿದ್ದ ಎರಡು ಕುಟುಂಬಗಳು ಈಗ್ಯಾಕೋ ಮುನಿಸಿಕೊಂಡಿವೆ ಅನ್ನೋದು ಟಾಲಿವುಡ್‌ನಲ್ಲಿ ಹರಿದಾಡುತ್ತಿರೋ ಮಾತು. ಎರಡೂ ಕುಟುಂಬಗಳ ಮಧ್ಯೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಏನೋ ನಡೆದಿದೆ. ಅದಕ್ಕೆ ಎರಡೂ ಕುಟುಂಬಗಳು ಒಟ್ಟಿಗೆ ಸೇರುತ್ತಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.

  ಹೆಂಡತಿ ಪಕ್ಕ ಇರುವಾಗಲೇ ಬೇರೊಬ್ಬಳ ಜೊತೆ ಏನ್ ಮಾಡ್ತಿದ್ದೀರಾ ಅಲ್ಲು ಅರ್ಜುನ್? ವಿಡಿಯೋ ವೈರಲ್!ಹೆಂಡತಿ ಪಕ್ಕ ಇರುವಾಗಲೇ ಬೇರೊಬ್ಬಳ ಜೊತೆ ಏನ್ ಮಾಡ್ತಿದ್ದೀರಾ ಅಲ್ಲು ಅರ್ಜುನ್? ವಿಡಿಯೋ ವೈರಲ್!

  ಇನ್ನೊಂದು ಕಡೆ ರಾಮ್‌ ಚರಣ್ ಹಾಗೂ ಅಲ್ಲು ಅರ್ಜುನ್ ನಡುವೆ ಏನೋ ಸಮಸ್ಯೆಯಿದೆ ಎಂಬ ಗುಸುಗುಸು ಇದೆ. ಇಂತಹದ್ದೊಂದು ಸುದ್ದಿ ಹರಿದಾಡುತ್ತಿರುವಾಗಲೇ ಅಲ್ಲು ಅರವಿಂದ್ ಸ್ಪಷ್ಟನೆ ನೀಡಿದ್ದಾರೆ. ಅಲ್ಲು ಅರವಿಂದ್ ನೀಡಿದ ಹೇಳಿಕೆ ಹೊಸ ಚರ್ಚೆಯನ್ನು ಹುಟ್ಟಾಕಿದೆ. ಅಷ್ಟಕ್ಕೂ ಅಲ್ಲು ಅರವಿಂದ್ ಕೊಟ್ಟ ಉತ್ತರವೇನು? ಎರಡು ಕುಟುಂಬದ ನಡುವಿನ ಮುನಿಸಿನ ಹಿನ್ನೆಲೆಯೇನು?

  ಎರಡು ಕುಟುಂಬದ ನಡುವೆ ಏನಿದು ಮನಸ್ತಾಪ ?

  ಎರಡು ಕುಟುಂಬದ ನಡುವೆ ಏನಿದು ಮನಸ್ತಾಪ ?

  ಕೆಲವು ವರ್ಷಗಳಿಂದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅಲ್ಲು ಅರವಿಂದ್ ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿ ಬರುತ್ತಲೇ ಇದೆ. ಅದಕ್ಕೆ ಎರಡೂ ಕುಟುಂಬಗಳೂ ಪರಸ್ಪರ ಅಂತರಗಳನ್ನು ಕಾಯ್ದುಕೊಂಡಿದೆ ಎನ್ನಲಾಗಿದೆ. 'ಪುಷ್ಪ' ಹೀರೊ ಅಲ್ಲು ಅರ್ಜುನ್ ತಂದೆನೇ ಅಲ್ಲು ಅರವಿಂದ್. ಮೆಗಾಸ್ಟಾರ್ ಚಿರಂಜೀವಿಗೆ ಅಲ್ಲು ಅರವಿಂದ್ ಭಾವ ಆಗಬೇಕು. ಒಂದು ಕಾಲದಲ್ಲಿ ಈ ಜೋಡಿ ಟಾಲಿವುಡ್‌ನ ಸಕ್ಸಸ್‌ಪುಲ್ ಜೋಡಿ ಎನಿಸಿಕೊಂಡಿತ್ತು. ಅದೇ ಜೋಡಿ ಈಗ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಷ್ಟು ಮುನಿಸಿಕೊಂಡಿದೆ ಎಂಬ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

  ಅಲ್ಲು ಅರ್ಜುನ್- ರಶ್ಮಿಕಾ ಇಲ್ಲದೇ 'ಪುಷ್ಪ'-2 ಮುಹೂರ್ತ: ಕಾರಣ ಏನು?ಅಲ್ಲು ಅರ್ಜುನ್- ರಶ್ಮಿಕಾ ಇಲ್ಲದೇ 'ಪುಷ್ಪ'-2 ಮುಹೂರ್ತ: ಕಾರಣ ಏನು?

  'ಚೆಪ್ಪನು ಬ್ರದರ್' ಮುನಿಸು ಇನ್ನೂ ನಿಂತಿಲ್ಲ

  'ಚೆಪ್ಪನು ಬ್ರದರ್' ಮುನಿಸು ಇನ್ನೂ ನಿಂತಿಲ್ಲ

  ಕೆಲವು ದಿನಗಳ ಹಿಂದೆ 'ಸರೈನೋಡು' ಬ್ಲಾಕ್ ಬಸ್ಟರ್ ಕಾರ್ಯಕ್ರಮದ ವೇಳೆ ಮೆಗಾಸ್ಟಾರ್ ಅಭಿಮಾನಿಗಳು ಮೆಗಾ ಹೀರೊ ಪವನ್ ಕಲ್ಯಾಣ್ ಎಂದು ಘೋಷಣೆ ಕೂಗಿದ್ದರು. ಆಗ ವೇದಿಕೆ ಮೇಲೆ ಅಲ್ಲು ಅರ್ಜುನ್ ದಿಢೀರನೇ ಪ್ರತಿಕ್ರಿಯೆ ನೀಡಿದ್ದರು. ಮೆಗಾ ಅಭಿಮಾನಿಗಳ ಮುಂದೆ ಪವನ್ ಕಲ್ಯಾಣ್ ಬಗ್ಗೆ 'ಚೆಪ್ಪನು ಬ್ರದರ್' ಎಂದು ಹೇಳಿದ್ದರು. ಈ ಮಾತು ಮೆಗಾ ಅಭಿಮಾನಿಗಳ ಮುನಿಸಿಗೆ ಕಾರಣವಾಗಿತ್ತು. ಪವನ್ ಕಲ್ಯಾಣ್ ಪರ ಮಾತಾಡದಿದ್ದಕ್ಕೆ ಕೋಪ ನೆತ್ತಿಗೆ ಹತ್ತಿತ್ತು. ಇಲ್ಲಿಂದ ಮೆಗಾ ಹೀರೊ ಒಂದು. ಅಲ್ಲು ಅರ್ಜುನ್ ಒಂದು ಎನ್ನುವಂತೆ ಫ್ಯಾನ್ಸ್ ತಂಡ ಎರಡು ಭಾಗವಾಯ್ತು ಎಂದು ಟಾಲಿವುಡ್ ಹೇಳುತ್ತಿದೆ.

  'ಮೆಗಾ ವಾರಸುದಾರ ಯಾರು?

  'ಮೆಗಾ ವಾರಸುದಾರ ಯಾರು?

  2016ರಿಂದ ಆರಂಭ ಆಗಿದ್ದ ಈ ಫ್ಯಾನ್ಸ್ ಶೀತಲ ಸಮರ ಇನ್ನೂ ಮುಂದುವರೆದಿದೆ. ಇತ್ತೀಚೆಗೆ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ತೇಜಾ ಹಾಗೂ ಅಲ್ಲು ಅರ್ಜುನ್ ಫ್ಯಾನ್ಸ್ ಮತ್ತೆ ಮೈಮನಸ್ಸು ಶುರು ಮಾಡಿದ್ದರು. 'ಪುಷ್ಪ' ಸಿನಿಮಾ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆದಾಗ ಮೆಗಾ ವಾರಸುದಾರ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಇನ್ನೊಂದ್ಕಡೆ RRR ಗೆದ್ದಾಗ, ರಾಜಮೌಳಿಯಿಂದ ರಾಮ್‌ ಚರಣ್ ಗೆದ್ದರು ಅಂತ ಟ್ರೋಲ್ ಮಾಡಿದ್ದರು. ಇದು ಮೆಗಾ ಹಾಗೂ ಅಲ್ಲು ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು.

  ಕ್ಲಾರಿಟಿ ಕೊಟ್ಟ ಅಲ್ಲು ಅರ್ಜುನ್ ತಂದೆ

  ಕ್ಲಾರಿಟಿ ಕೊಟ್ಟ ಅಲ್ಲು ಅರ್ಜುನ್ ತಂದೆ

  ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಅರ್ಜುನ್ ಕುಟುಂಬ ಎರಡೂ ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ. ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಸಂಬಂಧ ಸರಿಯಿಲ್ಲ ಎನ್ನಲಾಗಿತ್ತು. "ಚಿರಂಜೀವಿ ಬನ್ನಿಗೆ ದೇವರ ಸಮಾನ. ಈ ಗೌರವ ಅವನ ಕೊನೆಯುಸಿರು ಇರುವವರೆಗೂ ಇರುತ್ತೆ. ಮೆಗಾ ಕುಟುಂಬದಲ್ಲಿ ಯಶಸ್ವಿ ಹೀರೊಗಳಿದ್ದಾರೆ. ದ್ವೇಷ, ಹೋರಾಟ ಏನೇ ಇದ್ದರೂ ತೆರೆಮೇಲಷ್ಟೇ. ಕುಟುಂಬ ಅಂತ ಬಂದರೆ ಎಲ್ಲರೂ ಒಂದೇ." ಎಂದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಹೇಳಿದ್ದಾರೆ.

  English summary
  Tollywood Producer Allu Aravind Clarified The Rift Between Mega And Allu Families, Know More.
  Wednesday, August 24, 2022, 10:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X