Don't Miss!
- News
"ಆಮ್ಲಜನಕ ಪೂರೈಕೆಯಲ್ಲಿ ಮೊದಲ ಆದ್ಯತೆ ಆರೋಗ್ಯ ವಲಯಕ್ಕೆ; ಸುಧಾಕರ್
- Sports
ಐಪಿಎಲ್ 2021: ಮತ್ತೊಂದು ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ ಚೇತನ್ ಸಕಾರಿಯಾ
- Education
GIC Of India Officer Scale I Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Finance
ಅಡೋಬ್ ಸಹ ಸಂಸ್ಥಾಪಕ ಚಾರ್ಲ್ಸ್ ಚಕ್ ಗೆಶ್ಕೆ ಇನ್ನಿಲ್ಲ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಲುಗಿನ ಸೂಪರ್ ಸ್ಟಾರ್ ನಿರ್ಮಾಪಕರ ಜೊತೆಗೆ ದರ್ಶನ್ ಸಿನಿಮಾ
ದರ್ಶನ್ ಅವರ ಕಾಲ್‌ಶೀಟ್‌ಗಾಗಿ ಹಲವು ನಿರ್ಮಾಪಕರು ಕಾಯುತ್ತಲಿದ್ದಾರೆ. ಆದರೆ ಎಲ್ಲ ನಿರ್ಮಾಪಕರಿಗೂ ಆ ಅವಕಾಶ ಇಲ್ಲ. ದರ್ಶನ್ ಅವರು ಕತೆಗಿಂತಲೂ ಹೆಚ್ಚು ತಮ್ಮ ಸಿನಿಮಾ ನಿರ್ಮಾಪಕರನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ!
ಇದೀಗ ಗೆಳೆಯ ಉಮಾಪತಿ ಶ್ರೀನಿವಾಸ್ ಜೊತೆಗೆ 'ರಾಬರ್ಟ್' ಸಿನಿಮಾ ಮಾಡಿರುವ ದರ್ಶನ್ ಅದರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೆ (ಫೆಬ್ರವರಿ 27) ಹೈದರಾಬಾದ್‌ನಲ್ಲಿ ರಾಬರ್ಟ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.
ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ತೆಲುಗು ನಟ ಜಗಪತಿ ಬಾಬು ಮಾತು
ಈ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದ ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಿನಿಮಾಕ್ಕೆ ಸಹಕರಿಸಿದ ಹಲವರಿಗೆ ಧನ್ಯವಾದ ಹೇಳಿದರು. ಈ ನಡುವೆಯೇ ತೆಲುಗು ನಿರ್ಮಾಪಕರೊಬ್ಬರಿಗೆ ಧನ್ಯವಾದ ತಿಳಿಸುವ ಜೊತೆಗೆ ನನ್ನ ಮುಂದಿನ ಸಿನಿಮಾ ಅವರೊಟ್ಟಿಗೆ ಎಂದರು ದರ್ಶನ್.
ನಟ ದರ್ಶನ್ ಅವರು ತೆಲುಗಿನ ಹಿಟ್ ನಿರ್ಮಾಪಕ, ದೊಡ್ಡ ನಟರೊಟ್ಟಿಗೆ ಸಿನಿಮಾ ಮಾಡಿರುವ ಬಿಎಸ್‌ಎನ್‌ವಿ ಪ್ರಸಾದ್ ಜೊತೆ ಸಿನಿಮಾ ಮಾಡುವವರಿದ್ದಾರೆ. ಇದೇ ವರ್ಷದಲ್ಲಿ ಸಿನಿಮಾ ಸೆಟ್ಟೇರಲಿದೆ. ಈ ವಿಷಯವನ್ನು ನಿನ್ನೆಯ ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ್ದಾರೆ.
ಗೆಳೆಯ ವಿನೋದ್ ಪ್ರಭಾಕರ್ ಬಗ್ಗೆ ದರ್ಶನ್ ಭಾವುಕ ಮಾತು

ತೆಲುಗಿನ ಪ್ರತಿಷ್ಠಿತ ನಿರ್ಮಾಪಕರಲ್ಲಿ ಒಬ್ಬರು
ಬಿವಿಎಸ್‌ಎನ್ ಪ್ರಸಾದ್ ಅವರ ಪೂರ್ಣ ಹೆಸರು ಬೋಗವಲ್ಲಿ ವೆಂಕಟ ಸತ್ಯನಾರಾಯಣ ಪ್ರಸಾದ್ 1980 ರ ದಶಕದಿಂದಲೂ ಸಿನಿಮಾ ಉದ್ಯಮದಲ್ಲಿ ಇರುವ ಬಿವಿಎಸ್‌ಎನ್ ಪ್ರಸಾದ್ ಅವರು ತೆಲುಗಿನ ಪ್ರತಿಷ್ಠಿತ ಸಿನಿಮಾ ನಿರ್ಮಾಪಕರುಗಳಲ್ಲಿ ಒಬ್ಬರು.

ಸ್ಟಾರ್ ಹೀರೋಗಳ ಸಿನಿಮಾ ನಿರ್ಮಿಸಿರುವ ಪ್ರಸಾದ್
ಪ್ರಭಾಸ್ ನಟನೆಯ ಛತ್ರಪತಿ, ಡಾರ್ಲಿಂಗ್, ಪವನ್ ಕಲ್ಯಾಣ್ ನಟನೆಯ ಅತ್ತಾರಿಂಟಿಕಿ ದಾರೇದಿ, ರವಿತೇಜ ನಟನೆಯ ಖತರ್ನಾಕ್, ಈ ಅಬ್ಬಾಯಿ ಚಾಲಾ ಮಂಚೋಡು, ದೇವುಡು ಚೇಸಿನ ಮನುಷುಲು, ಜೂ.ಎನ್‌ಟಿಆರ್ ನಟಿಸಿರುವ ಊಸರವಲ್ಲಿ, ನಾನ್ನಕು ಪ್ರೇಮತೊ ಇನ್ನೂ ಹಲವಾರು ಸಿನಿಮಾಗಳಲ್ಲಿ ನಿರ್ಮಿಸಿದ್ದಾರೆ ಪ್ರಸಾದ್.

ತೆಲುಗು ನಿರ್ದೇಶಕರಾ, ಕನ್ನಡದವರಾ?
ಪ್ರಸಾದ್ ಜೊತೆಗೆ ದರ್ಶನ್ ಮಾಡಲಿರುವ ಸಿನಿಮಾ ಪಕ್ಕಾ ತೆಲುಗು-ಕನ್ನಡ ಎರಡೂ ಭಾಷೆಯಲ್ಲಿ ಬಿಡುಗಡೆ ಆಗಲಿದೆ ಎಂಬುದು ಖಾಯಂ. ಸಿನಿಮಾವನ್ನು ತೆಲುಗು ನಿರ್ದೇಶಕರು ನಿರ್ದೇಶಿಸುತ್ತಾರಾ ಅಥವಾ ಕನ್ನಡದ ನಿರ್ದೇಶಕರಾ ಎಂಬುದು ಕಾದು ನೋಡಬೇಕಿದೆ.

ಎರಡು ಸಿನಿಮಾ ಬಳಿಕ ಪ್ರಸಾದ್ ಜೊತೆ ಸಿನಿಮಾ
ರಾಬರ್ಟ್ ಸಿನಿಮಾ ಮುಗಿದ ಕೂಡಲೆ 'ವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣದಲ್ಲಿ ದರ್ಶನ್ ತೊಡಗಿಕೊಳ್ಳಲಿದ್ದಾರೆ. ಅದಾದ ನಂತರ ಮತ್ತೊಂದು ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅದರ ನಂತರ ಪ್ರಸಾದ್ ಅವರೊಟ್ಟಿಗೆ ದರ್ಶನ್ ಮಾಡಲಿರುವ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ನಡುವೆ ಶೈಲಜಾ ನಾಗರಾಜ್ ನಿರ್ಮಾಣದಲ್ಲಿ ಒಂದು, ಸಂದೇಶ್ ನಾಗರಾಜು ಜೊತೆಗೆ ಒಂದು, ಮಿಲನ ಪ್ರಕಾಶ್ ಜೊತೆ ಒಂದು, ಉಮಾಪತಿ ಶ್ರೀನಿವಾಸ್ ಜೊತೆ ಮತ್ತೊಂದು ಸಿನಿಮಾಕ್ಕೆ ತಯಾರಾಗಿದ್ದಾರೆ ದರ್ಶನ್.