Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚೈನೀಸ್, ಜಾಪನೀಸ್ ಸೇರಿದಂತೆ ಬರೋಬ್ಬರಿ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ 'ಹನುಮಾನ್'!
ಸೂಪರ್ ಹಿರೋ ಚಿತ್ರಗಳೆಂದರೆ ಕೇವಲ ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಐರನ್ ಮ್ಯಾನ್ ಮಾತ್ರವಲ್ಲ, ನಮ್ಮ ನೆಲದ ಶಕ್ತಿಶಾಲಿಗಳನ್ನೂ ಸಹ ಸ್ಪೂರ್ತಿಯನ್ನಾಗಿ ತೆಗೆದುಕೊಂಡು ಸೂಪರ್ ಹೀರೊ ಚಿತ್ರಗಳನ್ನು ಮಾಡಬಹುದು, ಮಾಡುತ್ತಿದ್ದೇವೆ ಎಂದು ತೆಲುಗಿನ ಚಿತ್ರತಂಡವೊಂದು ಮುಂದೆ ಬಂದಿತ್ತು. ಈ ಹಿಂದೆ ಜಾಂಬಿ ರೆಡ್ಡಿ ಎಂಬ ಚಿತ್ರವನ್ನು ಮಾಡಿದ್ದ ನಟ ತೇಜ ಸಜ್ಜ ಹಾಗೂ ನಿರ್ದೇಶಕ ಪ್ರಶಾಂತ್ ವರ್ಮಾ ಜೋಡಿ ಭಾರತ ಜನರ ನಂಬುಗೆಯ ಶಕ್ತಿಶಾಲಿ ದೇವರಾದ ಹನುಮಂತನ ಲಕ್ಷಣಗಳನ್ನು ಆಧರಿಸಿದ ಚಿತ್ರವನ್ನು 'ಹನು ಮಾನ್' ಅಥವಾ 'ಹನು ಮ್ಯಾನ್' ಎಂಬ ಟೈಟಲ್ ಅಡಿಯಲ್ಲಿ ಘೋಷಿಸಿತ್ತು.
ಚಿತ್ರದ ಚಿತ್ರೀಕರಣ ಹಾಗೂ ವಿಎಫ್‌ಎಕ್ಸ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಇದೇ ವರ್ಷದ ಮೇ ತಿಂಗಳ 12ರಂದು ಚಿತ್ರ ಬಿಡುಗಡೆಯಾಗಲಿದೆ. ಇನ್ನು ಚಿತ್ರತಂಡ ಟೀಸರ್ ಒಂದನ್ನು ಬಿಡುಗಡೆ ಮಾಡುವುದರ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದ ಟೀಸರ್ ನೋಡಿದ್ದ ಸಿನಿ ರಸಿಕರು ಯಾರಾದರೂ ಈ ಚಿತ್ರದ ಟೀಸರ್ ಅನ್ನು 'ಆದಿ ಪುರುಷ್' ಚಿತ್ರತಂಡಕ್ಕೆ ತೋರಿಸಿ ನೆಕ್ಸ್ಟ್ ಲೆವೆಲ್ ವಿಎಫ್‌ಎಕ್ಸ್ ಟ್ರೈಲರ್ ಎಂದರೆ ಈ ರೀತಿ ಇರಬೇಕು ಎಂದು ತಿಳಿದುಕೊಳ್ಳಲು ಹೇಳಿ ಎಂದು ಟ್ರೋಲ್ ಮಾಡಿದ್ದರು.
ಹೀಗೆ ಸಾಧಾರಣ ಬಜೆಟ್‌ನಲ್ಲಿಯೇ ವೀಕ್ಷಕ ವಾವ್ ಎನ್ನುವ ಮಟ್ಟಿಗೆ ಚಿತ್ರವನ್ನು ತಯಾರಿಸುತ್ತಿರುವ ಹನುಮಾನ್ ಚಿತ್ರತಂಡದ ಮೇಲೆ ಟೀಸರ್ ನೋಡಿದ ಪ್ರೇಕ್ಷಕನಿಗೆ ನಿರೀಕ್ಷೆ ಕೂಡ ಡಬಲ್ ಆಗಿತ್ತು. ಇನ್ನು ಟೀಸರ್ ಮೂಲಕ ಸದ್ದು ಮಾಡಿದ್ದ ಚಿತ್ರತಂಡ ಇದೀಗ ಪ್ಯಾನ್ ಇಂಡಿಯಾ ಐಡಿಯಾವನ್ನು ಮೀರಿಸಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.
ಹೌದು, ಹನುಮಾನ್ ಚಿತ್ರವನ್ನು ವಿಶ್ವದ ಬರೋಬ್ಬರಿ 11 ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡ ಪೋಸ್ಟರ್ ಒಂದನ್ನೂ ಸಹ ಬಿಡುಗಡೆ ಮಾಡಿ ತಿಳಿಸಿದೆ. ಮೂಲ ತೆಲುಗು ಚಿತ್ರವಾಗಿರುವ ಹನು ಮಾನ್ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಇಂಗ್ಲಿಷ್, ಸ್ಪ್ಯಾನಿಷ್, ಕೊರಿಯನ್, ಚೈನೀಸ್ ಹಾಗೂ ಜಾಪನೀಸ್ ಭಾಷೆಗಳಲ್ಲೂ ಸಹ ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಹಂಚಿಕೊಂಡಿದೆ.