"ಏಡ್ಸ್ ಕಾಯಿಲೆ ಮೇಲೆ ಭಯ ಬಂದ್ಮೇಲೆ ಕಾಸ್ಟಿಂಗ್ ಕೌಚ್ ಕಡಿಮೆ ಆಯ್ತು"; ಹಿರಿಯ ನಟಿ ಅನ್ನಪೂರ್ಣಮ್ಮ
ತೆಲುಗು ಚಿತ್ರರಂಗದಲ್ಲಿ ಹಿರಿಯ ನಟಿ ಅನ್ನಪೂರ್ಣಮ್ಮ ಸಿಕ್ಕಾಪಟ್ಟೆ ಫೇಮಸ್. ತನ್ನ ಯೌವನದಲ್ಲೆ ಅಮ್ಮನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ನಟಿ. ಈಗ ಈ ನಟಿಯ ವಯಸ್ಸು 80 ದಾಟಿದೆ. ಹಾಗಿದ್ದರೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ತನ್ನ ಅನುಭವಗಳನ್ನು ಫಿಲ್ಟರ್ ಇಲ್ಲದೆ ನೇರವಾಗಿ ಹೇಳುವ ಖಡಕ್ ನಟಿಯೀಕೆ.
ಅನ್ನಪೂರ್ಣಮ್ಮ ಇದೂವರೆಗೂ ಸುಮಾರು 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮ್ಮನಾಗಿ, ಅಜ್ಜಿಯಾಗಿ ಪಾತ್ರಗಳನ್ನು ಮಾಡಿದ್ದಾರೆ. ಟಾಲಿವುಡ್‌ನಲ್ಲಿ ಅನ್ನಪೂರ್ಣಮ್ಮ ಅವರನ್ನು ಗ್ಲಾಮರ್ ಅಜ್ಜಿ ಅಂತಲೂ ಕರೆಯುತ್ತಾರೆ. ಮೂರು ತಲೆಮಾರಿನ ನಾಯಕರೊಂದಿಗೆ ನಟಿಸಿದ ಹೆಗ್ಗಳಿಕೆ ಇವರದ್ದು.

ಎನ್‌ಟಿಆರ್, ಕೃಷ್ಣ, ಕೃಷ್ಣಂರಾಜು, ಶೋಭನ್ ಬಾಬು, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ಸುಮನ್, ರಾಜೇಂದ್ರಪ್ರಸಾದ್ ಸೇರಿದಂತೆ ಹಲವು ಸ್ಟಾರ್ ನಟರಿಗೆ ತಾಯಿಯಾಗಿ ನಟಿಸಿದ್ದಾರೆ. ಹಾಗೇ ಇಂದಿನ ಪೀಳಿಗೆಯ ಸ್ಟಾರ್‌ಗಳಿಗೆ ಅಜ್ಜಿಯಾಗಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದೂ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. ಇದೇ ವೇಳೆ ಮಾಧ್ಯಮಗಳು ಹಾಗೂ ಯೂಟ್ಯೂಬ್‌ಗಳಲ್ಲಿ ಸಂದರ್ಶನ ನೀಡುತ್ತಿದ್ದು, ಅಲ್ಲಿ ಸಂಚಲನ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಹಿರಿಯ ನಟಿ ಅನ್ನಪೂರ್ಣಮ್ಮ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವೃತ್ತಿಜೀವನ, ಉದ್ಯಮದಲ್ಲಿ ಎದುರಿಸಿದ ಹೋರಾಟಗಳು ಸೇರಿದಂತೆ ಉದ್ಯಮಕ್ಕೆ ಸಂಬಂಧಿಸಿದ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಅನ್ನಪೂರ್ಣಮ್ಮ ಹೇಳಿದ ವಿಷಯ ಸಂಚಲನ ಸೃಷ್ಟಿಸುತ್ತಿದೆ.
ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಕಾಸ್ಟಿಂಗ್ ಕೌಚ್ ಅನ್ನು ಎದುರಿಸುತ್ತಾರೆ. ಆದರೆ, ಮಹಿಳೆಯರು ಕುಟುಂಬ, ಗೌರವದಂತಹ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಅವಕಾಶಗಳಿಗಾಗಿ ಎದುರು ನೋಡುತ್ತಿರುವವರು ಅದರಂತೆಯೇ ಕಷ್ಟಗಳನ್ನೂ ಎದುರಿಸಬೇಕಾಗುತ್ತದೆ ಎಂದು ಅನ್ನಪೂರ್ಣಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
ತಮ್ಮ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. "ಅವಕಾಶ ಸಿಕ್ಕರೆ ಏನು ಮಾಡೋಣ ಎಂದು ಕೇಳುತ್ತಿದ್ದರು. ಅದಕ್ಕಾಗಿಯೇ 20ನೇ ವಯಸ್ಸಿನಲ್ಲಿ ಮದುವೆಯಾಗಿ, 25ನೇ ವಯಸ್ಸಿನಲ್ಲಿ ತಾಯಿ ಪಾತ್ರ ಮಾಡಿದ್ದೇನೆ" ಎಂದು ಅನ್ನಪೂರ್ಣಮ್ಮ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದರಿಂದ ಅಂತಹ ಕಿರುಕುಳಗಳು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿವೆ ಎಂದಿದ್ದಾರೆ.
ಹಾಗೇ "ಸಿನಿಮಾ ಶೂಟಿಂಗ್ ಎಲ್ಲೋ ನಡೆಯುತ್ತೆ. ಎಲ್ಲೋ ಹೋಗಿ ಎಲ್ಲೋ ಉಳಿದುಕೊಳ್ಳಬೇಕಾಗುತ್ತೆ. ಆಗ ಮಧ್ಯರಾತ್ರಿ 2 ಗಂಟೆಯಾದರೂ ನಮ್ಮ ರೂಮಿನ ಬಾಗಿಲು ಬಡಿಯುತ್ತಿದ್ದರು" ಎಂದು ಹೇಳುವ ಮೂಲಕ ಅನ್ನಪೂರ್ಣಮ್ಮ ಸಂಚಲನ ಸೃಷ್ಟಿಸಿದ್ದರು. ಇಷ್ಟೇ ಅಲ್ಲದೆ ಏಡ್ಸ್ ಕಾಯಿಲೆ ಮೇಲೆ ಭಯ ಬಂದಾಗ ಇಂಡಸ್ಟ್ರಿಯಲ್ಲಿ ಇಂತಹ ಘಟನೆಗಳು ಕಡಿಮೆಯಾದವು ಎಂದೂ ಹೇಳಿದ್ದಾರೆ. ಇದೀಗ ಹಿರಿಯ ನಟಿಯ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


Click it and Unblock the Notifications











