ಅನುಷ್ಕಾ ಶೆಟ್ಟಿ ಜೊತೆ ನನ್ನನ್ನಷ್ಟೇ ಅಲ್ಲ, ನನ್ನ ಮಗನಿಗೂ ಸಂಬಂಧ ಕಲ್ಪಿಸಿದ್ರು" ಸಂದರ್ಶನದಲ್ಲಿ ನಾಗಾರ್ಜುನ ಹೇಳಿದ್ದೇನು?
ಕಿಂಗ್ ನಾಗಾರ್ಜುನಾ ಟಾಲಿವುಡ್‌ನ ಸ್ಮಾರ್ಟ್ ಹೀರೋ. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೇ ಯಶಸ್ಸಿನ ಹಾದಿಯನ್ನು ಕಂಡುಕೊಂಡಿದ್ದ ನಟ. ಮಾಸ್, ಕ್ಲಾಸ್, ರೊಮ್ಯಾಂಟಿಕ್ ಸಿನಿಮಾಗಳು ಯಾವುದೇ ಇದ್ದರೂ ಅದಕ್ಕೆ ಸೂಟ್ ಆಗುತ್ತಿದ್ದ ನಟನೀತ. ಈ ಕಾರಣಕ್ಕೆ ನಾಗಾರ್ಜುನಗೆ ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ.
ಒಂದು ಕಾಲದಲ್ಲಿ ನಾಗಾರ್ಜುನ ಹುಡುಗಿಯರ ಕನಸಿನ ರಾಜನಾಗಿದ್ದರು. ನಾಗಾರ್ಜನ ಸ್ಟೈಲ್‌ಗೆ, ಲುಕ್‌ಗೆ ಹುಡುಗಿಯರು ಕ್ಲೀನ್ ಬೋಲ್ಡ್ ಆಗಿದ್ದರು. ಒಮ್ಮೊಮ್ಮೆ ರೆಗ್ಯೂಲರ್ ಮಾಸ್ ಸಿನಿಮಾಗಳಲ್ಲಿ ನಟಿಸಿದ್ದರೂ, ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಟ್ರೆಂಡ್ ಸೆಟ್ ಮಾಡುತ್ತಿದ್ದರು. ಕಾಮನ್ ಲವ್ ಸ್ಟೋರಿಗಳು ಹೆಚ್ಚಾದವು ಅಂದುಕೊಳ್ಳುವಾಗಲೇ ಟ್ರೆಂಡ್ ಸೃಷ್ಟಿಸುವ ಮಾಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು.

ಈ ಕಾರಣಕ್ಕೆ ತೆಲುಗು ಚಿತ್ರರಂಗದ ಪ್ರಮುಖ ಹೀರೊಗಳ ಸಾಲಿನಲ್ಲಿ ನಾಗಾರ್ಜುನ ಕೂಡ ನಿಲ್ಲುತ್ತಾರೆ. ಟಾಲಿವುಡ್ ಈ ದಿಗ್ಗಜ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗ ಕೆಲವು ನಟಿಯರೊಂದಿಗೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಟಬು ಹಾಗೂ ಅನುಷ್ಕಾ ಶೆಟ್ಟಿಯ ಹೆಸರು ಹೆಚ್ಚು ಚರ್ಚೆಗೆ ಬಂದಿತ್ತು. ಇತ್ತೀಚೆಗೆ ನಾಗಾರ್ಜುನ ನೀಡಿದ ಸಂದರ್ಶನದಲ್ಲಿ ಅನುಷ್ಕಾ ಶೆಟ್ಟಿಯೊಂದಿಗಿನ ಸಂಬಂಧದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
ಚಿತ್ರರಂಗ ಅಂದ್ಮೇಲೆ ಗಾಸಿಪ್‌ಗಳಿಗೇನು ಕಮ್ಮಿಯಿರಲ್ಲ. ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರೆ ಸಾಕು. ಅವರೊಂದಿಗೆ ಗಾಸಿಪ್‌ಗಳು ಹುಟ್ಟಿಕೊಳ್ಳುತ್ತವೆ. ಒಂದೊಮ್ಮೆ ಹೀರೋ ಜೊತೆ ಹೀರೋಯಿನ್ ಕ್ಲೋಸ್ ಆಗಿದ್ದರೂ ಸಾಕು ಅವರಿಬ್ಬರ ನಡುವೆ ಅಫೇರ್ ಇದೆ ಅಂತ ಹಬ್ಬಿಸಿಬಿಡುತ್ತಾರೆ. ನಾಗಾರ್ಜುನ್ ಈ ಗಾಸಿಪ್‌ಗಳಿಂದ ಹೊರ ಉಳಿದಿಲ್ಲ. ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಹಲವು ನಾಯಕಿಯರ ಜೊತೆ ಅಫೇರ್ ಇಟ್ಟುಕೊಂಡಿದ್ದರೆಂದು ಹಲವು ರೀತಿಯ ಸುದ್ದಿಗಳು ಹಬ್ಬಿದ್ದವು.
ನಾಗಾರ್ಜುನ ಜೊತೆ ತಳುಕು ಹಾಕಿಕೊಂಡ ನಾಯಕಿಯರ ಹೆಸರುಗಳೇನು ಕಮ್ಮಿಯಿರಲಿಲ್ಲ. ಟಬು, ಶ್ರಿಯಾ ಸರಣ್, ಮನಿಶಾ ಕೊಯಿರಾಲಾ, ಪೂಜಾ ಬಾತ್ರಾ ಹಾಗೂ ಅನುಷ್ಕಾ ಶೆಟ್ಟಿ ಹೆಸರು ಟಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಾಗಿವೆ. ಅದರಲ್ಲೂ ನಾಗಾರ್ಜುನ ಜೊತೆ ಟಬು ಹಾಗೂ ಅನುಷ್ಕಾ ಶೆಟ್ಟಿಯ ಹೆಸರುಗಳೇ ಹೆಚ್ಚು ಸುದ್ದಿಯಾಗಿತ್ತು. ಹಲವು ಬಾರಿ ನಾಗಾರ್ಜುನ ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದೂ ಇದೆ. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗಾರ್ಜುನ್ ನಿರೂಪಕಿಯ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಹಲವು ಬಾರಿ ಟಬು ಬಗ್ಗೆ ಮಾತಾಡಿರೋ ನಾಗಾರ್ಜುನ ಈ ಸಂದರ್ಶನದಲ್ಲೂ ಅದನ್ನೇ ಹೇಳಿದ್ದರು. ಹಾಗೇ ಅನುಷ್ಕಾ ಶೆಟ್ಟಿ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆನೂ ಕ್ಲಾರಿಟಿ ಕೊಟ್ಟಿದ್ದಾರೆ. "ನಾನು ಎತ್ತರ ಇದ್ದೇನೆ. ತನ್ನ ಪಕ್ಕದಲ್ಲಿರುವ ನಾಯಕಿ ಸಣ್ಣಗಿದ್ದರೆ, ಎತ್ತರದ ನಾಯಕಿ ಇದ್ದರೆ ಉತ್ತಮ ಎಂದು ಕಾಮೆಂಟ್ ಮಾಡುತ್ತಾರೆ. ಈ ಕಾರಣಕ್ಕೆ ಎತ್ತರದ ನಾಯಕಿಯರನ್ನು ತನ್ನ ಸಿನಿಮಾಗೆ ತೆಗೆದುಕೊಳ್ಳುವಂತೆ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಶಿಫಾರಸು ಮಾಡುತ್ತಿದ್ದೆ. ಈ ವೇಳೆ ತನ್ನ ಹಾಗೂ ಅನುಷ್ಕಾ ಜೋಡಿ ಚೆನ್ನಾಗಿದೆ ಎಂದು ರಿಪೀಟ್ ಮಾಡುತ್ತಿದ್ದರು. ಈ ಕಾರಣಕ್ಕೆ ನನ್ನ ಮತ್ತು ಅನುಷ್ಕಾ ನಡುವೆ ಏನೋ ನಡೀತಿದೆ ಅಂತ ಸುದ್ದಿ ಹಬ್ಬಿಸಿದ್ದರು" ಎಂದು ನಾಗಾರ್ಜುನ ಹೇಳಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಇದೇ ಸಂದರ್ಶನದಲ್ಲಿ "ನನ್ನ ಬಗ್ಗೆ ಅಷ್ಟೇ ಅಲ್ಲ. ನನ್ನ ಮಗ ನಾಗ ಚೈತನ್ಯನನ್ನು ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿಸಿದ್ದರು" ಎಂದು ನಾಗಾರ್ಜುನ ಕಿಡಿಕಾರಿದ್ದರು. ಸಮಾಜ ನಾಶ ಆಗುತ್ತಿದ್ದು, ತಮಗೆ ಇಷ್ಟ ಬಂದಂತೆ ಮಾತಾಡುತ್ತಿದ್ದಾರೆಂದು ಕಿಡಿಕಾರಿದ್ದರು.


Click it and Unblock the Notifications











