For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಎಫೆಕ್ಟ್: ಕ್ವಾರಂಟೈನ್ ಆದ ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್

  |

  ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿತರು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ, ಸಾವಿರಾರು ಜನ ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ.

  ಸಿನಿ ಸೆಲೆಬ್ರಿಟಿಗಳಿಗೂ ಕೊರೊನಾ ಆತಂಕ ಎದುರಾಗಿದೆ. ಟಾಲಿವುಡ್ ಚಿತ್ರರಂಗ ಕೊರೊನಾದಿಂದ ನಲುಗಿ ಹೋಗಿದೆ. ತೆಲುಗಿನ ಖ್ಯಾತ ನಟರು ಕೊರೊನಾ ಎಫೆಕ್ಟ್ ನಿಂದ ಹೋಂ ಕ್ವಾರಂಟೈನ್ ಗೆ ಒಳಗಾದಿದ್ದಾರೆ. ಪ್ರಭಾಸ್, ಮಹೇಶ್ ಬಾಬು, ರಾಮ್ ಚರಣ್ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ.

  ರಾಧೆ ಶ್ಯಾಮ್ ಚಿತ್ರೀಕರಣದಲ್ಲಿದ್ದ ನಟ ಪ್ರಭಾಸ್ ಹೈದರಾಬಾದ್ ಗೆ ವಾಪಸ್ ಆಗಿದ್ದಾರೆ. ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಹೈದರಾಬಾದ್ ಗೆ ಮರಳುತ್ತಿದ್ದಂತೆ ಪ್ರಭಾಸ್ ಮೇಕಪ್ ಮ್ಯಾನ್ ಗೆ ಕೊರೊನಾ ಪಾಸಿಟಿವ್ ಬಂದಿರುವ ಸುದ್ದಿ ಕೇಳಿಬಂದಿದೆ. ಹಾಗಾಗಿ ನಟ ಪ್ರಭಾಸ್ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

  ಮೇಕಪ್ ಕಲಾವಿದನಿಗೆ ಕೊರೊನಾ: ಕ್ವಾರಂಟೈನ್ ಆದ ಪ್ರಭಾಸ್ಮೇಕಪ್ ಕಲಾವಿದನಿಗೆ ಕೊರೊನಾ: ಕ್ವಾರಂಟೈನ್ ಆದ ಪ್ರಭಾಸ್

  ಇನ್ನು ನಟ ಮಹೇಶ್ ಬಾಬು ಕೂಡ ಕ್ವಾರಂಟೈನ್ ನಲ್ಲಿದ್ದಾರೆ. ಮಹೇಶ್ ಬಾಬು ಹೇರ್ ಸ್ಟೈಲಿಸ್ಟ್ ಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಬಳಿಕ ನಟ ಮಹೇಶ್ ಬಾಬು ಕೂಡ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಹೇಶ್ ಬಾಬು ಸದ್ಯ ಸರ್ಕಾರು ಪಾರು ಪಾಟ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ತೆಲುಗಿನ ಮತ್ತೋರ್ವ ಖ್ಯಾತ ನಟ ರಾಮ್ ಚರಣ್ ಕೂಡ ಕ್ವಾರಂಟೈನ್ ಆಗಿದ್ದಾರೆ. ರಾಮ್ ಚರಣ್ ವ್ಯಾನಿಟಿ ವ್ಯಾನ್ ಡ್ರೈವರ್ ಕೊರೊನಾ ಪಾಸಿಟಿವ್ ನಿಂದ ಮೃತಪಟ್ಟಿದ್ದಾರೆ ಎನ್ನುವ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಾಲಕನ ನಿಧನದ ಬಳಿಕ ನಟ ರಾಮ್ ಚರಣ್ ಕೂಡ ಮನೆಯಲ್ಲೇ ಪ್ರತ್ಯೇಕವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  ಕೊರೊನಾ ಬಗ್ಗೆ ಹೆದರಿಸುವ ಬದಲು ಎದುರಿಸುವುದು ಹೇಗೆ ಅಂತಾ ತಿಳಿಸಿ | Filmibeat Kannada

  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾದಿಂದ ದೇಶ ನಲುಗಿಹೋಗಿದೆ. ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ಎದುರಾಗಿತ್ತು. ಇನ್ನೇನು ಚೇತರಿಸಿಕೊಂಡು ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದ್ದೇವೆ ಎನ್ನುವಷ್ಟೊತ್ತಿಗೆ ಎರಡನೇ ಅಲೆ ಮತ್ತಷ್ಟು ಭೀಕರವಾಗಿದೆ.

  English summary
  Covid 19 effect: Tollywood stars Mahesh Babu, Ram Charan and Prabhas self isolation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X