ರಶ್ಮಿಕಾ ಮಂದಣ್ಣ ಹಾದಿಯಲ್ಲಿ ರುಕ್ಮಿಣಿ ವಸಂತ್; ಕರೆ ಸ್ವೀಕರಿಸಿ ಮಾತನಾಡಲಾಗದಷ್ಟು ಬ್ಯುಸಿ!

ಕನ್ನಡ ನಟಿಯರು ಪರಭಾಷಾ ಸಿನಿಮಾಗಳಲ್ಲಿ ಹವಾ ಎಬ್ಬಿಸಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ನಭಾ ನಟೇಶ್, ಶ್ರೀಲೀಲಾ, ನೇಹಾ ಶೆಟ್ಟಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ, ಶ್ರೀಲೀಲಾ ಬಾಲಿವುಡ್‌ ಅಂಗಳಕ್ಕೂ ಜಿಗಿದಿದ್ದಾರೆ. ಇದೀಗ ರುಕ್ಮಿಣಿ ವಸಂತ್ ಕ್ರೇಜ್ ಎಲ್ಲೆಲ್ಲೂ ಶುರುವಾಗಿದೆ.

ಬೆಂಗಳೂರು ಬೆಡಗಿ ರುಕ್ಮಿಣಿ ಕನ್ನಡದಲ್ಲಿ ನಟಿಸಿರುವುದು ಬೆರಳೆಣಿಯಷ್ಟು ಸಿನಿಮಾಗಳಲ್ಲಿ ಮಾತ್ರ. ಆದರೆ ಈಗಾಗಲೇ ಪರಭಾಷಾ ಫಿಲ್ಮ್ ಮೇಕರ್ಸ್ ಕಣ್ಣಿಗೆ ಬಿದ್ದಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಒಂದು ಸಿನಿಮಾ ತೆರೆಕಂಡಿದೆ. ಈ ವಾರ ತಮಿಳಿನಲ್ಲಿ ವಿಜಯ್ ಸೇತುಪತಿ ಜೊತೆ ನಟಿಸಿರುವ 'ಏಸ್'(Ace) ಸಿನಿಮಾ ತೆರೆಗೆ ಬಂದಿದೆ.

Too busy to speak Rukmini Vasanth leaves fans guessing about her upcoming films

ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಕಾಂಬಿನೇಷನ್ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ತೆಲುಗು ಸಂದರ್ಶನವೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ, ಹೌದಾ? ನನಗೆ ಗೊತ್ತಿಲ್ಲ. ಇಂತಹ ಊಹಾಪೋಹ ಹೇಗೆ ಶುರುವಾಯಿತು ಎಂದಿದ್ದರು. ಇದೀಗ ಮತ್ತೆ 3 ಕ್ರೇಜಿ ಪ್ರಾಜೆಕ್ಟ್‌ಗಳಿಗೆ ರುಕ್ಮಿಣಿ ವಸಂತ್ ಹೆಸರು ಕೇಳಿಬರ್ತಿದೆ.

ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಪಾತ್ರದಲ್ಲಿ 20 ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಆ ಚಿತ್ರದಿಂದ ಡಿಪ್ಪಿಯನ್ನು ಕೈಬಿಡಲಾಗಿದೆ. ಆ ಜಾಗಕ್ಕೆ ಕನ್ನಡ ನಟಿ ರುಕ್ಮಿಣಿ ವಸಂತ್ ಹೆಸರು ಕೇಳಿಬರ್ತಿದೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ನಡೀತಿದೆ. ಈಗಾಗಲೇ ರುಕ್ಮಿಣಿ ಜೊತೆ ಮಾತುಕತೆ ಕೂಡ ನಡೀತಿದೆ ಎನ್ನಲಾಗ್ತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ವಿಕ್ಟರಿ ವೆಂಕಟೇಶ್ ಜೋಡಿ ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರಕ್ಕೂ ರುಕ್ಮಿಣಿ ವಸಂತ್ ನಾಯಕಿ ಎನ್ನುವ ಊಹಾಪೋಹ ಶುರುವಾಗಿದೆ. ಇನ್ನು ತಮಿಳಿನಲ್ಲಿ ಮಣಿರತ್ನಂ ಮುಂದಿನ ಚಿತ್ರಕ್ಕೂ ರುಕ್ಕು ನಾಯಕಿ ಎಂದು ಗುಲ್ಲಾಗಿದೆ. ಈ 4 ಸಿನಿಮಾಗಳಲ್ಲಿ ರುಕ್ಮಿಣಿ ನಟಿಸುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಆದರೆ ಆಕೆಯ ಹೆಸರು ಬಲವಾಗಿ ಕೇಳಿಬರ್ತಿದೆ.

ಕನ್ನಡದಲ್ಲಿ ಬೆರಳೆಣಿಯಷ್ಟು ಸಿನಿಮಾಗಳಲ್ಲಿ ನಟಿಸಿರುವ ರುಕ್ಮಿಣಿ ಈಗಾಗಲೇ ಪರಭಾಷೆಯತ್ತ ಮುಖ ಮಾಡಿದ್ದಾರೆ. ಮುಂದೆ ಕನ್ನಡದಲ್ಲಿ ನಟಿಸೋದು ಅನುಮಾನ ಎನ್ನುವಂತಾಗಿದೆ. ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿ 'ಮದರಾಸಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲು ಸಜ್ಜಾಗಿದೆ.

Too busy to speak Rukmini Vasanth leaves fans guessing about her upcoming films

'ಏಸ್' ಎಂಬ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆ ರುಕ್ಮಿಣಿ ನಾಯಕಿಯಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಆದರೆ ಸ್ಟಾರ್ ನಟನ ಚಿತ್ರದಲ್ಲಿ ನಾಯಕಿಯಾಗಿ ಕಾಲಿವುಡ್ ಪ್ರವೇಶಿಸಿದ್ದಾರೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಾರಕ್ ಜೋಡಿಯಾಗಿ ನಟಿಸಿದರೆ ಆಕೆಯ ಅದೃಷ್ಟ ಖುಲಾಯಿಸಿದಂತೆಯೇ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಕಟ್ಟಿಕೊಟ್ಟ ಸಂದೀಪ್ ರೆಡ್ಡಿ ವಂಗಾ ಈಗ ಪ್ರಭಾಸ್ ಜೊತೆ ಕೈ ಜೋಡಿಸುತ್ತಿದ್ದಾರೆ. ಟೀ-ಸೀರಿಸ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ದೀಪಿಕಾ 20 ಕೋಟಿ ರೂ. ಸಂಭಾವನೆ ಕೇಳಿದ್ದಾರೆ. ಸಾಲದ್ದಕ್ಕೆ ಸಾಕಷ್ಟು ಷರತ್ತುಗಳನ್ನು ಹಾಕಿದ್ದಾರೆ. ಅದಕ್ಕೆ ಒಪ್ಪಲು ಸಾಧ್ಯವಾಗದೇ ಸಂದೀಪ್ ರೆಡ್ಡಿ ಬೇರೆ ನಟಿಯ ತಲಾಶೆಯಲ್ಲಿದ್ದಾರೆ. ರುಕ್ಮಿಣಿ ವಸಂತ್ ಜೊತೆಗೂ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.

ಸದ್ಯ ಕಮಲ್ ಹಾಸನ್ ಹಾಗೂ ಸಿಂಬು ಜೊತೆ ಮಣಿರತ್ನಂ 'ಥಗ್ ಲೈಫ್' ಸಿನಿಮಾ ಮಾಡಿದ್ದಾರೆ. ಇದು ಪಕ್ಕಾ ಅಂಡರ್‌ವರ್ಲ್ಡ್ ಸಿನಿಮಾ. ಮುಂದೆ ಮತ್ತೆ ಒಂದು ರೊಮ್ಯಾಂಟಿಕ್ ಚಿತ್ರಕ್ಕೆ ಪ್ಲ್ಯಾನ್ ಮಾಡುತ್ತಿದ್ದು ನವೀನ್ ಪೊಲಿಶೆಟ್ಟಿ ಹೀರೊ ಆಗಿ ನಟಿಸುವುದು ಖಚಿತ ಎನ್ನಲಾಗ್ತಿದೆ. ಆತನಿಗೆ ಜೋಡಿಯಾಗಿ ರುಕ್ಮಿಣಿ ಕಾಣಿಸಿಕೊಳ್ಳುತ್ತಾರೆ ಎಂದು ಕಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.

ಶ್ರೀನಿ ನಿರ್ದೇಶನದ 'ಬೀರ್‌ಬಲ್' ಚಿತ್ರದ ಮೂಲಕ ರುಕ್ಮಿಣಿ ಚಂದನವನಕ್ಕೆ ಕಾಲಿಟ್ಟಿದ್ದರು. 'ಸಪ್ತಸಾಗರದಾಚೆ ಎಲ್ಲೊ' ಸರಣಿ ಸಿನಿಮಾಗಳಲ್ಲಿ ಪ್ರಿಯಾ ಆಗಿ ನಟಿಸಿ ಮೋಡಿ ಮಾಡಿದ್ದರು. ಆ ಚಿತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಬಳಿಕ ಗಣೇಶ್ ಜೋಡಿಯಾಗಿ 'ಬಾನ ದಾರಿಯಲ್ಲಿ' ಕಾಣಿಸಿಕೊಂಡಿದ್ದರು. 'ಬಘೀರ' ಚಿತ್ರದಲ್ಲಿ ಶ್ರೀಮುರಳಿ ಜೋಡಿಯಾಗಿ 'ಭೈರತಿ ರಣಗಲ್' ಚಿತ್ರದಲ್ಲಿ ಶಿವಣ್ಣನಿಗೆ ಜೊತೆಯಾಗಿ ಮಿಂಚಿದ್ದರು.

ಸಹಜ ಸೌಂದರ್ಯ ಹಾಗೂ ನಟನೆಯಿಂದ ರುಕ್ಮಿಣಿ ವಸಂತ್ ಮೋಡಿ ಮಾಡುತ್ತಿದ್ದಾರೆ. 6 ಸಿನಿಮಾಗಳಲ್ಲಿ ಮಾತ್ರ ನಟಿಸಿ ಗಮನ ಸೆಳೆದಿದ್ದಾರೆ. ಪಕ್ಕದ್ಮನೆ ಹುಡುಗಿಯಂತಹ ಪಾತ್ರಗಳಲ್ಲಿ ಕಮಾಲ್ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಅವಕಾಶಗಳು ಹುಡುಕಿ ಬರುತ್ತಿವೆ. ಆದರೆ ಪರಭಾಷೆಯಲ್ಲಿ ಅವಕಾಶ ಸಿಗುತ್ತಿದ್ದಂತೆ ಕೆಲವರು ಕನ್ನಡ ಸಿನಿಮಾಗಳನ್ನೇ ಮರೆತುಬಿಡುತ್ತಾರೆ. ರಶ್ಮಿಕಾ ಹಾಗೂ ಶ್ರೀಲೀಲಾ ಇತ್ತೀಚೆಗೆ ಕನ್ನಡ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಅವರ ಲೆಕ್ಕಾಚಾರ ಈಗ ಬರೀ ಬಾಲಿವುಡ್.

ಹೀಗೆ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ರುಕ್ಮಿಣಿಗೆ ಅವಕಾಶ ಸಿಗುವ ಬಗ್ಗೆ ಊಹಾಪೋಹ ಶುರುವಾಗಿದೆ. ಈ ಸಂಬಂಧ ಮಾಹಿತಿ ಪಡೆಯಲು ಫಿಲ್ಮಿಬೀಟ್ ಕನ್ನಡ ಆಕೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿತ್ತು. ಫೋನ್ ಮಾಡಿದರೆ ರುಕ್ಮಿಣಿ ವಸಂತ್ ಕರೆ ಸ್ವೀಕರಿಸಿ ಮಾತನಾಡಲು ಸಾಧ್ಯವಾಗದ್ದಷ್ಟು ಬ್ಯುಸಿಯಾಗಿದ್ದಾರೆ. "ನಾನು ಬೇರೆ ಊರಿನಲ್ಲಿದ್ದೀನಿ, ಯಾವುದೇ ಸಿನಿಮಾ ಬಗ್ಗೆ ಮಾತನಾಡಲು ಸಾಧ್ಯವಿಲ್ಲ" ಎಂದು ಕರೆ ಕಟ್ ಮಾಡಿದ್ದಾರೆ. ಇಷ್ಟರಮಟ್ಟಿಗೆ ರುಕ್ಮಿಣಿ ಬ್ಯುಸಿಯಾಗಿದ್ದಾರಾ? ಎಂದು ಅಚ್ಚರಿ ಆಗುತ್ತದೆ.

ಮಾತುಕತೆ ಅಂತಿಮವಾಗಿ ಚಿತ್ರತಂಡವೇ ಘೋಷಣೆ ಮಾಡುವವರೆಗೂ ಮಾತನಾಡುವುದು ಬೇಡ ಎಂದು ರುಕ್ಮಿಣಿ ನಿರ್ಧರಿಸಿದಂತಿದೆ. ಕೆಲವೊಮ್ಮೆ ಆಯಾ ಚಿತ್ರತಂಡದವರು ಈ ಬಗ್ಗೆ ತಾಕೀತು ಮಾಡಿರುವ ಸಾಧ್ಯತೆ ಇರುತ್ತದೆ. ಆದರೆ ಯಾವುದಕ್ಕೂ ಪ್ರತಿಕ್ರಿಯಿಸದೇ ಕರೆ ಕಟ್ ಮಾಡಿದ್ದಾರೆ. ಕೊನೆ ಪಕ್ಷ ಬಿಡುಗಡೆ ಆಗಿರುವ ತಮಿಳಿನ 'ಏಸ್' ಚಿತ್ರದ ಬಗ್ಗೆ ಮಾತನಾಡಲು ಕೂಡ ಆಕೆ ಒಪ್ಪಲಿಲ್ಲ.

ಈಗಾಗಲೇ ರಶ್ಮಿಕಾ ತೆಲುಗು, ತಮಿಳು ಮಾತ್ರವಲ್ಲದೇ ಬಾಲಿವುಡ್ ಪ್ರವೇಶಿಸಿ ಗೆದ್ದಿದ್ದಾರೆ. 'ಅನಿಮಲ್' ಹಾಗೂ 'ಛಾವ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಟಾಪ್ ನಟಿಯರಿಗೆ ಪೈಪೋಟಿ ಕೊಡುತ್ತಿದ್ದಾರೆ. ಇತ್ತೀಚೆಗೆ 'ಸಿಕಂದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ರಶ್ಮಿಕಾ ನಟಿಸಿದ್ದರು. ಇನ್ನು ಶ್ರೀಲೀಲಾ 'ಆಶಿಕಿ- 3' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಆಶಿಕಾ ರಂಗನಾಥ್, ಸಪ್ತಮಿ ಗೌಡ ಕೂಡ ಈಗಾಗಲೇ ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದಾರೆ. ರುಕ್ಮಿಣಿ ವಸಂತ್ ಇದೇ ಹಾದಿಯಲ್ಲಿದ್ದಾರೆ. ದೊಡ್ಡ ದೊಡ್ಡ ಅವಕಾಶಗಳು ಆಕೆಯನ್ನು ಅರಸಿ ಬರುವ ಸುಳಿವು ಸಿಗುತ್ತಿದೆ. ಜ್ಯೂ. ಎನ್‌ಟಿಆರ್, ಪ್ರಭಾಸ್ ಹಾಗೂ ವಿಕ್ಟರಿ ವೆಂಕಟೇಶ್ ಜೊತೆ ನಟಿಸೋ ಚಾನ್ಸ್ ಗಿಟ್ಟಿಸಿಕೊಳ್ಳುತ್ತಾರಾ? ಕಾದು ನೋಡಬೇಕಿದೆ. 'ಸ್ಪಿರಿಟ್' ಚಿತ್ರಕ್ಕೆ ರುಕ್ಮಿಣಿ ನಾಯಕಿ ಎನ್ನುವ ಬಗ್ಗೆ ಕೆಲವರು ಹುಬ್ಬೇರಿಸಿದ್ದಾರೆ. ಅಷ್ಟು ದೊಡ್ಡ ಚಿತ್ರಕ್ಕೆ ಹೊಸ ನಟಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರಾ? ಎಂದು ಕಾಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ 'ಏಸ್' ಸಿನಿಮಾ ಸುದ್ದಿಗೋಷ್ಠಿಗೆ ಸಿದ್ಧರಾಗಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರುಕ್ಮಿಣಿ ವಸಂತ್ ಹಾಕಿಕೊಂಡಿದ್ದರು. ಅಭಿಮಾನಿಗಳು ಚಿತ್ರಕ್ಕೆ ಶುಭ ಕೋರಿದ್ದರು. ಕೆಲವರು ಮಾತ್ರ 'ಮೇಡಂ ನೀವು ರಶ್ಮಿಕಾ ಮಂದಣ್ಣ ಥರ ಆಗಬೇಡಿ' ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲೇ ಹೋದರೂ ಕನ್ನಡವನ್ನು ಕನ್ನಡ ಸಿನಿಮಾಗಳನ್ನು ಮಾತ್ರ ಮರೆಯಬೇಡಿ ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X