For Quick Alerts
  ALLOW NOTIFICATIONS  
  For Daily Alerts

  24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ತೆಲುಗು ಹಾಡುಗಳಿವು; ಮಹೇಶ್ ಬಾಬು ಪ್ರಾಬಲ್ಯ!

  |

  ಚಿತ್ರವೊಂದಕ್ಕೆ ಟೀಸರ್ ಹಾಗೂ ಟ್ರೈಲರ್ ಹೇಗೆ ಹೈಪ್ ಹೆಚ್ಚಿಸುತ್ತವೆಯೋ ಅದೇ ರೀತಿ ಆ ಚಿತ್ರದ ಹಾಡುಗಳೂ ಸಹ ಚಿತ್ರದ ಮೇಲೆ ಸಿನಿ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚುನಂತೆ ಒಮ್ಮೊಮ್ಮೆ ಮಾಡಲಿವೆ. ಚಿತ್ರ ವೀಕ್ಷಿಸಲೇಬೇಕು ಎಂದು ಸಿನಿ ಪ್ರೇಕ್ಷಕರು ಕಾಯುವಷ್ಡು ಹೈಪ್ ಅನ್ನು ಹಾಡುಗಳು ಹೆಚ್ಚಿಸುವಲ್ಲಿ ವಿಫಲವಾದರೂ ಸಹ ಹಾಡು ವೈರಲ್ ಆಗಿದ್ದೇ ಆದರೆ ಆ ಚಿತ್ರಕ್ಕೆ ಪ್ರಚಾರ ಸಿಗುವುದಂತೂ ಖಚಿತ.

  ಹೌದು, ಚಿತ್ರದ ಹಾಡುಗಳು ಚೆನ್ನಾಗಿದ್ದರೆ ಬಿಡುಗಡೆಗೂ ಮುನ್ನ ವೈರಲ್ ಆಗಲಿದ್ದು, ಇದರಿಂದ ಬಿಡುಗಡೆಗೆ ಬೇಕಾದ ಅಮೂಲ್ಯವಾದ ಪ್ರವೋಷನ್ ಅನ್ನು ಚಿತ್ರಗಳು ಪಡೆದುಕೊಳ್ಳಲಿವೆ. ಹೀಗಾಗಿಯೇ ಪ್ರೇಕ್ಷಕರಿಗೆ ಇಷ್ಟವಾಗುವ ಹಾಡುಗಳನ್ನು ಸಂಯೋಜಿಸುವತ್ತ ಪ್ರತೀ ಒಂದು ಚಿತ್ರತಂಡವೂ ಚಿತ್ತ ನೆಟ್ಟಿರುತ್ತದೆ.

  ಇನ್ನು ಇತ್ತೀಚಿನ ದಿನಗಳಲ್ಲೂ ಸಹ ಈ ಟ್ರೆಂಡ್ ದೊಡ್ಡ ಮಟ್ಟದಲ್ಲೇ ಇದ್ದು, ಸ್ಟಾರ್ ನಟರ ಚಿತ್ರಗಳಿಗೆ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಮೂಲಕ ಹೈಪ್ ಹೆಚ್ಚಿಸುವ ಕೆಲಸಗಳನ್ನು ಮಾಡುತ್ತಿವೆ ಚಿತ್ರ ನಿರ್ಮಾಣ ಸಂಸ್ಥೆಗಳು. ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರ ಹಾಡುಗಳ ಮಧ್ಯೆ ಸಾಮಾಜಿಕ ಜಾಲತಾಣದ ಕಾಳಗವಿದ್ದು, ಯಾರ ಹಾಡು ಹೆಚ್ಚು ವೀಕ್ಷಣೆ ಪಡೆದುಕೊಂಡಿವೆ ಎಂಬ ಪೈಪೋಟಿ ಏರ್ಪಡಲಿದೆ.

  ಹಾಡು ಬಿಡುಗಡೆಯಾದ 24 ಗಂಟೆಗಳಲ್ಲಿ ಯಾವ ಹಾಡು ಹೆಚ್ಚು ವೀಕ್ಷಣೆ ಪಡೆದುಕೊಂಡು ದಾಖಲೆ ಬರೆಯುತ್ತೆ ಎಂದು ಅಭಿಮಾನಿಗಳು ಪ್ರತಿ ಸ್ಟಾರ್ ನಟನ ಚಿತ್ರಗಳ ಹಾಡುಗಳು ಬಿಡುಗಡೆಯಾದಾಗ ಕಾಯುತ್ತಿರುತ್ತಾರೆ. ಇದೇ ರೀತಿ ತೆಲುಗು ಚಿತ್ರರಂಗದ ಯಾವ ಲಿರಿಕಲ್ ಹಾಡುಗಳು ಯುಟ್ಯೂಬ್‌ನಲ್ಲಿ ಮೊದಲ 24 ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡಿವೆ ಎಂಬುದರ ಕುರಿತಾದ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

  ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದ 'ಪೆನ್ನಿ ಸಾಂಗ್' - 16.38 ಮಿಲಿಯನ್

  ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದ ಕಲಾವತಿ ಹಾಡು -14.78 ಮಿಲಿಯನ್

  ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದ 'ಮ.. ಮ.. ಮಹೇಶ' ಹಾಡು - 13.56 ಮಿಲಿಯನ್

  ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಊ ಅಂಟಾವ ಮಾವ ಊಹೂ ಅಂಟಾವ ಮಾವ ಹಾಡು - 12.39 ಮಿಲಿಯನ್

  ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಚಿತ್ರದ ಟೈಟಲ್ ಹಾಡು - 10.20 ಮಿಲಿಯನ್

  Read more about: music telugu tollywood mahesh babu
  English summary
  Top 5 list of most viewed telugu lyrical videos in 24 hours; Mahesh Babu Mania
  Wednesday, December 7, 2022, 7:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X