'ನಮ್ಮಲ್ಲಿ ಎಲ್ಲ ದೊಡ್ಡದಿರಬೇಕು, ಹೀಗೆ ಇದ್ದರೆ ಸಾಕಾಗಲ್ಲ' ನಟಿಯ 'ಸೈಜ್' ಬಗ್ಗೆ ನಿರ್ದೇಶಕನ ಅವಹೇಳನಾರಿ ಹೇಳಿಕೆ..!

ಮಾತು ಸ್ನೇಹದ ಎಳೆಯನ್ನು ಹೊಸೆಯಬಲ್ಲದು. ದ್ವೇಷದ ಕಿಡಿಗಳನ್ನು ಕೂಡ ಮಾತು ಉಗಳಬಲ್ಲದು. ಬದುಕಿನಲ್ಲಿ ಸೋಲನ್ನು ಕಂಡು ನಿರಾಶರಾದವರಿಗೆ ಮಾತು ಸ್ಫೂರ್ತಿಯಾಗಬಲ್ಲದು. ಅನುತ್ತೀಣರಾದ ವಿದ್ಯಾರ್ಥಿಗಳಿಗೆ ಮಾತು ಭರವಸೆಯನ್ನು ತುಂಬಬಲ್ಲದು.

ಹೀಗೆ ನಾನಾ ಪವಾಡ ಮಾಡುವ ಸಾಮರ್ಥ್ಯ ಹೊಂದಿರುವ ಈ ಮಾತನ್ನು ಕೆಲವರು ಅಪಹಾಸ್ಯ ಮಾಡಲು, ಹಗುರವಾಗಿ ಮಾತನಾಡಲು, ಸ್ವಾಭಿಮಾನಕ್ಕೆ ಧಕ್ಕೆ ತರಲು ಕೂಡ ಬಳಸುತ್ತಾರೆ. ಇವು ಅವರೊಳಗೆ ಇರುವ ಕೆಳದರ್ಜೆಯ ಗುಣವನ್ನು ಸಾಬೀತು ಪಡಿಸುತ್ತವೆ. ಒಂದರ್ಥದಲ್ಲಿ ಇವುಗಳನ್ನು ಮಾತು ಎನ್ನುವ ಬದಲು ಬಾಯಿ ಚಪಲ ಎನ್ನಬಹುದು. ಈ ಬಾಯಿ ಚಪಲ ತೀರಿಸಿಕೊಳ್ಳಲು ಹೋಗಿ ನಿರ್ದೇಶಕರೊಬ್ಬರು ವಿವಾದಕ್ಕೀಡಾಗಿದ್ದಾರೆ. ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Trinadha Rao Nakkina faces backlash for making disgusting comments about actress Anshu s size

ಹೌದು, ಅಸಲಿಗೆ ತೆಲುಗಿನಲ್ಲಿ 'ಮಜಾಕಾ' ಎಂಬ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ತ್ರಿನಾಧ ರಾವ್ ನಕ್ಕಿನ್ ಈ ಚಿತ್ರದ ನಿರ್ದೇಶಕ. ಸಂದೀಪ್ ಕಿಶನ್, ರಿತು ವರ್ಮಾ, ಮತ್ತು ಅಂಶು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಮೊನ್ನೆ ನೆರವೇರಿತು. ಇದೇ ಸಮಯದಲ್ಲಿ ಮಾತನಾಡಿರುವ ನಿರ್ದೇಶಕ ತ್ರಿನಾಧ ರಾವ್ ನಕ್ಕಿನ್ ಚಿತ್ರದ ನಾಯಕಿ ಅಂಶು ಅವರ ದೇಹದಾಕಾರದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಇವರು ಆಡಿದ ಮಾತು ಅನೇಕರನ್ನು ಕೆರಳಿಸಿವೆ.

ಕಾರ್ಯಕ್ರಮದಲ್ಲಿ ಮಾತು ಶುರು ಮಾಡಿದ ತ್ರಿನಾಧ ರಾವ್ ನಕ್ಕಿನ್ ಮನ್ಮಥುಡು ಚಿತ್ರ ನೋಡುವ ಸಮಯದಲ್ಲಿ ಈ ಹುಡುಗಿ ಲಡ್ಡು ತರ ಇದ್ದಳು ಆದರೆ ಈಗ ತಳ್ಳಗಾಗಿದ್ದಾಳೆ. ಹೀಗಿದ್ದರೆ ತೆಲುಗು ಚಿತ್ರರಂಗಕ್ಕೆ ಸಾಕಾಗುವುದಿಲ್ಲ. ನಮ್ಮಲ್ಲಿ ದೊಡ್ಡದಾಗಿರಬೇಕು ಎಂದು ಹೇಳಿದ್ದಾರೆ. ಮುಂದುವರೆದು ಈ ಕಾರಣಕ್ಕೆ ನಾನು ತೂಕ ಜಾಸ್ತಿ ಮಾಡ್ಕೋ ಚೆನ್ನಾಗಿ ತಿನ್ನುವುದನ್ನು ಕಲಿ ಎಂದು ಹೇಳಿದ್ದೆ, ಪರವಾಗಿಲ್ಲ ಈಗ ಸುಧಾರಿಸಿದ್ದಾಳೆ ಮುಂದೆ ಇನ್ನೂ ಹೆಚ್ಚು ಸುಧಾರಿಸುತ್ತಾಳೆ ಎಂದಿದ್ದಾರೆ.

Trinadha Rao Nakkina faces backlash for making disgusting comments about actress Anshu s size

ಇಷ್ಟೇ ಅಲ್ಲ ನಾನು ಮನ್ಮಥುಡು ಚಿತ್ರವನ್ನು ಈಕೆಯನ್ನು ನೋಡಲೇಂದೇ ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದೇನೆ, ನಿಮಗೆ ಆಗ ಈಕೆ ಹೇಗಿದ್ದಳು ಎನ್ನುವುದು ನೆನಪಾಗದಿದ್ದರೆ ಇನ್ನೊಮ್ಮೆ ಆ ಚಿತ್ರವನ್ನು ನೋಡಿ ಎಂದು ಹೇಳಿದ್ದಾರೆ. ನಿರ್ದೇಶಕ ವೇದಿಕೆ ಮೇಲೆ ಆಡಿದ ಈ ಮಾತುಗಳನ್ನು ಕೇಳಿದ ನಾಯಕಿ ಅಂಶು ಕಾರ್ಯಕ್ರಮದಲ್ಲಿ ಮುಜುಗರಕ್ಕೀಡಾಗಿದ್ದಾರೆ. ನಕ್ಕು ಸುಮ್ಮನಾಗಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿರ್ದೇಶಕ ತ್ರಿನಾಧ ವಿರುದ್ದ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಹೆಣ್ಣಿನ ಬಗ್ಗೆ ವೇದಿಕೆಯಲ್ಲಿ ಈ ತರ ಮಾತನಾಡುವುದು ಅಸಹ್ಯಕರ ಎಂದು ಹೇಳಿದರೆ ಇನ್ನು ಕೆಲವರು ಆ ವ್ಯಕ್ತಿಯ ಕೀಳು ಮನಸ್ಥಿತಿಗೆ ಅವರಾಡಿದ ಈ ಮಾತುಗಳೇ ಕೈಗನ್ನಡಿ ಎಂದಿದ್ದಾರೆ. ಅಶ್ಲೀಲ ಹಾಗೂ ಅವಹೇಳನಾಕಾರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲಿಯೇ ಅಂಶು ನಿರ್ದೇಶಕನನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೇ ನಟಿಯರ ಬಗ್ಗೆ ಈ ತರಹದ ಹೇಳಿಕೆಯನ್ನು ತ್ರಿನಾಧ ರಾವ್ ನಕ್ಕಿನ್ ಇದೇ ಮೊದಲ ಬಾರಿ ನೀಡುತ್ತಿಲ್ಲ. ವಿವಾದವನ್ನು ಮೈಮೇಲೆ ಎಳೆದುಕೊಂಡಿಲ್ಲ. ಕಳೆದ ವರ್ಷ ನಟಿ ಪಾಯಲ್ ರಾಧಾಕೃಷ್ಣ ಅವರಿಗೆ ವೇದಿಕೆಯ ಮೇಲೆಯೇ ಅಪ್ಪಿಕೊಳ್ಳುವಂತೆ ಒತ್ತಾಯ ಮಾಡಿದ್ದರು ತ್ರಿನಾಧ ರಾವ್. ನನಗೆ ಇದೆಲ್ಲ ಇಷ್ಟ ಇಲ್ಲ ಎಂದು ಪಾಯಲ್ ಮುಖಕ್ಕೆ ಹೊಡೆದಂತೆ ಹೇಳಿದ್ದರು ಕೂಡ ನಾನು ನಿನ್ನನ್ನು ಅಪ್ಪಿಕೊಳ್ಳಲೇಬೇಕೆಂದು ಪಾಯಲ್ ಅವರನ್ನು ಪೀಡಿಸಿ ತ್ರಿನಾಧ ರಾವ್ ನಕ್ಕಿನ್ ಸುದ್ದಿಯಾಗಿದ್ದರು. ಆಗಲೂ ಕೂಡ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.

More from Filmibeat

Read more about: actress tollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X