ದೀಪಿಕಾ ಪಡುಕೋಣೆಗೆ ಗೇಟ್ ಪಾಸ್‌ ನೀಡಿದ ಯುವ ನಾಯಕಿ, ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಈ ಚೆಲುವೆ..!

ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಕುರಿಕಾಯುತ್ತಾ ತನಗಿಷ್ಟ ಬಂದಂತೆ ಹಾಡುತ್ತಿದ್ದ ಹನುಮಂತ ಸರಿಗಮಪ ಸೀಜನ್ 15ರ ರನ್ನರ್ ಅಪ್ ಆಗುತ್ತಾನೆಂದರೆ ತಮಾಷೆಯ ಮಾತೇ..? ಇನ್ನೂ ಕೇವಲ ಕಣ್ಸನ್ನೆಯಿಂದ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ಪ್ರಿಯಾ ವಾರಿಯರ್ ಅವರದ್ದು ಅದೃಷ್ಟವಲ್ಲದೇ ಮತ್ತೇನು..? ಇಷ್ಟೆಲ್ಲ
ಯಾಕೆ..

ರೈಲ್ವೆ ಸ್ಟೇಷನ್‌ನಲ್ಲಿ ಹಾಡುತ್ತಿದ್ದ ರಾಣು ಮಂಡಾಲ್ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದು ಕೂಡ ಇದೇ ಅದೃಷ್ಟದಿಂದ ಅಲ್ಲವೇ..? ಇದೇ ಸಾಲಿಗೆ ಸೇರಿಕೊಳ್ಳುವ ಬಾಲಿವುಡ್‌ನ ಮತ್ತೊಬ್ಬ ಚೆಲುವೆ ತೃಪ್ತಿ ದಿಮ್ರಿ ಸದ್ಯ ಮತ್ತೊಂದು ಸುವರ್ಣ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ.

Tripti Dimri Replaces Deepika Padukone in Prabhas s Spirit Reunites With Animal Director

ಹೌದು, ಅನಿಮಲ್ ಚಿತ್ರದ ಮೂಲಕ ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ಭಾರತದೆಲ್ಲೆಡೆ ಮನೆ ಮಾತಾದ ತೃಪ್ತಿ ದಿಮ್ರಿ ಸದ್ಯ ತಮ್ಮ ವೃತ್ತಿಯ ಕಡೆ ಗಮನ ಕೊಡ್ತಿದ್ದಾರೆ.

ಅನಿಮಲ್ ನಂತರ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಬ್ಯಾಡ್ ನ್ಯೂಸ್ .. ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ .. ಭೂಲ್ ಭೂಲಯ್ಯ 3 ಚಿತ್ರಗಳಲ್ಲಿ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆಯೂರುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇಂಥಾ ತೃಪ್ತಿ ದಿಮ್ರಿ ಇದೀಗ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವುದೇ ಈ ಕ್ಷಣದ ತಾಜಾ ಸುದ್ದಿ. ಹೌದು, ಅನಿಮಲ್ ಚಿತ್ರದ ಮೂಲಕ ತೃಪ್ತಿಯ ಬದುಕು ಬದಲಿಸಿದ ಸಂದೀಪ್ ರೆಡ್ಡಿ ವಂಗಾ ಸದ್ಯ ಪ್ರಭಾಸ್ ಜೊತೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಸ್ಪಿರಿಟ್ ಈ ಚಿತ್ರದ ಹೆಸರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರದಲ್ಲಿ ಪ್ರಭಾಸ್ ಎದುರು ದೀಪಿಕಾ ಪಡುಕೋಣೆ ನಾಯಕಿಯಾಗಬೇಕಿತ್ತು.

ದೀಪಿಕಾ ಪಡುಕೋಣೆ ಜೊತೆ ಮಾತುಕತೆಯೆಲ್ಲವೂ ನಡೆದಿತ್ತು. ದೀಪಿಕಾ ಪಡುಕೋಣೆ ₹20ಕೋಟಿ ಸಂಭಾವನೆಯನ್ನು ಕೇಳಿದ್ದಾರೆ ಎನ್ನುವ ಸುದ್ದಿ ಕೂಡ ತುಂಬಾನೇ ಸದ್ದು ಮಾಡಿತ್ತು. ಆದರೆ, ಇದೇ ಸಮಯದಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ದೀಪಿಕಾ ನಡುವೆ ಭಿನ್ನಾಭಿಪ್ರಾಯ ಕೂಡ ಮೂಡಿತು.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ₹20 ಕೋಟಿಯ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದ ದೀಪಿಕಾ ಪಡುಕೋಣೆ ಆ ನಂತರ ಚಿತ್ರದ ಗಳಿಕೆಯಲ್ಲಿ ಪಾಲನ್ನು ಕೂಡ ಕೇಳಿದ್ದರು. ಇದು ಮಾತ್ರವಲ್ಲದೇ ಕೆಲ ಷರತ್ತುಗಳನ್ನು ಕೂಡ ಹಾಕಿದ್ದರು.ಯಾವುದೇ ಕಾರಣಕ್ಕೂ ತೆಲುಗಿನಲ್ಲಿ ಸಂಭಾಷಣೆಗಳನ್ನು ಹೇಳುವುದಿಲ್ಲ ಎಂದು ಪಟ್ಟು ಹಿಡಿದು ಕುಂತರು. 8 ಗಂಟೆ ಕೆಲಸ ಮಾಡಿದ ನಂತರ ಸೆಟ್‌ನಲ್ಲಿ ಒಂದು ಸೆಕೆಂಡ್ ಕೂಡ ಇರುವುದಿಲ್ಲ ಎಂದು ರಾಗ ಎಳೆಯಲು ಶುರು ಮಾಡಿದರು.

ದೀಪಿಕಾ ಪಡುಕೋಣೆ ಅವರ ಈ ಷರತ್ತುಗಳು ಮತ್ತು ಅವರ ವರ್ತನೆಗಳಿಂದ ಬೇಸತ್ತ ಸಂದೀಪ್ ರೆಡ್ಡಿ ವಂಗಾ, ದೀಪಿಕಾ ಪಡುಕೋಣೆಯ ಬದಲು ಬೇರೆ ನಾಯಕಿಯ ಹುಡುಕಾಟಕ್ಕೆ ಮುಂದಾಗಿದ್ದರು. ತೃಪ್ತಿ ದಿಮ್ರಿಯ ಅದೃಷ್ಟ ಮತ್ತೊಮ್ಮೆ ಅನಿಮಲ್ ನಿರ್ದೇಶಕನ ಜೊತೆ ಕೆಲಸ ಮಾಡುವಂತೆ ಮಾಡಿತು. ದೀಪಿಕಾ ಪಡುಕೋಣೆಯ ಜಾಗಕ್ಕೆ ಕರೆದುಕೊಂಡು ಬಂದು ಕೂರಿಸಿತು.

ಸದ್ಯ ಸ್ಪಿರಿಟ್ ಚಿತ್ರಕ್ಕೆ ಆಯ್ಕೆಯಾಗಿರುವ ತೃಪ್ತಿ ದಿಮ್ರಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡು ಅವಕಾಶ ನೀಡಿದ ಸಂದೀಪ್ ರೆಡ್ಡಿ ವಂಗಾಗೆ ಧನ್ಯವಾದವನ್ನು ಹೇಳಿದ್ದಾರೆ. ಇನ್ನುಳಿದಂತೆ ಸ್ಪಿರಿಟ್ ಚಿತ್ರ ಸ್ಪಿರಿಟ್ ತೆಲುಗು ಚಿತ್ರವಲ್ಲ ಬದಲಿಗೆ ಪ್ಯಾನ್ ಇಂಡಿಯಾ ಸಿನಿಮಾ. ತೆಲುಗಿನಲ್ಲಿ ನಿರ್ಮಾಣವಾಗುವ ಈ ಚಿತ್ರ ಆ ನಂತರ ಹಿಂದಿ ಸೇರೆ ಬೇರೆ ಭಾಷೆಗಳಿಗೆ ಡಬ್ ಆಗಲಿದೆ. ಚಿತ್ರದ ಚಿತ್ರೀಕರಣ ಶೀಘ್ರದಲ್ಲಿ ಶುರುವಾಗಲಿದೆ.

More from Filmibeat

English summary
Actress Tripti Dimri has replaced Deepika Padukone in Prabhas’s upcoming film Spirit, directed by Sandeep Reddy Vanga. This marks Tripti’s second collaboration with the director after their successful work together in Animal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X