For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ 'ಲೂಸಿಫರ್' ರಿಮೇಕ್ ನಲ್ಲಿ ಸ್ಟಾರ್ ನಟಿ; 15 ವರ್ಷದ ಬಳಿಕ ಮತ್ತೆ ಒಂದಾಗುತ್ತಾ ಈ ಜೋಡಿ?

  |

  ಮೆಗಾ ಸ್ಟಾರ್ ಚಿರಂಜೀವಿ ಸದ್ಯ ಆಚಾರ್ಯ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿರಂಜೀವಿ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ.

  ಇತ್ತೀಚಿಗಷ್ಟೆ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಂದಹಾಗೆ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಗಿಯುವ ಮೊದಲೇ ಚಿರಂಜೀವಿ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಚಾರ್ಯ ಬಳಿಕ ಮೆಗಾ ಸ್ಟಾರ್ ಮಲಯಾಳಂ ಸೂಪರ್ ಹಿಟ್ ಲೂಸಿಫರ್ ರಿಮೇಕ್ ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ದಕ್ಷಿಣದ ಸ್ಟಾರ್ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಸ್ಟಾರ್ ನಿರ್ದೇಶಕನ ಜೊತೆ 154ನೇ ಚಿತ್ರ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿಸ್ಟಾರ್ ನಿರ್ದೇಶಕನ ಜೊತೆ 154ನೇ ಚಿತ್ರ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿ

  ಹೌದು, ಮೆಗಾ ಸ್ಟಾರ್ ಜೊತೆ ತ್ರಿಷಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಂದಹಾಗೆ ತ್ರಿಷಾ ಈ ಮೊದಲು ಆಚಾರ್ಯ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾದಿಂದ ಹೊರನಡೆದಿದ್ದರು. ಇದೀಗ ಮತ್ತೆ ಚಿರಂಜೀವಿಗೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಚಿರಂಜೀವಿ ಮತ್ತು ತ್ರಿಷಾ 2006 ರಲ್ಲಿ ರಿಲೀಸ್ ಆಗಿದ್ದ ಸ್ಟ್ಯಾಲಿನ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ನಂತರ ಇಬ್ಬರು ಮತ್ತೆ ತೆರೆಹಂಚಿಕೊಂಡಿಲ್ಲ. ಬಳಿಕ ಆಚಾರ್ಯ ಚಿತ್ರದಲ್ಲಿ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒಲಿದು ಬಂದಿತ್ತು. ಆದರೆ ಆಚಾರ್ಯ ಸಿನಿಮಾದಿಂದನೂ ತ್ರಿಷಾ ಹೊರನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ಲೂಸಿಫರ್ ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 15 ವರ್ಷದ ಬಳಿಕ ಮತ್ತೆ ಒಂದಾಗುತ್ತಾ ಈ ಜೋಡಿ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  ಕಾಡಾನೆಗಳ ಜೊತೆ ಕಾಣಿಸಿಕೊಂಡ ಸ್ಯಾಂಡಲ್ ವುಡ್ ಸಲಗ | Filmibeat Kannada

  ಚಿರಂಜೀವಿ ಅವರ 153ನೇ ಸಿನಿಮಾ ಲೂಸಿಫರ್ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಮೋಹನ್ ರಾಜ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಚಾರ್ಯ ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ಚಿರಂಜೀವಿ ಲೂಸಿಫರ್ ರಿಮೇಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ತ್ರಿಷಾ ಇರ್ತಾರಾ ಎನ್ನುವುದನ್ನು ಕಾದುನೋಬೇಕು.

  English summary
  Actress Trisha likely to be paired opposite Chiranjeevi in lucifer telugu remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X