For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸಿನಿಮಾದಿಂದ ಹೊರಬಂದ ತ್ರಿಷಾ ಜಾಗಕ್ಕೆ ಸ್ಟಾರ್ ನಟಿಯ ಎಂಟ್ರಿ

  |

  ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭಿಸಿರುವ ಆಚಾರ್ಯ ನಾಯಕಿ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿ ಇದೆ. ಮೆಗಾ ಸ್ಟಾರ್ ಸಿನಿಮಾ ಅಂದ್ಮೇಲೆ ನಾಯಕಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ತುಸು ಹೆಚ್ಚೆ ಇರುತ್ತೆ.

  ಸಾಧುಕೋಕಿಲಾ ಗೆ ಟಾಂಗ್ ಕೊಟ್ಟ ತಾರ | Shivarjuna | Tara | Sadhu Kokila | Filmibeat kannada

  ಈಗಾಗಲೆ ಚಿರಂಜೀವಿಗೆ ನಾಯಕಿಯಾಗಿ ಕೃಷ್ಣ ಸುಂದರಿ ತ್ರಿಷಾ ಆಯ್ಕೆಯಾಗಿದ್ದರು. ಮೆಗಾ ಸ್ಟಾರ್ ಜೊತೆ ತ್ರಿಷಾ ಮತ್ತೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಸಹ ಸಂತಸಪಟ್ಟಿದ್ದರು. ಆದರೆ ತ್ರಿಷಾ ಚಿತ್ರದಿಂದ ದಿಢೀರ್ ಹೊರಬಂದು ಅಭಿಮಾನಿಗಳಿಗೆ ಆಘಾತವುಂಟು ಮಾಡಿದ್ದಾರೆ. ಅಂದ್ಹಾಗೆ ಭಿನ್ನಾಭಿಪ್ರಾಯದ ಕಾರಣ ಸಿನಿಮಾದಿಂದ ಹೊರ ಬಂದಿರುವುದಾಗಿ ತ್ರಿಷಾ ಹೇಳಿಕೊಂಡಿದ್ದಾರೆ. ಮುಂದೆ ಓದಿ..

  ಚಿರಂಜೀವಿ ಸಿನಿಮಾದ ಟೈಟಲ್ ರಿವೀಲ್: ಬಾಯಿತಪ್ಪಿ ಚಿತ್ರದ ಹೆಸರು ಹೇಳಿದ ಮೆಗಾಸ್ಟಾರ್ಚಿರಂಜೀವಿ ಸಿನಿಮಾದ ಟೈಟಲ್ ರಿವೀಲ್: ಬಾಯಿತಪ್ಪಿ ಚಿತ್ರದ ಹೆಸರು ಹೇಳಿದ ಮೆಗಾಸ್ಟಾರ್

  ಸ್ಟ್ಯಾಲಿನ್ ಸಿನಿಮಾದಲ್ಲಿ ಅಭಿನಯಿಸಿದ್ದ ಜೋಡಿ

  ಸ್ಟ್ಯಾಲಿನ್ ಸಿನಿಮಾದಲ್ಲಿ ಅಭಿನಯಿಸಿದ್ದ ಜೋಡಿ

  ಚಿರಂಜೀವಿ ಮತ್ತು ತ್ರಿಷಾ 2006 ರಲ್ಲಿ ರಿಲೀಸ್ ಆಗಿದ್ದ ಸ್ಟ್ಯಾಲಿನ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ನಂತರ ಇಬ್ಬರು ಮತ್ತೆ ತೆರೆಹಂಚಿಕೊಂಡಿಲ್ಲ. ಸದ್ಯ ಆಚಾರ್ಯ ಚಿತ್ರದಲ್ಲಿ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒಲಿದು ಬಂದಿತ್ತು. ಆದರೀಗ ಆಚಾರ್ಯ ಸಿನಿಮಾದಿಂದನೂ ಹೊರನಡೆದಿದ್ದಾರೆ. ಈ ಬಗ್ಗೆ ತ್ರಿಷಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ತ್ರಿಷಾ ಹೇಳಿದ್ದೇನು?

  "ಕೆಲವು ವಿಚಾರಗಳು ಪ್ರಾರಂಭದಲ್ಲಿ ಹೇಳಿದ್ದಕ್ಕಿಂತ, ಚರ್ಚೆ ಮಾಡಿದ್ದಕ್ಕಿಂತ ಭಿನ್ನವಾಗಿರುತ್ತವೆ. ಕೆಲವು ಭಿನ್ನಾಭಿಪ್ರಾಯದ ಕಾರಣ ಚಿರಂಜೀವಿ ಸರ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ತಂಡಕ್ಕೆ ಒಳ್ಳೆಯದಾಗಲಿ. ಮತ್ತೊಂದು ಅದ್ಭುತ ಪ್ರಾಜೆಕ್ಟ್ ಮೂಲಕ ತೆಲುಗು ಅಭಿಮಾನಿಗಳ ಮುಂದೆ ಬರುತ್ತೇನೆ" ಎಂದು ಬರೆದುಕೊಂಡಿದ್ದಾರೆ.

  ಮೆಗಾ ಸ್ಟಾರ್ ಮಾಡಿದ ಒಂದು ಫೋನ್ ಕರೆ ಹಿರಿಯ ನಟನ ಜೀವ ಉಳಿಸಿತುಮೆಗಾ ಸ್ಟಾರ್ ಮಾಡಿದ ಒಂದು ಫೋನ್ ಕರೆ ಹಿರಿಯ ನಟನ ಜೀವ ಉಳಿಸಿತು

  ತ್ರಿಷಾ ಜಾಗಕ್ಕೆ ಕಾಜಲ್ ಎಂಟ್ರಿ

  ತ್ರಿಷಾ ಜಾಗಕ್ಕೆ ಕಾಜಲ್ ಎಂಟ್ರಿ

  ತ್ರಿಷಾ ಹೊರಬರುತ್ತಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಈಗ ತ್ರಿಷಾ ಜಾಗಕ್ಕೆ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿಯಾಗಿದೆ. ತ್ರಿಷಾ ಬದಲಿಗೆ ಟಿ ಕಾಜಲ್ ಅಗರ್ ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಕಾಜಲ್ ಜೊತೆ ಮಾತುಕತೆ ನಡೆಸಿ, ಸಿನಿಮಾಗೆ ಲುಕ್ ಟೆಸ್ಟ್ ಕೂಡ ಆಗಿದೆಯಂತೆ.

  ಚಿರಂಜೀವಿ-ಮಹೇಶ್ ಬಾಬು ಮೆಗಾ ಸಿನಿಮಾ: ಧೂಳೆಬ್ಬಿಸಲಿದೆ ಪ್ರಾಜೆಕ್ಟ್!ಚಿರಂಜೀವಿ-ಮಹೇಶ್ ಬಾಬು ಮೆಗಾ ಸಿನಿಮಾ: ಧೂಳೆಬ್ಬಿಸಲಿದೆ ಪ್ರಾಜೆಕ್ಟ್!

  ಇಂಡಿಯನ್-2 ಸಿನಿಮಾದಲ್ಲಿ ಕಾಜಲ್

  ಇಂಡಿಯನ್-2 ಸಿನಿಮಾದಲ್ಲಿ ಕಾಜಲ್

  ಇತ್ತೀಚಿಗೆ ಕಾಜಲ್ ಅಗರ್ ವಾಲ್ ಸಿನಿಮಾಗಳು ಕಡಿಮೆ ಆಗಿವೆ. ಸ್ಟಾರ್ ನಟಿಗೆ ಅವಕಾಶಗಳು ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕಾಜಲ್ ಬಳಿ ಸದ್ಯ ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಿಟ್ಟರೆ ಬೇರೆ ಯಾವ ಪ್ರಾಜೆಕ್ಟ್ ಕಾಜಲ್ ಬಳಿ ಇಲ್ಲ. ಹಾಗಾಗಿ ಮೆಗಾ ಸ್ಟಾರ್ ಸಿನಿಮಾದಲ್ಲಿ ಕಾಣಿಕೊಳ್ಳುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

  English summary
  Actress Trisha walk out from Mega star Chiranjeevi's Acharya film. Trisha to be replaced by Actress Kajal Aggarwal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X