For Quick Alerts
  ALLOW NOTIFICATIONS  
  For Daily Alerts

  ಭೀಮ್ಲಾ ನಾಯಕ್ ಚಿತ್ರದಲ್ಲಿ ತ್ರಿವಿಕ್ರಮ್ ಮ್ಯಾಜಿಕ್: ಆ ಒಂದು ದೃಶ್ಯಕ್ಕೆ ರಾಮಾಯಣವೇ ಪ್ರೇರಣೆ!

  |

  ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭೀಮ್ಲಾ ನಾಯಕ್' ತೆರೆಗೆ ಅಪ್ಪಳಿಸಿದ್ದು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. 'ಭೀಮ್ಲಾ ನಾಯಕ್' ಎಂಬುದು ಅಹಂಕಾರವನ್ನು ಹೊಂದಿರುವ ಇಬ್ಬರು ವ್ಯಕ್ತಿಗಳ ನಡುವಿನ ಸಂಘರ್ಷದ ಕಥಾಹಂದರವನ್ನು ಹೊಂದಿದೆ. ಅವರಲ್ಲಿ ಒಬ್ಬರು ಭೀಮ್ಲಾ ನಾಯಕ್ (ಪವನ್ ಕಲ್ಯಾಣ್), ಮೂಲಸೌಕರ್ಯಗಳಿಲ್ಲದ ಒಂದು ಹಿಂದುಳಿದ ಪ್ರದೇಶದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದರೆ, ಇನ್ನೊಬ್ಬರ ಪ್ರದೇಶದಲ್ಲಿ ರಾಜಕೀಯವಾಗಿ ಅತ್ಯಂತ ಪ್ರಭಾವಿತನಾಗಿ ವ್ಯಕ್ತಿ ಡೇನಿಯಲ್ ಶೇಖರ್ (ರಾಣಾ ದಗ್ಗುಬಾಟಿ) ಇಬ್ಬರ ಒಳಗಿನ ಪುರುಷ ಅಹಂಕಾರ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ, ಎರಡೂ ಕಡೆಯ ಕುಟುಂಬಗಳು ಹೇಗೆ ಸಂಘರ್ಷದಲ್ಲಿ ಭಾಗಿಯಾಗುತ್ತಾರೆ ಎಂಬುದು ಚಿತ್ರದ ಮುಖ್ಯ ಕಥಾವಸ್ತು.

  ಅಯ್ಯಪ್ಪನುಂ ಕೊಶಿಯುಂ ಚಿತ್ರದ ರಿಮೇಕ್: ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಅವರ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಹೆಚ್ಚಿನ ಅನುಕೂಲವಾಗಿದೆ. ಮೂಲ ಆವೃತ್ತಿಯಾದ "ಅಯ್ಯಪ್ಪನುಂ ಕೊಶಿಯುಂ" ನಿಂದ ಆತ್ಮವನ್ನು ತೆಗೆದುಕೊಂಡಿರುವ ತಿವಿಕ್ರಮ ಶ್ರೀನಿವಾಸ್ ತನ್ನದೇ ಆದ ಶೈಲಿಯಲ್ಲಿ ತೆಲುಗು ಜನರ ಮನೋರಂಜನೆಗೆ ತಕ್ಕಂತೆ ಚಿತ್ರಕತೆ ಬರೆದು ರಂಜಿಸಿದ್ದಾರೆ. ತ್ರಿವಿಕ್ರಮ್ ಅವರ ವಿಶಿಷ್ಟವಾದ ಪ್ರಾಸಬದ್ಧವಾದ ಪಂಚ್ ಡೈಲಾಗ್‌ಗಳು ಚಿತ್ರದುದ್ದಕ್ಕೂ ಚೆನ್ನಾಗಿ ಕೆಲಸ ಮಾಡಿದೆ. ಸಾಗರ್ ಕೆ ಚಂದ್ರು ಅವರ ನಿರ್ದೇಶನ ಉತ್ತಮವಾಗಿದೆ ಏಕೆಂದರೆ ಅವರು ಪವನ್ ಮತ್ತು ರಾಣಾ ನಡುವಿನ ಸಂಘರ್ಷದ ಮುಖಾಮುಖಿಯ ದೃಶ್ಯಗಳನ್ನು ಅತ್ಯಂತ ಸಹಜ ಮತ್ತು ಆಪ್ತವಾಗಿ ಸೆರೆಹಿಡಿದಿದ್ದಾರೆ. 'ಭೀಮ್ಲಾ ನಾಯಕ್' ಪವನ್ ಕಲ್ಯಾಣ್ ಮತ್ತು ರಾಣಾ ನಡುವಿನ ಅಹಂಕಾರದ ಸಂಘರ್ಷ ಪೂರ್ಣ ಮನೋರಂಜನೆಯಾಗಿ ಮಾಸ್ ಪ್ರೇಕ್ಷಕರನ್ನು ಎಂಟರ್ಟೈನ್ ಮಾಡಿದೆ. ನಾಯಕ ನಟರ ನಡುವಿನ ಮುಖಾಮುಖಿ ದೃಶ್ಯಗಳು ಮತ್ತು ತ್ರಿವಿಕ್ರಮ್ ಮಾರ್ಕ್ ಡೈಲಾಗ್‌ಗಳು 'ಭೀಮ್ಲಾ ನಾಯಕ್' ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

  ಪವನ್ ಕಲ್ಯಾಣ್ ಚಿತ್ರದ ಪ್ರಮುಖ ಆಸ್ತಿ

  ಪವನ್ ಕಲ್ಯಾಣ್ ಚಿತ್ರದ ಪ್ರಮುಖ ಆಸ್ತಿ

  ಪವನ್ ಕಲ್ಯಾಣ್ ಅವರ ಶಕ್ತಿಯುತ ಮತ್ತು ಭವ್ಯವಾದ ಪರದೆಯ ಉಪಸ್ಥಿತಿಯು ಕಥೆಗೆ ಜೀವ ತುಂಬುತ್ತದೆ. ಚಿತ್ರದುದ್ದಕ್ಕೂ ಆಕ್ರಮಣಕಾರಿ ಸ್ವಭಾವದ ಪೋಲೀಸ್ ಪಾತ್ರದಲ್ಲಿ ಪವನ್ ಶ್ಲಾಘನೀಯ ಕೆಲಸ ಮಾಡಿದ್ದಾರೆ. ನಿಸ್ಸಂದೇಹವಾಗಿ, ರಾಣಾ ದಗ್ಗುಬಾಟಿ ಶೋ ಸ್ಟೀಲರ್. ಅವರ ಗೆಟಪ್ ಆಗಿರಲಿ ಅಥವಾ ವರ್ತನೆಯಾಗಿರಲಿ, ರಾಣಾ ಅವರು ತಮ್ಮ ಅದ್ಭುತ ನಟನೆಯಿಂದ ಅಚ್ಚರಿ ಮೂಡಿಸಿದ್ದಾರೆ. ಭೀಮ್ಲಾ ನಾಯಕ್ ಅವರ ಪತ್ನಿಯಾಗಿ ನಿತ್ಯಾ ಮೆನನ್ ಚೆನ್ನಾಗಿಯೇ ಅಭಿನಯಿಸಿದ್ದಾರೆ, ಇವರಿಬ್ಬರ ನಡುವಿನ ಕೆಮಿಸ್ಟ್ರಿ ಕೂಡ ಚೆನ್ನಾಗಿ ವರ್ಕ್ ಔಟ್ ಆಗಿದೆ. ಯಂಗ್ ಬ್ಯೂಟಿ ಸಂಯುಕ್ತಾ ಮೆನನ್ ಡೇನಿಯಲ್ ಅವರ ಪತ್ನಿಯಾಗಿ ಡಿಸೆಂಟ್ ಅಭಿನಯ, ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ಅವರ ನಟನೆಗೆ ಒಳ್ಳೆ ಅವಕಾಶ ದೊರೆತಿದೆ. ಇತರ ನಟರಾದ ಮುರಳಿ ಶರ್ಮಾ, ಸಮುದ್ರಕನಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

  ತೆರೆ ಹಿಂದಿನ ಹೀರೋ ಥಮನ್

  ತೆರೆ ಹಿಂದಿನ ಹೀರೋ ಥಮನ್

  ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಥಮನ್ ಅವರ ಹವಾ ಜೋರಾಗಿದೆ. ಮೊನ್ನೆ ಬಿಡುಗಡೆಗೊಂಡು ಯಶಸ್ವಿಯಾಗಿರುವ 'ಅಖಂಡ' ಇರಬಹುದು ಈಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಭೀಮ್ಲಾ ಇರಬಹುದು ಥಮನ್ ವರ ಸಂಗೀತ ಮತ್ತು ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಕೊಂಡು ಬಂದಿದೆ. ಭೀಮ್ಲಾ ನಾಯಕ ಚಿತ್ರದಲ್ಲಿ ಕೂಡ ಥಮನ್ ಆಫ್-ಸ್ಕ್ರೀನ್ ನಾಯಕನಾಗಿದ್ದು, ಅವರ ಹಿನ್ನೆಲೆ ಸಂಗೀತವು ಚಿತ್ರದ ಮೂಡ್ ಅನ್ನು ಚೆನ್ನಾಗಿ ಮೇಲಕ್ಕೆತ್ತುತ್ತದೆ. ಹಾಡುಗಳಿಗೆ ಬರುವುದಾದರೆ, 'ಲಾಲಾ ಭೀಮಲಾ...' ತೆರೆಯ ಮೇಲೆ ನೋಡುವುದಕ್ಕೆ ಒಂದು ರಸದೌತಣ, ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ವೈವ್ಸ್ ಗಳಿಸಿದ್ದ 'ಅಂಥಾ ಇಷ್ಟಂ' ಕಣ್ಮನ ಸೆಳೆಯುತ್ತದೆ. ರವಿ ಕೆ ಚಂದ್ರನ್ ಅವರ ಛಾಯಾಗ್ರಹಣ ಕೆಲಸವು ಉನ್ನತ ದರ್ಜೆಯದ್ದಾಗಿದೆ. ಅದರಲ್ಲೂ ನಲ್ಲಮಲ ಅರಣ್ಯ ವಲಯದ ದೃಶ್ಯಗಳನ್ನು ಅದ್ಬುತವಾಗಿ ರವಿ.ಕೆ. ಚಂದ್ರನ್ ಸೆರೆಹಿಡಿದಿದ್ದಾರೆ. ನವೀನ್ ನೂಲಿ ಅವರ ಸಂಕಲನ ಚುರುಕಾಗಿದೆ. ಪ್ರೊಡಕ್ಷನ್ ಡಿಸೈನ್ ಮತ್ತು ಸೆಟ್ ವರ್ಕ್ ಕೂಡ ಚಿತ್ರದ ಹೈಲೈಟ್‌ ಗಳಲ್ಲಿ ಒಂದು ಎಂದು ಹೇಳಬಹುದು.

  ಭೀಮ್ಲಾ ನಾಯಕ್‌ನಲ್ಲಿ ತ್ರಿವಿಕ್ರಮ್ ಮಾತುಗಳ ಮ್ಯಾಜಿಕ್

  ಭೀಮ್ಲಾ ನಾಯಕ್‌ನಲ್ಲಿ ತ್ರಿವಿಕ್ರಮ್ ಮಾತುಗಳ ಮ್ಯಾಜಿಕ್

  ಪವನ್ ಕಲ್ಯಾಣ್ ಅಭಿಮಾನಿಗಳಿಗೆ 'ಭೀಮ್ಲಾ ನಾಯಕ್' ಫುಲ್ ಲೆಂತ್ ಎಂಟರ್ಟೈನ್ಮೆಂಟ್ ಕೊಟ್ಟಿದೆ. ಚಿತ್ರದ ಶೂಟಿಂಗ್ ಆರಂಭವಾದಾಗಿನಿಂದ ಪ್ರೇಕ್ಷಕರು ಈ ಬಗ್ಗೆ ಊಹೆ ಮಾಡುತ್ತಲೇ ಇದ್ದರು. ಮಲಯಾಳಂನ 'ಅಯ್ಯಪನುಂ ಕೊಶಿಯುಂ' ನೋಡಿದ ಪ್ರೇಕ್ಷಕರು ಪವನ್ ಕಲ್ಯಾಣ್ ಅವರ ಕಟೌಟ್ ಗೆ ಇದೇ ಸರಿಯಾದ ಸಿನಿಮಾನ? ಅಂತ ಯೋಚನೆ ಮಾಡುತ್ತಿದ್ದರು. ಏಕೆಂದರೆ ಮೂಲ ಮಲಯಾಳಂ ಅವತರಣಿಕೆ ದೊಡ್ಡ ಮಟ್ಟದ ಮಾಸ್ ಎಲಿಮೆಂಟ್‌ಗಳನ್ನು ಹೊಂದಿರಲಿಲ್ಲ. ಹೀಗಾಗಿಯೇ ಪವನ್ ಅಭಿಮಾನಿಗಳು ಈ ಚಿತ್ರದ ಬಗ್ಗೆ ಆರಂಭದಲ್ಲಿ ತುಸು ನಿರಾಸೆಯನ್ನು ಹೊಂದಿದ್ದರು. ಆದರೆ ಯಾವಾಗ ತ್ರಿವಿಕ್ರಮ್ ಶ್ರೀನಿವಾಸ್ ಇದಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಾರೆ ಎಂಬ ಸುದ್ದಿ ಹೊರಬಿತ್ತು ಪವನ್ ಕಲ್ಯಾಣ್ ಅಭಿಮಾನಿಗಳು ಥ್ರಿಲ್ ಆದರು.

  ತ್ರಿವಿಕ್ರಮ್ ಚಿತ್ರದ ಮೂಲ ಕತೆಯನ್ನು ತೆಗೆದುಕೊಂಡು ತೆಲುಗು ನೇಟಿವಿಟಿಗೆ ತಕ್ಕಂತೆ ಅದರ ಜೊತೆಗೆ ಪವನ್ ಅವರ ಮ್ಯಾನರಿಸಂಗೆ ಸರಿಹೊಂದುವಂತಹ ಸ್ಕ್ರಿಪ್ಟ್ ತಯಾರಿಸುತ್ತಾರೆ ಅಂತ ಅಭಿಮಾನಿಗಳು ನಿರೀಕ್ಷಿಸಿದ್ದರು ಮತ್ತು ಅವರ ನಿರೀಕ್ಷೆ ಹುಸಿಯಾಗಲಿಲ್ಲ. ತ್ರಿವಿಕ್ರಮ್ ಎಂಬ ಮಾಂತ್ರಿಕ ಅದನ್ನೇ ಮಾಡಿದ್ದು, ಕೇವಲ ಚಿತ್ರದ ಆತ್ಮವನ್ನು ತೆಗೆದುಕೊಂಡು ಕಥೆಯನ್ನು ಹೊಸದೊಂದು ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ಹೀಗಾಗಿಯೇ ಮೂಲ ಅವತರಣಿಕೆಯಲ್ಲಿ ಕಾಣದ ಅನೇಕ ದೃಶ್ಯಗಳು ಇಲ್ಲಿ ನಮಗೆ ಕಾಣಸಿಗುತ್ತದೆ. ಈಗ ಇಂತಹದೇ ಒಂದು ದೃಶ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಅದಕ್ಕೆ ಮೂಲ ಪೇರಣೆ ರಾಮಾಯಣದ ವಾಲಿ ಮತ್ತು ಸುಗ್ರೀವರ ಕತೆಯಿಂದ ಕೂಡ ಹೇಳಲಾಗುತ್ತಿದೆ.

  ವಾಲಿ-ಸುಗ್ರೀವರ ಕದನದ ಕಥೆ

  ವಾಲಿ-ಸುಗ್ರೀವರ ಕದನದ ಕಥೆ

  ತ್ರಿವಿಕ್ರಮ್ ಅವರ ಬರವಣಿಗೆಯ ಶೈಲಿಯ ಬಗ್ಗೆ ತೆಲುಗು ಪ್ರೇಕ್ಷಕರಿಗೆ ಮೊದಲಿನಿಂದಲೂ ತಿಳಿದಿರುವುದೇ. ಒಂದು ಕಾಲದಲ್ಲಿ ಬರಹಗಾರರಾಗಿ ವೃತ್ತಿ ಜೀವನ ಆರಂಭಿಸಿದ ತ್ರಿವಿಕ್ರಮ್, ನಿಧಾನವಾಗಿ ನಿರ್ದೇಶಕರಾಗಿ ಬಡ್ತಿ ಪಡೆದವರು. ಪ್ರಸ್ತುತ ಎಸ್ಎಸ್ ರಾಜಮೌಳಿ -ಸುಕುಮಾರ್ ಜೊತೆಯಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ತೆಲುಗಿನ ಟಾಪ್ ನಿರ್ದೇಶಕರ ಪೈಕಿ ಒಬ್ಬರಾಗಿದ್ದಾರೆ.ನಿರ್ದೇಶಕರಾದ ನಂತರವೂ ಕೆಲವು ಚಿತ್ರಗಳಿಗೆ ಕಥೆ, ಸಂಭಾಷಣೆಗಳನ್ನು ಒದಗಿಸಿದ್ದಾರೆ. ತ್ರಿವಿಕ್ರಮ್ ಮತ್ತೊಮ್ಮೆ ತಮ್ಮ ಗೆಳೆಯ ಪವನ್ ಕಲ್ಯಾಣ್‌ಗಾಗಿ ಭೀಮ್ಲಾ ನಾಯಕ್‌ಗೆ ಲೇಖನಿಯನ್ನು ಹಿಡಿದಿದ್ದಾರೆ.

  ಭೀಮ್ಲಾ ನಾಯಕ್ ಒಂದು ಪರಿಪೂರ್ಣ ಸೇಡಿನ ನಾಟಕ. ಪವನ್ ಕಲ್ಯಾಣ್ ಮತ್ತು ರಾಣಾ ಪಾತ್ರಗಳು ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಆದರೆ ಈ ಪಾತ್ರಗಳ ನಡುವಿನ ಸಂಭಾಷಣೆ ಒಂದೇ ಆಗಿರಬೇಕು. ಈ ನಿಟ್ಟಿನಲ್ಲಿ ತ್ರಿವಿಕ್ರಮ್ ಮತ್ತೊಮ್ಮೆ ತಮ್ಮೊಳಗಿನ ಮಾತಿನ ಮಾಂತ್ರಿಕನನ್ನು ಸಂಪೂರ್ಣವಾಗಿ ತೆರೆದಿಟ್ಟಿದ್ದಾರೆ. ಅದರ ಹೊರತಾಗಿ, ಭೀಮ್ಲಾ ನಾಯಕ್‌ನಲ್ಲಿನ ಒಂದು ಪ್ರಮುಖ ದೃಶ್ಯವು ರಾಮಾಯಣದಿಂದಲೇ ಪ್ರೇರಿತವಾಗಿದೆ ಎಂದು ತೋರುತ್ತದೆ. ರಾಮಾಯಣದಲ್ಲಿ ವಾಲಿ ಮತ್ತು ಸುಗ್ರೀವನ ನಡುವಿನ ಯುದ್ಧದ ಸನ್ನಿವೇಶ ಎಲ್ಲರಿಗೂ ತಿಳಿದಿರುವಂತಹದೇ.

   ವಾಲಿಯು ಸುಗ್ರೀವನೊಡನೆ ಯುದ್ಧಕ್ಕೆ ಹೋಗುತ್ತಾನೆ

  ವಾಲಿಯು ಸುಗ್ರೀವನೊಡನೆ ಯುದ್ಧಕ್ಕೆ ಹೋಗುತ್ತಾನೆ

  ಆದರೆ, ಶ್ರೀರಾಮನು ವಾಲಿಯನ್ನು ಕೊಲ್ಲುವ ಮುಂಚೆಯೇ, ವಾಲಿಯು ಸುಗ್ರೀವನೊಡನೆ ಯುದ್ಧಕ್ಕೆ ಹೋಗುತ್ತಾನೆ. ಆ ಕ್ಷಣದಲ್ಲಿ ವಾಲಿಯು ಸುಗ್ರೀವನ ಭುಜದ ಮೇಲೆ ತನ್ನ ಪಾದವನ್ನು ಇಟ್ಟು ಅವನ ಕೈಯನ್ನು ಹಿಡಿದು ಕೊಲ್ಲಲು ಪ್ರಯತ್ನಿಸುತ್ತಾನೆ. ಹೀಗೆ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ನಿಂತು, ಹೃದಯಾಘಾತವಾಗಿ ವ್ಯಕ್ತಿ ಸಾಯುತ್ತಾನೆ. ಇಂತಹದೇ ಒಂದು ದೃಶ್ಯವನ್ನು. ಭೀಮಾ ನಾಯಕ್ ಚಿತ್ರದಲ್ಲಿ ರಾಣಾ ಮತ್ತು ಪವನ್ ಕಲ್ಯಾಣ್ ನಡುವೆ ತ್ರಿವಿಕ್ರಮ್ ಸ್ಕ್ರೀನ್ ಪ್ಲೇ ನಲ್ಲಿ ಅಡಪ್ಟ್ ಮಾಡಿದ್ದಾರೆ.

  ಪವನ್, ರಾಣಾ ಭುಜದ ಮೇಲೆ ಕಾಲು ಇಟ್ಟು ಹತ್ಯಾಯತ್ನಕ್ಕೆ ಮುಂದಾಗುತ್ತಾನೆ. ಇಡೀ ಸನ್ನಿವೇಶ ವಾಲಿ ಮತ್ತು ಸುಗ್ರೀವರ ನಡುವಿನ ಕಾದಾಟದಂತೆ ಚಿತ್ರೀಕರಣವಾಗಿದೆ. ಈ ದೃಶ್ಯವೇ ಚಿತ್ರದ ಪ್ರಮುಖ ಹೈಲೈಟ್ ಗಳಲ್ಲಿ ಒಂದಾಗಿದೆ.ಹೀಗಾಗಿಯೇ ಚಿತ್ರ ನೋಡಿದ ಅನೇಕರು ಆ ದೃಶ್ಯವನ್ನು ರಾಮಾಯಣದ ವಾಲಿ-ಸುಗ್ರೀವರ ಕದನದೊಂದಿಗೆ ಹೋಲಿಕೆ ಮಾಡಿ ಇದು ರಾಮಾಯಣದಿಂದ ಸ್ಫೂರ್ತಿ ಪಡೆದು ತ್ರಿವಿಕ್ರಮ್ ಬರೆದಿರಬಹುದು ಅಂತ ಮಾತನಾಡುತ್ತಿದ್ದಾರೆ. ಹಿಂದೆ ಕೂಡ ತ್ರಿವಿಕ್ರಮ್ ತಮ್ಮ ಅನೇಕ ಚಿತ್ರಗಳಲ್ಲಿ ಹೀಗೆಯೇ ಪುರಾಣಗಳಿಂದ ಸ್ಫೂರ್ತಿ ಪಡೆದು ಕೆಲವೊಂದು ದೃಶ್ಯಗಳನ್ನು ರಂಜನೀಯವಾಗಿ ಪ್ರಸ್ತುತಪಡಿಸಿದ್ದಾರೆ ಮತ್ತು ಆ ದೃಶ್ಯಗಳು ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ಕೂಡ ವಹಿಸಿದ್ದವು. ಈಗ ಭೀಮ್ಲಾ ನಾಯಕ್ ವಿಚಾರದಲ್ಲೂ ಕೂಡ ಇದು ಮತ್ತೊಮ್ಮೆ ಪುನರಾವರ್ತನೆಗೊಂಡಂತೆ ಕಾಣುತ್ತದೆ. ಇದೆಲ್ಲ ಏನು ಇರಬಹುದು 'ಭೀಮ್ಲಾ ನಾಯಕ್' ಚಿತ್ರವನ್ನು ಗೆಲ್ಲಿಸುವುದರಲ್ಲಿ ತ್ರಿವಿಕ್ರಮ್ ಅವರ ಲೇಖನ ಮಾತ್ರ ನಿಸ್ಸಂದೇಹವಾಗಿ ಕೆಲಸ ಮಾಡಿದೆ ಅಂತ ಹೇಳಲೇಬೇಕಾಗುತ್ತದೆ.

  English summary
  Trivikram Magic in bheemla Nayak: one of the scene has been written by taking inspiration from Ramayana.Trivikram Srinivas has proved himself through the film once again as a magician of words.
  Wednesday, March 2, 2022, 14:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X