ಮಹೇಶ್ ಬಾಬು, ಅಲ್ಲು ಅರ್ಜುನ್ ಆಯ್ತು: ರಶ್ಮಿಕಾ ಮುಂದಿನ ಹೀರೋ ಈ 'ಬಿಗ್' ಸ್ಟಾರ್.!

ಅದೃಷ್ಟ, ಅಂದ ಮತ್ತು ಪ್ರತಿಭೆ.. ಈ ಮೂರು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಒಲಿದು ಬಂದಿದೆ. ಪರಿಣಾಮ, ಬಣ್ಣದ ಬದುಕಿಗೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ ಬಹು ಬೇಡಿಕೆಯ ಹೀರೋಯಿನ್ ಆಗಿ ಮೆರೆಯುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

Recommended Video

ಈ ಐಶ್ವರ್ಯಾ ಪ್ರಸಾದ್ ಯಾರು ಗೊತ್ತಾ..? | FILMIBEAT KANNADA

ಸ್ಯಾಂಡಲ್ ವುಡ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಂತಹ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡ ಈ ಬ್ಯೂಟಿಗೆ ಟಾಲಿವುಡ್ ನಲ್ಲೂ ಡಿಮ್ಯಾಂಡ್ ಡಬಲ್ ಆಗಿದೆ.

'ಚಲೋ' ಚಿತ್ರದ ಮೂಲಕ ತೆಲುಗು ಸಿನಿ ಅಂಗಳಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಅಲ್ಲಿ ನಟ ವಿಜಯ್ ದೇವರಕೊಂಡ, ನಾನಿ, 'ಪ್ರಿನ್ಸ್' ಮಹೇಶ್ ಬಾಬು, ನಿತಿನ್ ನಂತಹ ಸ್ಟಾರ್ ಗಳ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೂ ನಟಿಸಲು ಸಜ್ಜಾಗುತ್ತಿರುವ ರಶ್ಮಿಕಾ ಮಂದಣ್ಣಗೆ ಇದೀಗ ಒಂದು 'ಬಿಗ್' ಆಫರ್ ಹುಡುಕಿಕೊಂಡು ಬರುವ ಮುನ್ಸೂಚನೆ ಸಿಕ್ಕಿದೆ. ಮುಂದೆ ಓದಿರಿ...

ರಶ್ಮಿಕಾಗೆ 'ಬಿಗ್' ಆಫರ್

ರಶ್ಮಿಕಾಗೆ 'ಬಿಗ್' ಆಫರ್

'ಚಲೋ', 'ಗೀತ ಗೋವಿಂದಂ', 'ಸರಿಲೇರು ನೀಕೆವ್ವರು' ಚಿತ್ರಗಳ ಮೂಲಕ ತೆಲುಗು ಮಂದಿಯನ್ನು ಇಂಪ್ರೆಸ್ ಮಾಡಿರುವ ನಟಿ ರಶ್ಮಿಕಾ ಮಂದಣ್ಣಗೆ ಇದೀಗ ದೊಡ್ಡ ಅವಕಾಶ ಸಿಗುವ ಸಾಧ್ಯತೆ ಇದೆ. ಟಾಲಿವುಡ್ ನ ಯಶಸ್ವಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಮುಂದಿನ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗುವ ನಿರೀಕ್ಷೆ ಇದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಹೀರೋ ಯಾರು.?

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಹೀರೋ ಯಾರು.?

'ಅಲಾ ವೈಕುಂಠಪುರಮುಲೋ' ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ತ್ರಿವಿಕ್ರಮ್ ಶ್ರೀನಿವಾಸ್ ಸದ್ಯ ಮುಂದಿನ ಪ್ರಾಜೆಕ್ಟ್ ನ ಕೈಗೆತ್ತಿಕೊಂಡಿದ್ದಾರೆ. ಟಾಲಿವುಡ್ ನ ಯಂಗ್ ಟೈಗರ್ ಜೂ.ಎನ್.ಟಿ.ಆರ್ ಗಾಗಿ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ಚಿತ್ರಕಥೆ ಫೈನಲ್ ಆಗಿದೆ.

ಜೂ.ಎನ್.ಟಿ.ಆರ್ ಜೊತೆಗೆ ರಶ್ಮಿಕಾ ರೊಮ್ಯಾನ್ಸ್.?

ಜೂ.ಎನ್.ಟಿ.ಆರ್ ಜೊತೆಗೆ ರಶ್ಮಿಕಾ ರೊಮ್ಯಾನ್ಸ್.?

ಟಾಲಿವುಡ್ ನ ಬಿಗ್ ಸ್ಟಾರ್ ಗಳ ಪೈಕಿ ಜೂ.ಎನ್.ಟಿ.ಆರ್ ಕೂಡ ಒಬ್ಬರು. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ, ದೊಡ್ಡ ಫ್ಯಾನ್ ಫಾಲೋವಿಂಗ್ ಹೊಂದಿರುವ ಜೂ.ಎನ್.ಟಿ.ಆರ್ ಜೊತೆಗೆ ರಶ್ಮಿಕಾ ಮಂದಣ್ಣ ರನ್ನ ತಮ್ಮ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಮಾಡುವ ಪ್ಲಾನ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ರವರಿಗಿದೆ.

ಹಿಟ್ ಜೋಡಿ

ಹಿಟ್ ಜೋಡಿ

'ಅತಡು', 'ಜಲ್ಸಾ', 'ಖಲೇಜ', 'ಅತ್ತಾರಿಂಟಿಕಿ ದಾರೇದಿ', 'ಅಲಾ ವೈಕುಂಠಪುರಮುಲೋ' ದಂತಹ ಹಿಟ್ ಸಿನಿಮಾಗಳನ್ನು ನೀಡಿ ಖ್ಯಾತಿ ಪಡೆದುಕೊಂಡಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಈಗಾಗಲೇ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಜೂ.ಎನ್.ಟಿ.ಆರ್ ಕಾಂಬಿನೇಶನ್ ನಲ್ಲಿ 'ಅರವಿಂದ ಸಮೇತ ವೀರ ರಾಘವ' ಚಿತ್ರ ಮೂಡಿ ಬಂದು ಹಿಟ್ ಆಗಿತ್ತು. ಇದೀಗ ಮತ್ತೆ ಜೂ.ಎನ್.ಟಿ.ಆರ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಒಂದಾಗಿದ್ದಾರೆ. ಈ ಹಿಟ್ ಜೋಡಿಯೊಂದಿಗೆ ರಶ್ಮಿಕಾ ಕೂಡ ಸೇರಿಕೊಳ್ತಾರಾ, ನೋಡೋಣ.

More from Filmibeat

English summary
Trivikram Srinivas is planning to bring Rashmika Mandanna to play lead in his movie with Jr NTR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X