Mahesh Babu: ರಿಯಲ್ ಸ್ಟಾರ್ ಉಪ್ಪಿ- ಸೂಪರ್ ಸ್ಟಾರ್ ಮಹೇಶ್ ಬಾಬು ಕಾಂಬಿನೇಶನ್‌ನಲ್ಲಿ ತ್ರಿವಿಕ್ರಮ್ ಸಿನಿಮಾ!

ಕನ್ನಡ ರಿಯಲ್ ಸ್ಟಾರ್ ಉಪೇಂದ್ರ ಹೆಸರು ಕನ್ನಡದ ಜೊತೆಗೆ ತೆಲುಗಿನಲ್ಲಿ ಕೂಡ ಸಾಕಷ್ಟು ಜನಪ್ರಿಯ. ಉಪೇಂದ್ರ ಅವರ ಅನೇಕ ಚಿತ್ರಗಳು ತೆಲುಗಿಗೆ ಡಬ್ ಕೂಡ ಆಗಿ ಯಶಸ್ಸಿನ ಪ್ರದರ್ಶನ ಕಂಡಿದೆ. ಅಲ್ಲದೆ ಹಿಂದೆ ಕೂಡ ಉಪೇಂದ್ರ ಅನೇಕ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉಪೇಂದ್ರ ಅವರಿಗೆ ಆಂಧ್ರದಲ್ಲಿ ಕೂಡ ದೊಡ್ಡಮಟ್ಟದಲ್ಲಿ ಫ್ಯಾನ್ಸ್ ಫಾಲೋಯಿಂಗ್ ಇದೆ. ಇತ್ತೀಚೆಗಷ್ಟೇ ತೆಲುಗಿನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈ ಜೀವನಾಧಾರಿತ ಚಿತ್ರದ ಅನೌನ್ಸ್‌ಮೆಂಟ್ ಆಗಿದೆ. ಈಗ ಮತ್ತೊಂದು ಚಿತ್ರದ ಫೋಷಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದೇ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಕಾಂಬಿನೇಷನ್ ಚಿತ್ರ.

ಪ್ರಸ್ತುತ ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯ 'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯುವ ನಿರ್ದೇಶಕ ಪರಶುರಾಮ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿ. ಮೈತ್ರೀ ಮೂವಿ ಮೇಕರ್ಸ್, 14 ರೀಲ್ಸ್ ಮತ್ತು GMB ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸುತ್ತಿವೆ. ತಮನ್ ಸಂಗೀತ ನೀಡಿರುವ ಈ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟಕ್ಕೆ ತಲುಪಿದೆ. ಸದ್ಯದಲ್ಲೇ ಚಿತ್ರೀಕರಣ ಮುಗಿಯಲಿದ್ದು, ಮೇನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನಿಂಗ್ ಮಾಡುತ್ತಿದೆ.

ಇನ್ನು 'ಸರ್ಕಾರು ವಾರಿ ಪಾಟ' ಮುಗಿದ ತಕ್ಷಣ ಮಹೇಶ್ ಬಾಬು ಮತ್ತೊಂದು ಚಿತ್ರದಲ್ಲಿ ನಟಿಸಲು ಅಣಿಯಾಗಿದ್ದಾರೆ. ಆ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಖ್ಯಾತ ನಿರ್ದೇಶಕರಾದ ತ್ರಿವಿಕ್ರಮ್ ಶ್ರೀನಿವಾಸ್. ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಅತುಡು', 'ಖಲೇಜಾ'ದಂತಹ ಸೂಪರ್ ಹಿಟ್ ಚಿತ್ರಗಳು ಮೂಡಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಹೇಶ್ ಬಾಬು ಅಭಿನಯ ಹಾಗೂ ಡೈಲಾಗ್ ಮಾಂತ್ರಿಕ ತ್ರಿವಿಕ್ರಮ್ ಅವರ ಮುಂಬರುವ ಸಿನಿಮಾ ಸುದ್ದಿಯಲ್ಲಿದೆ. ಸುಮಾರು 11 ವರ್ಷಗಳ ನಂತರ ಮಹೇಶ್ ಮತ್ತು ತ್ರಿವಿಕ್ರಮ್ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಈ ಕ್ರೇಜಿ ಕಾಂಬಿನೇಷನ್ ಚಿತ್ರಕ್ಕೆ ಈಗಾಗಲೇ ದೊಡ್ಡಮಟ್ಟದ ಸುದ್ದಿಯಾಗುತ್ತಿದೆ. ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಅದ್ಧೂರಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಮಹೇಶ್‌ಗೆ ಜೋಡಿಯಾಗಿ ಬುಟ್ಟಬೊಮ್ಮ ಪೂಜಾ ಹೆಗಡೆ ಅಭಿನಯಿಸುತ್ತಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದಾರೆ?

ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದಾರೆ?

ಇನ್ನು ಈ ಚಿತ್ರದ ಸ್ಟಾರ್ ಕಾಸ್ಟ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆಗೆ ತಮಿಳು ನಟ ವಿಜಯ್ ಸೇತುಪತಿ ಸಮುತಿರಕಣಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಲೇಟೆಸ್ಟ್ ಅಪ್ ಡೇಟ್ ಪ್ರಕಾರ, ಈಗ ಮತ್ತೊಬ್ಬ ಸ್ಟಾರ್ ನಟ ಈ ಚಿತ್ರದಲ್ಲಿ ನಟಿಸುವ ಬಗ್ಗೆ ಸುದ್ದಿಯಾಗುತ್ತಿದೆ. ಆ ಸ್ಟಾರ್ ನಟ ಬೇರೆ ಯಾರು ಅಲ್ಲ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ. ಚಿತ್ರದಲ್ಲಿ ನಾಯಕ ಮಹೇಶ್ ಬಾಬು ಅಣ್ಣನಾಗಿ ನಟಿಸಲು ತ್ರಿವಿಕ್ರಮ್ ಈಗಾಗಲೇ ಉಪೇಂದ್ರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಉಪೇಂದ್ರ ಅವರು ಕೂಡ ಈ ಚಿತ್ರದಲ್ಲಿ ನಟಿಸಲು ಉತ್ಸಾಹ ತೋರಿದ್ದಾರೆ ಅಂತ ಹೇಳಲಾಗುತ್ತಿದೆ. ಸದ್ಯದಲ್ಲೇ ಅಧಿಕೃತವಾಗಿ ಈ ಬಗ್ಗೆ ಘೋಷಣೆಯಾಗುವ ಸಾಧ್ಯತೆ ಇದೆ.

ಈಗಾಗಲೇ ಚಿತ್ರದ ಮುಹೂರ್ತ ಕೂಡ ಮುಗಿದಿದೆ

ಈಗಾಗಲೇ ಚಿತ್ರದ ಮುಹೂರ್ತ ಕೂಡ ಮುಗಿದಿದೆ

ಇನ್ನು ಮಹೇಶ್ ಬಾಬು- ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸಂಬಂಧಿಸಿದಂತೆ ಸ್ಕ್ರಿಪ್ಟ್ ಲಾಕ್ ಆಗಿದೆ. 'ಎಸ್‌ಎಸ್‌ಎಂಬಿ 28' ಎಂಬ ವರ್ಕಿಂಗ್ ಶೀರ್ಷಿಕೆಯೊಂದಿಗೆ ಸೆಟ್‌ಗೆ ಬರುತ್ತಿರುವ ಈ ಚಿತ್ರವು ಇತ್ತೀಚೆಗೆ ಪೂಜಾ ಕಾರ್ಯಕ್ರಮಗಳೊಂದಿಗೆ ಔಪಚಾರಿಕವಾಗಿ ಪ್ರಾರಂಭವಾಯಿತು. ಆದಾಗ್ಯೂ, ಏಪ್ರಿಲ್‌ನಲ್ಲಿ ರೆಗ್ಯುಲರ್ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ನಿರ್ಮಾಪಕರು ಹೇಳುತ್ತಿದ್ದಾರೆ. ಮೊದಲು ಮಹೇಶ್ ಮೇಲೆ ಒಂದು ಹಾಡು, ಆಕ್ಷನ್ ಸೀಕ್ವೆನ್ಸ್ ಅನ್ನು ಪೂರ್ಣಗೊಳಿಸಿ ನಂತರ ದೀರ್ಘ ವೇಳಾಪಟ್ಟಿಯೊಂದಿಗೆ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಗಿಸುವ ಆಲೋಚನೆಯಲ್ಲಿ ಚಿತ್ರತಂಡ ಇದೆಯಂತೆ. 'ಸರ್ಕಾರು ವಾರಿ ಪಾಟ' ಅಂತಿಮ ಹಂತಕ್ಕೆ ಬರುತ್ತಿದ್ದು, ಮಹೇಶ್ ಕೂಡ ಈ ಸಿನಿಮಾವನ್ನು ಶೀಘ್ರದಲ್ಲೇ ಆರಂಭಿಸಲು ಮುಂದಾಗಿದ್ದಾರೆ.

ಉಪೇಂದ್ರ ಅವರು ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದರು

ಉಪೇಂದ್ರ ಅವರು ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದರು

ರಿಯಲ್ ಸ್ಟಾರ್ ಉಪೇಂದ್ರ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದ ' ಸನ್ ಆಫ್ ಸತ್ಯಮೂರ್ತಿ'ಯಲ್ಲಿ ದೇವರಾಜ್ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕ ನಟರಾಗಿ ನಟಿಸಿದ್ದರು. ಬನ್ನಿ ಮತ್ತು ಉಪೇಂದ್ರ ನಡುವಿನ ದೃಶ್ಯಗಳು ಚಿತ್ರದ ಪ್ರಮುಖ ಹೈಲೈಟ್ ಮತ್ತು ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಅದೇ ರೀತಿ ಮಹೇಶ್ - ತ್ರಿವಿಕ್ರಮ್ ಸಿನಿಮಾದಲ್ಲಿ ಉಪೇಂದ್ರ ಪಾತ್ರ ತುಂಬಾ ಪವರ್ ಫುಲ್ ಹಾಗೂ ಹೊಸತನದಿಂದ ಕೂಡಿರುವುದರಿಂದ ಅವರನ್ನು ಫೈನಲ್ ಮಾಡಲು ತ್ರಿವಿಕ್ರಮ್ ಮುಂದಾಗಿದ್ದಾರೆ ಎನ್ನುತ್ತಿದೆ ಟಾಲಿವುಡ್.

ಉಪ್ಪಿ ಪ್ಯಾನ್ ಇಂಡಿಯಾ ಸಿನಿಮಾ

ಉಪ್ಪಿ ಪ್ಯಾನ್ ಇಂಡಿಯಾ ಸಿನಿಮಾ

ಉಪೇಂದ್ರ ಅಭಿನಯದ 'ಹೋಂ ಮಿನಿಸ್ಟರ್' ಇದೆ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಇದು ಅಲ್ಲದೆ ಪ್ರಸ್ತುತ ನಿರ್ದೇಶಕ ಆರ್ ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇತರ ನಂತರ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೂಡ ಉಪೇಂದ್ರ ನಟಿಸುತ್ತಿದ್ದಾರೆ. ಜೊತೆಗೆ ಬಹಳ ಕಾಲದ ನಂತರ ಉಪೇಂದ್ರ ಆಕ್ಷನ್ ಕಟ್ ಹೇಳುವುದಕ್ಕೆ ಸಿದ್ದರಾಗಿದ್ದಾರೆ. ಮತ್ತೆ 'A', 'ಉಪೇಂದ್ರ' ಶೈಲಿಯಲ್ಲಿ ಹೊಸದೊಂದು ಕಥೆ ಹೇಳುವುದಾಗಿ ಉಪೇಂದ್ರ ಈಗಾಗಲೇ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

Recommended Video

Mahesh Babu ಗೆ ಅಣ್ಣನಾದ Upendra, ತೆಲುಗು ಚಿತ್ರಕ್ಕೆ ಸೈ ಎಂದ ಉಪ್ಪಿ
ಮಹೇಶ್ ಮುಂದಿನ ಚಿತ್ರ ರಾಜಮೌಳಿ ಜೊತೆ

ಮಹೇಶ್ ಮುಂದಿನ ಚಿತ್ರ ರಾಜಮೌಳಿ ಜೊತೆ

ಇನ್ನು ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾದ ನಂತರ ಎಸ್ಎಸ್ ರಾಜಮೌಳಿ ಅವರ ಭಾರಿ ಬಜೆಟ್ಟಿನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ ಪೂರ್ಣಗೊಂಡ ಮೇಲೆ ಬರೋಬ್ಬರಿ ಒಂದು ವರ್ಷ ಕಾಲ ಮಹೇಶ್ ಬಾಬು ಮೂವಿ ಮಾಂತ್ರಿಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಚಿತ್ರಕ್ಕೆ ಕಾಲ್ ಶೀಟ್ ನೀಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಚಿತ್ರ ಪೂರ್ಣಗೊಳ್ಳುವವರೆಗೂ ಮುಂದಿನ ಯಾವುದೇ ಚಿತ್ರಕ್ಕೂ ಕೂಡ ಕಾಲ್ ಶೀಟ್ ನೀಡುವುದಿಲ್ಲ ಅಂತ ಮಹೇಶ್ ಬಾಬು ಹೇಳಿದ್ದಾರೆ.

More from Filmibeat

English summary
Trivikarm will going to direct a movie with the crazy combination of real star and super star. Upendra is going to play a powerful role in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X