ತನ್ನದೇ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಟ್ರೋಲ್ ಆದ ಅಲ್ಲು ಅರ್ಜುನ್
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಂಲೋ' ಸಿನಿಮಾ ತೆರೆಗೆ ಸಜ್ಜಾಗುತ್ತಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿದ್ದು, ಒಂದರ ಮೇಲೊಂದು ಹಾಡು ಹಿಟ್ ಆಗುತ್ತಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಬಗ್ಗೆ ಅಲ್ಲು ಅರ್ಜುನ್ ಮಾಡಿದ ಟ್ವೀಟ್ ಈಗ ಟ್ರೋಲ್ ಗೆ ಗುರಿಯಾಗಿದೆ. ತಮ್ಮದೇ ಸಿನಿಮಾ ಬಗ್ಗೆ ಸಂತಸದ ವಿಷಯವನ್ನ ಹಂಚಿಕೊಂಡಿದ್ದ ಬನ್ನಿಗೆ ತೆಲುಗು ಮಂದಿ ಟೀಕಿಸುತ್ತಿದ್ದಾರೆ.
ಅಷ್ಟಕ್ಕೂ, ಅಲ್ಲು ಅರ್ಜುನ್ ಮಾಡಿದ ಟ್ವೀಟ್ ಏನು? ಯಾವ ಕಾರಣಕ್ಕಾಗಿ ಸ್ಟೈಲಿಶ್ ಸ್ಟಾರ್ ಟಾರ್ಗೆಟ್ ಮಾಡಿದ್ರು? ಮುಂದೆ ಓದಿ....

100 ಮಿಲಿಯನ್ ವೀವ್ಸ್ ಬಗ್ಗೆ ಟ್ವೀಟ್
ಅಲಾ ವೈಕುಂಠಪುರಂಲೋ ಸಿನಿಮಾದ ಸಮಾಜವರ್ಗಮನ ಹಾಡು ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಅತಿ ವೇಗವಾಗಿ 100 ಮೀಲಿಯನ್ ವೀಕ್ಷಣೆ ಕಂಡಿದೆ. ಈ ಸಂತಸವನ್ನು ಅಲ್ಲು ಅರ್ಜುನ್ ಸಂಭ್ರಮಿಸಿದ್ದರು. ''100 ಮಿಲಿಯನ್ ವೀಕ್ಷಣೆಗೆ ಕಾರಣವಾದ ಥ್ಯಾಂಕ್ ಯೂ'' ಎಂದಿದ್ದರು.

ಸಂಭ್ರಮಿಸುವ ಕ್ಷಣವಲ್ಲ ಇದು
ಹೈದರಬಾದ್ನಲ್ಲಿ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಇಡೀ ದೇಶ ಪ್ರತಿಭಟನೆ ಮಾಡುತ್ತಿದೆ. ಇಂತಹ ಘಟನೆಗಳ ವಿರುದ್ಧ ಸೆಲೆಬ್ರಿಟಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಇಂತಹ ಸಮಯದಲ್ಲಿ ನಿಮ್ಮ ಅಭಿಮಾನಿಗಳು ಸಂಭ್ರಮಿಸುತ್ತಿರುವುದು ಹಾಗೂ ಅದನ್ನು ನೀವು ಪ್ರೋತ್ಸಾಹಿಸುತ್ತಿರುವುದು ಸರಿಯಲ್ಲ'' ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ನಾಚಿಕೆ ಆಗ್ಬೇಕು
ಇಡೀ ರಾಜ್ಯ ಯುವತಿಯ ಅತ್ಯಾಚಾರದ ಕುರಿತು ಚರ್ಚಿಸುತ್ತಿದೆ. ಇಂತಹ ಸಮಯದಲ್ಲಿ ನೀವು ನಿಮ್ಮ ಸಿನಿಮಾ ಪ್ರಚಾರ ಮಾಡುತ್ತಿದ್ದೀರಾ. ಇದು ನಿಮಗೆ ನಾಚಿಕೆ ಆಗ್ಬೇಕು'' ಎಂದು ಕಿಡಿಕಾರಿದ್ದಾರೆ.

ಈ ಸಮಯದಲ್ಲಿ ಬೇಕಾಗಿರಲಿಲ್ಲ
''ಸಮಾಜವರ್ಗಮನ ಹಾಡು ಬಹಳ ಚೆನ್ನಾಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇಂತಹ ಸಮಯದಲ್ಲಿ ನೀವು ಈ ಟ್ವೀಟ್ ಮಾಡಿದ್ದು ಸರಿ ಕಾಣಿಸುತ್ತಿಲ್ಲ'' ಎಂದು ಅಭಿಮಾನಿಯೊಬ್ಬರ ಬೇಸರ ವ್ಯಕ್ತಪಡಿಸಿದ್ದಾನೆ.

ಅಲ್ಲು ಅರ್ಜುನ್ ಟ್ವೀಟ್ ಮಾಡಿಲ್ಲ
ತಮ್ಮ ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ಅಲ್ಲು ಅರ್ಜುನ್, ಪಶು ವೈದ್ಯೆ ಮೇಲೆ ಆದ ಅತ್ಯಾಚಾರವನ್ನ ಖಂಡಿಸಿ ಟ್ವೀಟ್ ಮಾಡಿಲ್ಲ. ಯಾವುದೇ ಅಭಿಪ್ರಾಯ ಹಂಚಿಕೊಂಡಿಲ್ಲ. ಇದು ಸಹಜವಾಗಿ ಜನಸಾಮಾನ್ಯರನ್ನು ಕೆರಳಿಸಿದೆ. ಮಾನವೀಯತೆ ದೃಷ್ಟಿಯಿಂದ ಸಂತಾಪ ಸೂಚಿಸಬೇಕಿತ್ತು. ಅದನ್ನು ಬಿಟ್ಟು ಸಿನಿಮಾ ಪ್ರಚಾರ ಮಾಡುತ್ತಿರುವುದು ನಿಮ್ಮ ಘನತೆಗೆ ಗೌರವ ತರುವುದಿಲ್ಲ ಎಂದು ಸಾಮಾನ್ಯ ಜನರು ಟೀಕಿಸುತ್ತಿದ್ದಾರೆ.


Click it and Unblock the Notifications











