'ಪುಷ್ಪ' ಸಿನಿಮಾ ತೆಗೆದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು: ಟಿಆರ್‌ಎಸ್ ನಾಯಕ

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟಿಸಿ ಸುಕುಮಾರ್ ನಿರ್ದೇಶನ ಮಾಡಿದ 'ಪುಷ್ಪ' ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾಕ್ಕೆ ವಿದೇಶಗಳಲ್ಲಿ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಸಿನಿಮಾ ಮುನ್ನೂರು ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.

ಸಿನಿಮಾ ಬಗ್ಗೆ ದಕ್ಷಿಣ ಭಾರತದ, ಬಾಲಿವುಡ್ ಮಾತ್ರವಲ್ಲಿ ವಿದೇಶಗಳಲ್ಲಿಯೂ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿವೆ. ಸುಕುಮಾರ್ ನಿರ್ದೇಶನದ ಬಗ್ಗೆ ಅವರ ಚಿತ್ರಕತೆ ಬಗ್ಗೆ ಬಹಳ ಮೆಚ್ಚುಗೆಗಳು ವ್ಯಕ್ತವಾಗಿವೆ. ಆದರೆ ಇತ್ತೀಚೆಗೆ ಕೆಲವರು 'ಪುಷ್ಪ' ಸಿನಿಮಾದ ಬಗ್ಗೆ ಟೀಕೆ ಮಾಡುತ್ತಿರುವುದು ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದಾಗುತ್ತಿದೆ.

Recommended Video

ಕೊಟ್ಟ ಮಾತನ್ನು ಉಳಿಸಿಕೊಂಡ ಅಲ್ಲು ಅರ್ಜುನ್

ಸಿನಿಮಾ ಒಂದು ಭಾರಿ ಹಿಟ್ ಆಗಿ ಜನಮನ್ನಣೆ ಗಳಿಸಿದಾಗ ಸಿನಿಮಾದ ವಿರುದ್ಧ ಮಾತನಾಡಿ ಕೆಲವರು ನೆಗೆಟಿವ್ ಪ್ರಚಾರ ಪಡೆಯುವುದು ಸಾಮಾನ್ಯ. ಈ ಹಿಂದೆ 'ಬಾಹುಬಲಿ', ಕನ್ನಡದ 'ಕೆಜಿಎಫ್' ಸಿನಿಮಾಗಳು ಸಹ ಇದೇ ರೀತಿಯ ಟೀಕೆಗಳನ್ನು ಎದುರಿಸಿದ್ದರು. ಇದೀಗ 'ಪುಷ್ಪ' ಬಗ್ಗೆಯೂ ಕೆಲವರು ಟೀಕೆ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಪದ್ಮಶ್ರೀ ಪುರಸ್ಕೃತ ಗರಕಿಪಾಟಿ ನರಸಿಂಹರಾವ್ ಅವರು 'ಪುಷ್ಪ' ಸಿನಿಮಾ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಟಿಆರ್‌ಎಸ್ ಮುಖಂಡ ಹಾಗೂ ಜನಪದ ಹಾಡುಗಾರರೂ ಆಗಿರುವ ಸಾಯಿ ಚಂದ್ 'ಪುಷ್ಪ' ಸಿನಿಮಾದ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ್ದಾರೆ. 'ಪುಷ್ಪ' ಸಿನಿಮಾ ತೆಗೆದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು'' ಎಂದು ಹೇಳಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪಣೆಯೂ ವ್ಯಕ್ತವಾಗಿದೆ.

ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತು

ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತು

ಜಿಲ್ಲಾ ಪರಿಷತ್ ಆಯೋಜಿಸಿದ್ದ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಚಂದ್ ಮಕ್ಕಳು ಶಿಸ್ತಿನಿಂದ ಕೂರಬೇಕು ಎಂದು ಹೇಳುತ್ತಾ, ''ಅವನ್ಯಾರೊ ತನ್ನನ್ನು ತಾನು 'ಪುಷ್ಪ' ಎಂದುಕೊಂಡಿದ್ದಾನೆ. ಅವನನ್ನು ಮೂಲೆಯಲ್ಲಿ ಕೂರಿಸಿ'' ಎಂದು ಬಾಲಕನಿಗೆ ಹೇಳಿ, 'ಈ ಡಬ್ಬಾಗಳನ್ನು 'ತಗ್ಗೇದೆ ಲೇ' (ಪುಷ್ಪ ಸಿನಿಮಾ ಡೈಲಾಗ್) ಎಂದು ಹಿರೋಗಳಾಗಿ ಮಾಡಿದ ಮೇಲೆ ಈ ಮಕ್ಕಳನ್ನು ಕಂಟ್ರೋಲ್ ಮಾಡುವುದು ನಮಗೆ ಕಷ್ಟವಾಗಿಬಿಟ್ಟಿದೆ. ಈ ರೀತಿಯ ಸಿನಿಮಾಗಳನ್ನು ತೆಗೆಯುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು'' ಎಂದು ವೇದಿಕೆಯ ಮೇಲೆ ಹೇಳಿದ್ದಾರೆ.

ಸಾಯಿ ಚಂದರ್ ವಿರುದ್ಧ ಆಕ್ರೋಶ

ಸಾಯಿ ಚಂದರ್ ವಿರುದ್ಧ ಆಕ್ರೋಶ

ಸಾಯಿ ಚಂದ್‌ರ ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲು ಅರ್ಜುನ್ ಅನ್ನು 'ಹೌಲೆಗಾ' (ತೆಲುಗು ಜನ ಬಳಸುವ ಬೈಗುಳ) ಎಂದಿದ್ದಕ್ಕೆ ಹಾಗೂ 'ಪುಷ್ಪ' ಸಿನಿಮಾ ಮಾಡಿದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂದಿದ್ದಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳು ಸಾಯಿ ಚಂದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೈಗುಳ ಆರಂಭಿಸಿದ್ದಾರೆ.

'ಪುಷ್ಪ' ಸಿನಿಮಾ ಟೀಕಸಿದ್ದ ಗರಕಿಪಾಟಿ ನರಸಿಂಹರಾವ್

'ಪುಷ್ಪ' ಸಿನಿಮಾ ಟೀಕಸಿದ್ದ ಗರಕಿಪಾಟಿ ನರಸಿಂಹರಾವ್

ಕೆಲವು ದಿನಗಳ ಹಿಂದೆ ಪದ್ಮಶ್ರೀ ಪುರಸ್ಕೃತ ಸಾಹಿತಿ ಗರಕಿಪಾಟಿ ನರಸಿಂಹರಾವ್ ಸಹ 'ಪುಷ್ಪ' ಸಿನಿಮಾವನ್ನು ಟೀಕಿಸಿದ್ದರು. "ಪುಷ್ಪ ಚಿತ್ರವೂ ಯಾವುದೇ ಅರ್ಥವನ್ನು ಹೊಂದಿಲ್ಲಾ. 'ಪುಷ್ಪ' ಸಿನಿಮಾದಿಂದ ಮುಂದೆ ಸಾಕಷ್ಟು ಅಪಾಯಕಾರಿ ಬೆಳವಣಿಗೆಗಳು ಸಂಭವಿಸುತ್ತೆ. ಇದು ಕಳ್ಳಸಾಗಣೆದಾರನನ್ನು ವೈಭವೀಕರಿಸುತ್ತದೆ ಮತ್ತು ಕಳ್ಳಸಾಗಾಣೆ ಮಾಡುವವನ್ನು ಹೀರೋ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಯಾರಿಗಾದರೂ ಹೊಡೆದಾಗ ಮಾಸ್ ಹೀರೋ ಅಲ್ಲು ಅರ್ಜುನ್ 'ತಗ್ಗದೆ ಲೇ' ಎಂದು ಹೇಳುತ್ತಲೇ ಇರುತ್ತಾರೆ. ಒಂದು ವೇಳೆ ನಾನೇನಾದರು ನಿರ್ದೇಶಕ ಸುಕುಮಾರ್ ಅಥವಾ ನಟ ಅಲ್ಲು ಅರ್ಜುನ್ ರನ್ನು ಭೇಟಿಯಾದರೆ, ನಾನು ಚಿತ್ರದ ಬಗ್ಗೆ ಅವರನ್ನು ಪ್ರಶ್ನೆ ಮಾಡುತ್ತೇನೆ'' ಎಂದಿದ್ದರು.

ರಕ್ತಚಂದನ ಕಳ್ಳಸಾಗಣೆ ಕತೆ

ರಕ್ತಚಂದನ ಕಳ್ಳಸಾಗಣೆ ಕತೆ

'ಪುಷ್ಪ' ಸಿನಿಮಾ ಕಳೆದ ಡಿಸೆಂಬರ್ 17ರಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಸುನಿಲ್, ಫಹಾದ್ ಫಾಸಿಲ್, ಅನುಸೂಯ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಮೈತ್ರಿ ಮೂವೀಸ್ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗ ಈ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
TRS leader and singer Sai Chand lambasted on Pushpa movie makers. He said need to beat 'Pushpa' movie makers with slippers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X