"ಅತ್ಯಾಚಾರಗಳು ನಡೆಯುತ್ತಿದ್ರೆ ದೇವ್ರು ಕಣ್ಣು ಮುಚ್ಚಿಕೊಂಡಿದ್ದಾನಾ?" ಶಿವರಾತ್ರಿ ದಿನ ಕರಾವಳಿ ನಟಿಯ ಶಾಕಿಂಗ್ ವಿಡಿಯೋ

ಮಹಾಶಿವರಾತ್ರಿ ಹಿನ್ನೆಲೆ ಭಕ್ತರು ಶಿವನಾಮಸ್ಮರಣೆ ಮಾಡುತ್ತಿದ್ದಾರೆ. ಆದರೆ ಕರಾವಳಿ ಮೂಲದ ನಟಿ ಕೀರ್ತಿ ಭಟ್ ದೇವರೇ ಇಲ್ಲ, ಇದ್ದಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಶಾಕಿಂಗ್ ವಿಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂಮ್‌ನಲ್ಲಿ ಆಕೆ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಮಂಗಳೂರು ಮೂಲದ ನಟಿ ಕೀರ್ತಿ ಕೇಶವ್ ಭಟ್ ಬೆಂಗಳೂರಿನಲ್ಲಿ ಓದಿ ಬೆಳೆದವರು. ಆದರೆ ತೆಲುಗು ಕಿರುತೆರೆಯಲ್ಲಿ ಅವಕಾಶಗಳನ್ನು ಪಡೆದು ಅಲ್ಲಿಗೆ ಶಿಫ್ಟ್ ಆಗಿದ್ದಾರೆ. ತೆಲುಗು ಬಿಗ್‌ಬಾಸ್ ಸೀಸನ್-6ರಲ್ಲಿ ಸ್ಪರ್ಧಿಸಿ ಫೈನಲಿಸ್ಟ್ ಕೂಡ ಆಗಿದ್ದರು. ಸದ್ಯ ಆಕೆ ಮಾಡಿರುವ ವೀಡಿಯೋ ಭಾರೀ ಸದ್ದು ಮಾಡ್ತಿದೆ.

TV Actress Keerti Bhatt vents out her anger on God on the day of Shivratri festival

ಸಾಕಷ್ಟು ಸಾಮಾಜಿಕ ವಿಚಾರಗಳ ಬಗ್ಗೆ ನಟಿ ಕೀರ್ತಿ ಭಟ್ ದನಿ ಎತ್ತಿದ್ದಾರೆ. ದೇಶದಲ್ಲಿ ನಡೆಯುವ ಅನಾಚಾರಗಳ ಬಗ್ಗೆ ಮಾತನಾಡುತ್ತಿರುತ್ತಾರೆ. "ಚಿಕ್ಕ ಹುಡುಗಿಯನ್ನು ಅತ್ಯಾಚಾರ ಮಾಡುತ್ತಿದ್ದರೆ ಕಾಪಾಡಲಾಗದ ದೇವರು ಏಕೆ? ಕಷ್ಟ ಬಂದಾಗ ಕಾಪಾಡಲಾಗದ ದೇವರು, ಕಣ್ಣು ಮುಚ್ಚಿಕೊಂಡಿದ್ದಾನಾ? ಎಂದು ತನ್ನ ಆಕೆ ತನ್ನ ಆವೇದನೆ ವ್ಯಕ್ತಪಡಿಸಿದ್ದಾರೆ.

"ಶಿವರಾತ್ರಿ ಅಂತ ಅಲ್ಲ.. ಶಿವರಾತ್ರಿ ಅಲ್ಲದಿದ್ದರೂ ಜನ ಪ್ರತಿ ದಿನ ದೇವಿಗೆ ಪೂಜೆ ಮಾಡುತ್ತಲೇ ಇರುತ್ತಾರೆ. ಬೆಳಗ್ಗೆ ಎದ್ದರೆ ಸಾಕು.. ದೇವರು ದೇವರು ದೇವರು.. ಪೂಜೆ ಮಾಡುವುದು ನೈವೇದ್ಯಂ ಇಡುವುದು ಉಪವಾಸ ಇರುವುದು ಎಲ್ಲವೂ ಮಾಡುತ್ತೇವೆ. ಎಲ್ಲವನ್ನೂ ಮಾಡಲು ಕಾರಣ ಏನು ಅಂದರೆ ಪ್ರತಿಯೊಬ್ಬರಿಗೂ ಎಲ್ಲವೂ ಚೆನ್ನಾಗಿ ನಡೆಯಬೇಕು. ಎಲ್ಲರಿಗೂ ಒಳೆಯದಾಗಬೇಕು. ನಮ್ಮನ್ನು ಕಾಪಾಡಬೇಕು.. ನಮಗೆ ಸಹಾಯವಾಗಬೇಕು ಎಂದು ಭಾವಿಸುತ್ತಾರೆ. ಕಷ್ಟ ಬಂದಾಗ ಯಾವುದೋ ರೂಪದಲ್ಲಿ ಬಂದು ಸಹಾಯ ಮಾಡಬೇಕು ಎಂದು ದೇವರನ್ನು ಪೂಜೆ ಮಾಡುತ್ತಾರೆ."

"ಇಷ್ಟೆಲ್ಲಾ ಪೂಜೆ ಮಾಡಿದರೂ ನನಗೆ ಇತ್ತೀಚೆಗೆ ಅನಿಸಿದ್ದು ಏನು ಅಂದ್ರೆ, ಇತ್ತೀಚೆಗೆ ಒಂದು ಚಿಕ್ಕ ಹುಡುಗಿಯನ್ನು ದಾರುಣವಾಗಿ ಅಷ್ಟುಜನ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಆಗ ದೇವರು ಎಲ್ಲಿ ಹೋಗಿದ್ದ, ಏಕೆ ಕಾಪಾಡಲಾಗಲಿಲ್ಲ. ಪಾಪ ಚಿಕ್ಕ ಹುಡುಗಿ. ಆ ಸಮಯದಲ್ಲಿ ಆ ಹುಡುಗಿ ಎಷ್ಟು ನೋವು ಅನುಭವಿಸಿರಬಹುದು. ದೇವರು ಯಾವುದಾದರೂ ರೂಪದಲ್ಲಿ ಬಂದು ಕಾಪಾಡಬೇಕಿತ್ತು ಅಲ್ವಾ? ಅಂತಹ ಸಮಯದಲ್ಲಿ ಸಹಾಯ ಮಾಡದ ದೇವರು ಇದ್ದು ಏನು ಪ್ರಯೋಜನ?" ಎಂದು ಕೀರ್ತಿ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.

"ಆಸ್ತಿ ಇದ್ದವರಿಗೆ ಹೆಚ್ಚು ಆಸ್ತಿ ಕೊಡುತ್ತಲೇ ಇರುತ್ತಾನೆ. ಇಲ್ಲದವರಿಗೆ ಇಲ್ಲ. ದೇವರು ಇದನ್ನೆಲ್ಲ ಮೇಲಿಂದ ಮೇಲೆ ನೋಡುತ್ತಿದ್ದಾನೆ. ನಾವೇ ದೇವರು.. ದೇವರು.. ದೇವರು ಎಂದು ಹೇಳುತ್ತೇವೆ. ಅತ್ಯಾಚಾರಕ್ಕೊಳಗಾದ ಮಗು ತುಂಬಾ ನೋವನ್ನು ಅನುಭವಿಸಿರಬೇಕು. ಆ ಹೆತ್ತವರ ಸಂಕಷ್ಟ ಎಂಥದ್ದು. ಕನಿಷ್ಠ ಪಕ್ಷ ಯಾವುದಾದರೂ ರೂಪದಲ್ಲಿ ಬಂದು ಕಾಪಾಡಬಹುದಿತ್ತು ಆ ದೇವರು. ಕನಿಷ್ಠ ಪಕ್ಷ ತಪ್ಪಿಸಿಕೊಳ್ಳಲು ಸಹಾಯ ಮಾಡಬಹುದಿತ್ತಲ್ಲಾ? ಅಂತಹ ಸಮಯದಲ್ಲಿ ದೇವರು ನಮ್ಮನ್ನು ಏಕೆ ಉಳಿಸಬಾರದು? ಮಕ್ಕಳು ದೇವರ ಸಮಾನ ಎಂದು ಹೇಳಲಾಗುತ್ತದೆ. ಆದರೆ ಮಕ್ಕಳು ಅತ್ಯಾಚಾರ ನಡೆಯುತ್ತಿದ್ದರೆ ದೇವರು ಏನು ಮಾಡುತ್ತಿದ್ದಾನೆ? ಈ ದಿನ ನಾವು ದೇವರನ್ನು ಏಕೆ ಪೂಜಿಸಬೇಕು? ಇದು ತುಂಬಾ ಕೆಟ್ಟದ್ದಲ್ಲವೇ.. ಇದನ್ನೆಲ್ಲಾ ನೋಡಿದರೆ ನಿಜವಾದ ದೇವರೇ ಇಲ್ಲ ಅನ್ನಿಸುತ್ತದೆ"

"ಆ ನೋವನ್ನು ನೆನಪಿಸಿಕೊಂಡರೆ ದೇವರ ಫೋಟೋಗಳನ್ನು ಮನೆಯಿಂದ ಹೊರಗೆ ಇಡಬೇಕು ಎನಿಸುತ್ತದೆ. ದೇವರು ನಮಗೆ ಕಾಣಿಸುವುದಿಲ್ಲ. ಅವನು ಯಾವುದಾದರೂ ರೂಪದಲ್ಲಿ ಬಂದು ನಮ್ಮನ್ನು ರಕ್ಷಿಸುತ್ತಾನೆ ಎಂದು ನಾವು ಭಾವಿಸುತ್ತೇವೆ. ಆದರೆ ಆ ಸಮಯದಲ್ಲಿ ದೇವರು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾನೆ. ಆ ದೇವರು ಈ ದೇವರು ಅಂತ ಅಲ್ಲ ಎಲ್ಲಾ ದೇವರುಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ" ಎಂದು ತಮ್ಮ ಜೀವನದ ಕಹಿ ಘಟನೆಗಳನ್ನು ನೆನೆದು ಕೀರ್ತಿ ಭಟ್ ಭಾವುಕರಾಗಿದ್ದಾರೆ.

More from Filmibeat

English summary
Bigg boss Fame Keerthi Keshav Bhat sensational comments on god;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X