ರಾಜಮೌಳಿಯ RRR ಚಿತ್ರಕ್ಕೆ ಮತ್ತಿಬ್ಬರು ಸೂಪರ್ ಸ್ಟಾರ್ಸ್ ಸಾಥ್!

ಬಾಹುಬಲಿ ಚಿತ್ರದ ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಚಿತ್ರ ಆರ್ ಆರ್ ಆರ್. ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸುತ್ತಿದ್ದಾರೆ. ಇಬ್ಬರು ಸ್ಟಾರ್ ನಟರು ಹಾಗೂ ರಾಜಮೌಳಿ ಆಕ್ಷನ್ ಕಟ್ ಎಂಬ ಕಾರಣಕ್ಕೆ ಭಾರತೀಯ ಚಿತ್ರೋಧ್ಯಮದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.

ಎನ್ ಟಿ ಆರ್, ರಾಮ್ ಚರಣ್ ಜೊತೆಗೆ ಆಲಿಯಾ ಭಟ್, ಅಜಯ್ ದೇವಗನ್, ಸಮುದ್ರಕಣಿ ಹಾಗೂ ಹಾಲಿವುಡ್ ನ ರೇ ಸ್ಟೀವನ್ಸನ್, ಒಲಿವಿಯಾ ಮೋರಿಸ್, ಅಲಿಸನ್ ಡೂಡಿ ಕೂಡ ತಾರಾಗಣದಲ್ಲಿದ್ದಾರೆ.

ಇದೀಗ, ಮತ್ತಿಬ್ಬರು ಸೂಪರ್ ಸ್ಟಾರ್ ನಟರ ಆರ್ ಆರ್ ಆರ್ ಚಿತ್ರತಂಡ ಸೇರಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಅಷ್ಟಕ್ಕೂ ಯಾರದು? ಮುಂದೆ ಓದಿ....

RRR ಚಿತ್ರಕ್ಕೆ ಮಹೇಶ್ ಬಾಬು ಸಾಥ್

RRR ಚಿತ್ರಕ್ಕೆ ಮಹೇಶ್ ಬಾಬು ಸಾಥ್

ಭಾರಿ ನಿರೀಕ್ಷೆಗಳೊಂದಿಗೆ ತಯಾರಾಗುತ್ತಿರುವ ಆರ್ ಆರ್ ಆರ್ ಚಿತ್ರತಂಡಕ್ಕೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಾಥ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ತೆಲುಗಿನಲ್ಲಿ ಮಹೇಶ್ ಬಾಬು ಅವರಿಂದ ಹಿನ್ನಲೆ ಧ್ವನಿ ಕೊಡಿಸುವ ಯೋಚನೆ ಮಾಡಿದ್ದಾರಂತೆ.

ಹಿಂದಿಯಲ್ಲಿ ಬಿಗ್-ಬಿ

ಹಿಂದಿಯಲ್ಲಿ ಬಿಗ್-ಬಿ

ತೆಲುಗಿನಲ್ಲಿ ಮಹೇಶ್ ಬಾಬು ವಾಯ್ಸ್ ಕೊಟ್ಟರೆ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅವರಿಂದ ಧ್ವನಿ ಕೊಡಿಸಲು ಪ್ಲಾನ್ ಮಾಡಲಾಗುತ್ತಿದೆಯಂತೆ. ಐತಿಹಾಸಿಕ ಚಿತ್ರ ಇದಾಗಿದ್ದರಿಂದ ಸಿನಿಮಾ ಆರಂಭದಲ್ಲಿ ಘಟನೆ ಅಥವಾ ವ್ಯಕ್ತಿಯ ಕುರಿತು ಕಥೆ ಹೇಳಲು ಈ ನಟರು ಸೂಕ್ತ ಎಂದು ರಾಜಮೌಳಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಮಿಳು-ಮಲಯಾಳಂನಲ್ಲೂ ಸ್ಟಾರ್ಸ್

ತಮಿಳು-ಮಲಯಾಳಂನಲ್ಲೂ ಸ್ಟಾರ್ಸ್

ತೆಲುಗು ಮತ್ತು ಹಿಂದಿಯಲ್ಲಿ ಮಹೇಶ್ ಬಾಬು ಹಾಗೂ ಬಚ್ಚನ್ ಅವರನ್ನು ಫಿಕ್ಸ್ ಮಾಡಿಕೊಂಡಿರುವ ರಾಜಮೌಳಿ, ಮಲಯಾಳಂ ಮತ್ತು ತಮಿಳಿನಲ್ಲೂ ಸ್ಟಾರ್ ನಟರಿಂದ ಹಿನ್ನಲೆ ಧ್ವನಿ ಕೊಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ಯಾರು ಎಂಬುದು ಸದ್ಯಕ್ಕೆ ಪಕ್ಕಾ ಆಗಿಲ್ಲ.

ಬಿಡುಗಡೆ ಮುಂದಕ್ಕೆ ಹೋಗಿದೆ!

ಬಿಡುಗಡೆ ಮುಂದಕ್ಕೆ ಹೋಗಿದೆ!

ಎಲ್ಲ ಅಂದುಕೊಂಡಂತೆ ಆಗಿದ್ದರೆ ಜುಲೈ 30 ರಂದು ಆರ್ ಆರ್ ಆರ್ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ ಚಿತ್ರೀಕರಣ ಇನ್ನು ಮಗಿದಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಹೆಚ್ಚಿದೆ. ಗ್ರಾಫಿಕ್ಸ್ ಕೆಲಸವೂ ಸಮಯ ಹಿಡಿಯುವುದರಿಂದ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆಯಂತೆ.

More from Filmibeat

English summary
SS Rajamouli's RRR movie is the biggest project in indian cinema. jr ntr, ram charan, ajay devgan, alia bhatt starring movie set to release in 2020 year end. now, two super stars joining team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X