For Quick Alerts
  ALLOW NOTIFICATIONS  
  For Daily Alerts

  ಹಾರರ್ ಸಿನಿಮಾದಲ್ಲಿ 'ಯು ಟರ್ನ್' ಸುಂದರಿ ಶ್ರದ್ಧಾ ಶ್ರೀನಾಥ್

  |

  ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ಯು ಟರ್ನ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ರದ್ಧಾ ಈಗ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

  ಇತ್ತೀಚಿಗಷ್ಟೆ ಮಲಯಾಳಂ ಸಿನಿಮಾ ಅನೌನ್ಸ್ ಮಾಡಿದ್ದ ಶ್ರದ್ಧಾ ಆಗಲೇ ಮತ್ತೊಂದು ತೆಲುಗು ಮತ್ತು ತಮಿಳು ಸಿನಿಮಾಗೆ ಸಹಿ ಮಾಡಿದ್ದಾರೆ. ಹೌದು, ಶ್ರದ್ಧಾ ಶ್ರೀನಾಥ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗಲಿದೆ. ಪ್ರಯೋಗಾತ್ಮಕ ಸಿನಿಮಾ ಇದಾಗಿದ್ದು, 2050ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದೆಯಂತೆ.

  IAS ಅಧಿಕಾರಿಯಾದ 'ಯು ಟರ್ನ್' ಸುಂದರಿ ಶ್ರದ್ಧಾ ಶ್ರೀನಾಥ್IAS ಅಧಿಕಾರಿಯಾದ 'ಯು ಟರ್ನ್' ಸುಂದರಿ ಶ್ರದ್ಧಾ ಶ್ರೀನಾಥ್

  ಅಂದ್ರೆ ಶ್ರದ್ಧಾ 30 ವರ್ಷ ಮುಂದೆ ಹೋಗುತ್ತಿದ್ದಾರೆ. ರೆಟ್ರೋ ಶೈಲಿಯ ಸಿನಿಮಾಗಳನ್ನು ನೇಡಿರುತ್ತೀರಿ, ಅನೇಕ ವರ್ಷಗಳ ಹಿಂದಿನ ಕಾಲಘಟ್ಟದ ಕಥೆ ಹೊಂದಿರುವ ಸಾಕಷ್ಟು ಸಿನಿಮಾಗಳು ಬಂದಿವೆ, ಬರ್ತಿವೆ. ಆದರೆ ಈ ಸಿನಿಮಾ 30 ವರ್ಷಗಳ ಕಾಲ ಮುಂದಕ್ಕೆ ನಡೆಯುತ್ತಿರುವುದು ವಿಶೇಷ. ಇದು ಹಾರರ್ ಕಥಾಹಂದರ ಹೊಂದಿರುವ ಸಿನಿಮಾವಾಗಿದೆ.

  ಅಂದಹಾಗೆ ಚಿತ್ರಕ್ಕೆ ಕಲಿಯುಗಂ ಎಂದು ಶೀರ್ಷಿಕೆ ಇಡಲಾಗಿದೆ. ಯುವ ನಿರ್ದೇಶಕ ಪ್ರಮೋದ್ ಸುಂದರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರದ್ಧಾಗೆ ಈ ಕಥೆ ತುಂಬಾ ಇಷ್ಟವಾಗಿ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಮುಂದಿನ ವರ್ಷ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲು ನಿರ್ಧರಿಸಿದೆ. 2050 ಕಾಲಘಟ್ಟ ತೋರಿಸಲು ವಿಭಿನ್ನವಾದ ಸೆಟ್ ನಿರ್ಮಾಣ ಮಾಡಲಾಗುತ್ತಿದೆಯಂತೆ.

  English summary
  Kannada Actress Shraddha Srinath next horror Thriller titled Kaliyugam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X