ಆತನಿಗಾಗಿ ಶ್ರದ್ದಾ ಶ್ರೀನಾಥ್ ಎದೆ ಮೇಲೆ ಟ್ಯಾಟೂ: ಸೀಕ್ರೆಟ್ ರಿವೀಲ್ ಮಾಡಿದ ಯೂಟರ್ನ್ ಬೆಡಗಿ

ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಆಗೊಂದು ಈಗೊಂದು ಸಿನಿಮಾದಲ್ಲಿ ನಟಿಸುತ್ತಿರುತ್ತಾರೆ. ಸದ್ಯ ಕನ್ನಡ ಬಿಟ್ಟು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಶ್ರದ್ಧಾ ನಟನೆಯ ತೆಲುಗಿನ 'ಸೈಂಧವ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ವಿಕ್ಟರಿ ವೆಂಕಟೇಶ್ ಜೋಡಿಯಾಗಿ 'ಸೈಂಧವ್' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ. ಸಿನಿಮಾ ಪ್ರಚಾರದ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಆಕೆ ಮಾತನಾಡುತ್ತಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ತಮ್ಮ ಎದೆ ಮೇಲೆ ಇರುವ ಟ್ಯಾಟೂ ಬಗ್ಗೆ ಮಾತನಾಡಿದ್ದಾರೆ. ಆ ಟ್ಯಾಟೂ ಅರ್ಥ ಏನು? ಯಾರಿಗಾಗಿ ಆ ಟ್ಯಾಟ್ಯೂ ಹಾಕಿಸಿಕೊಂಡರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

U turn actress Shraddha srinath revealed her tattoo secret

ಯೂಟರ್ನ್ ಬೆಡಗಿ ಸದ್ಯ ಸಾಕಷ್ಟು ಫೋಟೊಶೂಟ್‌ ಮಾಡಿಸುತ್ತಿರುತ್ತಾರೆ. ಆಕೆಯ ಫೋಟೊಗಳಲ್ಲಿ ಕೆಲವೊಮ್ಮೆ ಎದೆಯ ಮೇಲಿನ ಟ್ಯಾಟೂ ಇಣುಕಿರುವುದು ಇದೆ. ಅದರ ಬಗ್ಗೆ ಮಾತನಾಡಿದ್ದಾರೆ. ನನ್ನ ಟ್ಯಾಟೂವನ್ನು ಸಹ ಎಲ್ಲರೂ ಗಮನಿಸುತ್ತಿದ್ದಾರಾ? ವಾಹ್ ಎಂದು ಶ್ರದ್ಧಾ ಹುಬ್ಬೇರಿಸಿದ್ದಾರೆ. ಲವ್ ಎನ್ನುವುದನ್ನು ಈ ರೀತಿ ಡಿಸೈನ್ ಆಗಿ ಟ್ಯಾಟೂ ಹಾಕಿಸಿಕೊಂಡಿದ್ದೀನಿ ಎಂದಿದ್ದಾರೆ.

ಇದು ಬೀಟಲ್ಸ್ ಮ್ಯೂಸಿಕ್ ಬ್ರಾಂಡ್‌ನ ಲೋಗೋ. ಆತ ನನ್ನ ಕ್ರಶ್. ಹದಿನೆಂಟನೇ ವಯಸ್ಸಿನಲ್ಲಿ ಆತ ನನ್ನ ಕ್ರಶ್. ಆತನೇ ನನ್ನನ್ನು ಆ ಮ್ಯೂಸಿಕ್ ಬ್ಯಾಂಡ್‌ಗೆ ಪರಿಚಯಿಸಿದ್ದು. ಹಾಗಾಗಿ ಕ್ರಶ್‌ಗಾಗಿ ಈ ಟ್ಯಾಟೂ ಹಾಕಿಸಿಕೊಂಡೆ. ಬೇರೇನು ಇಲ್ಲ. ಕ್ರಶ್‌ಗೂ ಟ್ಯಾಟೂ ಹಾಕಿಸಿಕೊಳ್ಳುತ್ತೀರಾ? ಎಂದು ನಿರೂಪಕ ಕೇಳಿದಾಗ ಆಕೆ ನಕ್ಕು ಸುಮ್ಮನಾಗಿದ್ದಾರೆ. ಮಲಯಾಳಂನ 'ಕೊಹಿನೂರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರೂ ಕನ್ನಡದ 'ಯೂಟರ್ನ್' ಸಿನಿಮಾ ಆಕೆಗೆ ದೊಡ್ಡ ಬ್ರೇಕ್ ಕೊಟ್ಟಿತ್ತು.

'ಯೂಟರ್ನ್' ಬಳಿಕ ಉರ್ವಿ, ಆಪರೇಷನ್ ಅಲಮೇಲಮ್ಮ, ರುಸ್ತುಂ, ಡಿಯರ್ ವಿಕ್ರಂ ಸೇರಿ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಶ್ರದ್ಧಾ ನಟಿಸಿದರು. ಆದರೆ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ತಮಿಳಿನ 'ವಿಕ್ರಂ ವೇದ' ಸಿನಿಮಾ ಸಖತ್ ಸದ್ದು ಮಾಡಿತ್ತು. ಹಾಗಾಗಿ ತೆಲುಗು, ತಮಿಳು ಸಿನಿಮಾಗಳತ್ತ ಹೆಚ್ಚು ಫೋಕಸ್ ಮಾಡಿದರು.

ಶ್ರದ್ಧಾ ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಾಗಾಗಿ ಪದೇ ಪದೆ ಒಂದು ಊರಿನಿಂದ ಮತ್ತೊಂದು ಊರಿಗೆ ವಾಸ್ತವ್ಯ ಬದಲಿಸುತ್ತಿದ್ದರು. ಹಾಗಾಗಿ ರಾಜಸ್ತಾನ್, ಮಧ್ಯಪ್ರದೇಶ್, ಉತ್ತರಕಾಂಡ್, ಅಸ್ಸಾಂ, ತೆಲಂಗಾಣ, ಕರ್ನಾಟಕ ಹೀಗೆ ವಿವಿಧ ರಾಜ್ಯಗಳಲ್ಲಿ ಆಕೆ ಓದಿ ಬೆಳೆಯುವಂತಾಯಿತು. ಕೊನೆಗೆ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದರು.

ಇನ್ನು ಕನ್ನಡದಲ್ಲಿ ಶ್ರದ್ಧಾ ಮಾಡಿದ್ದ ಯೂಟರ್ನ್ ಸಿನಿಮಾ ತೆಲುಗು, ತಮಿಳಿಗೂ ರೀಮೆಕ್ ಆಗಿತ್ತು. ತೆಲುಗಿನಲ್ಲಿ ಸಮಂತಾ ಆ ಪಾತ್ರವನ್ನು ಮಾಡಿದ್ದರು. ಸಂದರ್ಶನವೊಂದರಲ್ಲಿ ನಿಮ್ಮ ಪಾತ್ರವನ್ನು ಸಮಂತಾ ಮಾಡಿದ್ದಾರೆ. ಅವರ ನಟನೆ ಹೇಗಿದೆ? ಎನ್ನುವ ಪ್ರಶ್ನೆಗೆ "ಆ ಪಾತ್ರದಲ್ಲಿ ಸಮಂತಾನ ಊಹಿಸಿಕೊಳ್ಳಲು ನನಗೆ ಅರ್ಥ ಗಂಟೆ ಬೇಕಾಯಿತು. ಯಾಕಂದರೆ ನಾನು ಮಾಡಿದ ಪಾತ್ರದಲ್ಲಿ ಮತ್ತೊಬ್ಬರನ್ನು ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದರು. ಆಗ ಈ ಹೇಳಿಕೆ ಭಾರೀ ವೈರಲ್ ಆಗಿತ್ತು.

'ಸೈಂಧವ್' ಚಿತ್ರದ ವಿಚಾರಕ್ಕೆ ಬಂದರೆ ಶೈಲೇಶ್ ಕೊಲೆನು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಮಡದಿಯ ಪಾತ್ರದಲ್ಲಿ ಶ್ರದ್ಧಾ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 13ಕ್ಕೆ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
kannada actress Shraddha srinath opens about her tattoo;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X