33 ಸೆಕೆಂಡ್ ರಹಸ್ಯ, ವೈರಲ್ ಆಯ್ತು ಜ್ಯೋತಿ ರೈ ಹೊಸ ವಿಡಿಯೋ
ಸಾಮಾಜಿಕ ಜಾಲತಾಣಕ್ಕೆ ಎಲ್ಲರೂ ಜೋತು ಬಿದ್ದಿರುವ ಕಾಲ ಇದು. ಈ ಕಾಲದಲ್ಲಿ ರೀಲ್ಸ್ ಮಾಡುವುದು, ತಮ್ಮ ರೀಲ್ಸ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು.. ತಮ್ಮ ಬದುಕಿನ ಅತ್ಯಮೂಲ್ಯ ಸಮಯವನ್ನು ಇದೇ ಸೋಶಿಯಲ್ ಮೀಡಿಯಾದಲ್ಲಿ ವ್ಯರ್ಥ ಮಾಡುವುದು ಹಲವರಿಗೆ ಅಭ್ಯಾಸ ಆಗಿದೆ. ಇನ್ನು ಸಾಮಾಜಿಕ ಜಾಲತಾಣ ಪ್ರವರ್ಧಮಾನಕ್ಕೆ ಬರುವ ಮುನ್ನ ಪ್ರಚಾರಕ್ಕೆ ಹಲವು ತಂತ್ರಗಳನ್ನು ಉಪಯೋಗ ಮಾಡುತ್ತಿದ್ದ ಹಲವರಿಗೆ ಈಗ ಇದೇ ಸೋಶಿಯಲ್ ಮೀಡಿಯಾ ವೇದಿಕೆಯಾಗಿದೆ.
ಯಾಕೆಂದರೆ.. ಇಲ್ಲಿ ಹಾಕಿದ ವಿಡಿಯೋ ಅಥವಾ ಫೋಟೊ ಎಲ್ಲರನ್ನು ತಲುಪುತ್ತೆ . ನೋಡ ನೋಡುತ್ತಾ ವೈರಲ್ ಕೂಡ ಆಗುತ್ತೆ. ಮೊದಲೆಲ್ಲಾ ಲಕ್ಷಾಂತರ ಹಣ ಸುರಿದರು ಕೂಡ ಸಿಗದ ಪ್ರಚಾರ ಈಗ ಕೇವಲ ಒಂದು ವಿಡಿಯೋ ಮೂಲಕ ಸಿಗುತ್ತೆ. ಇದಕ್ಕೆ ಜ್ಯೋತಿ ರೈ ಅವರ ವೈರಲ್ ಆದ ವಿಡಿಯೋ ಸದ್ಯದ ಉದಾಹರಣೆ.

ಹೌದು, ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವಜ್. ಕನ್ನಡದಿಂದ ತೆಲುಗಿಗೆ ವಲಸೆ ಹೋದ ಕರಾವಳಿಯ ಕಿನ್ನರಿ. 'ಅನುರಾಗ ಸಂಗಮ'.. 'ಜೋಗುಳ'.. 'ಗೆಜ್ಜೆಪೂಜೆ'.. 'ಲವಲವಿಕೆ'.. 'ಕನ್ಯಾದಾನ'.. 'ಗೆಜ್ಜೆಪೂಜೆ'.. 'ಪ್ರೇರಣಾ',.. 'ಕಿನ್ನರಿ'.. 'ಮೂರು ಗಂಟು'.. 'ಕಸ್ತೂರಿ ನಿವಾಸ'.. ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದವರು ಜ್ಯೋತಿ ರೈ.
ಆದರೆ, ಆ ನಂತರ ಅದೇನಾಯ್ತೋ, ಕನ್ನಡದ ಕಿರುತೆರೆ ಲೋಕವನ್ನು ಎಡಗಾಲಿನಲ್ಲಿ ಒದ್ದು ಆಂಧ್ರ ಪ್ರದೇಶಕ್ಕೆ ತೆರಳಿ ಮತ್ತೊಂದು ಮದುವೆಯಾಗಿ ಅಲ್ಲಿಯೇ ಜ್ಯೋತಿ ರೈ ಠಿಕಾಣಿಯನ್ನು ಹೂಡಿದರು. ಇಂಥಾ ಜ್ಯೋತಿ ರೈ ಸದ್ಯ ''ಕಿಲ್ಲರ್'' ಎಂಬ ಚಿತ್ರವನ್ನು ಮಾಡಿದ್ದಾರೆ. ವಿಶೇಷ ಅಂದರೆ ಕಳೆದ ಹಲವು ದಿನಗಳಿಂದ ಬಿಡುಗಡೆಯ ಬಾಗಿಲಿಗೆ ಬಂದು ನಿಂತ ಈ ಚಿತ್ರವನ್ನು ಜ್ಯೋತಿ ಅವರ ಎರಡನೇ ಗಂಡ ಸುಕು ಪೂರ್ವಜ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್ ಕೂಡ ಬಿಕಡುಗಡೆಯಾಗಿದ್ದು ಕುತೂಹಲವನ್ನು ಸೃಷ್ಟಿಸಿದೆ.

ಹೀಗಿರುವಾಗ ಇದೀಗ ಜ್ಯೋತಿ ರೈ ತಮ್ಮ ಇದೇ ಚಿತ್ರದ ಚಿಕ್ಕ ತುಣುಕು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. 33 ಸೆಕೆಂಡ್ ಇರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿಶಾಲ್ ರಾಜ್ ಇಲ್ಲಿ ಜ್ಯೋತಿ ರೈ ಅವರ ಜೊತೆ ತೆರೆ ಹಂಚಿಕೊಂಡಿದ್ದು ಸದ್ಯ ಜ್ಯೋತಿ ಹಂಚಿಕೊಂಡ ವಿಡಿಯೋದಲ್ಲಿ ಇಬ್ಬರ ಕೆಮೆಸ್ಟ್ರೀಯನ್ನು ಕಣ್ತುಂಬಿಕೊಳ್ಳಬಹುದು. ಇಬ್ಬರ ಕಣ್ಣಿನ ಸಂಪರ್ಕ, ಲಿಪ್ ಕಿಸ್ ಮಾಡುವ ವಿಫಲ ಪ್ರಯತ್ನವನ್ನು ಕೂಡ ನೋಡಬಹುದು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಹಲವಾರು ಜನ ಹಲವು ಬಗೆಯಲ್ಲಿ ಈ ವಿಡಿಯೋಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೊನೆಗೂ ಸರಿಯಾಗಿ ಕಿಸ್ ಮಾಡಲೇ ಇಲ್ವಲ್ಲಾ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. 20,000 ಕ್ಕೂ ಅಧಿಕ ಜನ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು 238 + ಜನ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇನ್ನುಳಿದಂತೆ ಜ್ಯೋತಿ ಇದರಲ್ಲಿ ರೈ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಅವಳೇ ಮುಂದೆ ರೋಬೋಟ್ ಮೂಲಕ ಮರು ಜೀವ ಪಡೆಯುತ್ತಾಳೆ. ಹಾಟ್ ಆಗಿರುವ ರೈ ಹೇಗೆ ವೈಲೆಂಟ್ ಆಗಿ ಮಾರ್ಪಾಡಾಗುತ್ತಾಳೆ. ರೊಬೋಟ್ ಆಗಿ ಮರು ಜೀವ ಪಡೆಯಲು ಕಾರಣವೇನು. ರೋಬೋಟ್‌ಗೆ ಯಾರ ಮೇಲೆ ಸೇಡು. ಯಾಕೆ ಹಲವರನ್ನು ಕೊಲ್ಲುತ್ತಾಳೆ ಎಂಬುದೇ ಚಿತ್ರದ ಕಥೆ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಚಿತ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.


Click it and Unblock the Notifications











