ಮಕ್ಕಳು ಯಾವಾಗ ಎನ್ನುವ ಪ್ರಶ್ನೆಯಿಂದ ಬೇಸತ್ತ ರಾಮ್‌ಚರಣ್ ಪತ್ನಿ ಉಪಾಸನ

ನಟ ರಾಮ್ ಚರಣ್‌ತೇಜ ಮತ್ತು ಉಪಾಸನ ಕೊನಿಡೇಲಾ ಅವರು ಯಾವಾಗ ತಂದೆ ತಾಯಿ ಆಗುತ್ತಾರೆ ಎಂಬುದು ಸದ್ಯಕ್ಕೆ ಮಿಲಿಯನ್‌ ಡಾಲರ್‌ ಪ್ರಶ್ನೆ. ಇವರ ಮಕ್ಕಳು ಪಡೆಯುವ ವಿಚಾರದ ಬಗ್ಗೆ ಸದಾ ಚರ್ಚೆ ನಡೆಯುತ್ತಿರುತ್ತದೆ. ಜೊತೆಗೆ ಸಾಕಷ್ಟು ಜನ ಈ ಬಗ್ಗೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಮೆಗಾ ಅಭಿಮಾನಿಗಳು ಕೂಡ ಈ ಪ್ರಶ್ನೆ ಕಾಡುತ್ತಾ ಇರುತ್ತದೆ. ಈಗ ಮತ್ತೆ ಉಪಾಸನ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಮಾತನಾಡಿದ ಉಪಾಸನ ನಾನು ಇದರಿಂದ ಬೇಸತ್ತು ಹೋಗಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ರಾಮ್‌ಚರಣ್ ಪತ್ನಿಗೆ ಈ ಪ್ರಶ್ನೆ ಮತ್ತೆ ಎದುರಾಗಿದೆ. ಇದಕ್ಕೆ ಉಪಾಸನ ಖಡಕ್ ಉತ್ತರ ನೀಡಿದ್ದಾರೆ. "ನಾನು ಈ ಪ್ರಶ್ನೆಗೆ ಯಾವುದೇ ಉತ್ತರ ನೀಡದರೂ ಅದು ಸಂಚಲನ ಮೂಡಿಸುತ್ತದೆ. ಹಾಗಾಗಿ, ನಾನು ಇದಕ್ಕೆ ಉತ್ತರಿಸುವುದಿಲ್ಲ. ಇತರರು ಅದರ ಬಗ್ಗೆ ಏನು ಯೋಚಿಸುತ್ತಾರೆ ಎನ್ನುವ ಬಗ್ಗೆ ನಾನು ಹೆದರುವುದಿಲ್ಲ. ಅದು ನನ್ನ ವೈಯಕ್ತಿಕ ಜೀವನ" ಎಂದು ಉಪಾಸನ ಹೇಳಿದ್ದಾರೆ.

ಇನ್ನೂ ಗರ್ಭಧಾರಣೆಯ ಸುದ್ದಿಯ ಬಗ್ಗೆ ಮಾತನಾಡುತ್ತಾ, " ಅಂತಹ ದಿನ ಬಂದಾಗ, ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ತುಂಬಾ ಸಂತೋಷ ಪಡುತ್ತೇನೆ. ಜಗತ್ತು ಮಹಾ ಮಾರಿ ಕೊರೊನಾದ ಜೊತೆಗೆ ಸಾಗುತ್ತಿದೆ. ಒಬ್ಬರು ಇನ್ನೊಬ್ಬರನ್ನು ಬೆಂಬಲಿಸಬೇಕು" ಎಂದು ಹೇಳುತ್ತಾ ಉಪಾಸನ ಮಾತು ಮುಗಿಸಿದ್ದಾರೆ.

Ram Charan wife Upasana talks about having kids

ಇನ್ನು ಇದೇ ವಿಚಾರವಾಗಿ ಉಪಾಸನ ಅವರ ಬಗ್ಗೆ ಸಾಕಷ್ಟು ಊಹಾ ಪೋಹಗಳು ಹಬ್ಬಿದ್ದವು. ಅದೇನೆ ಇದ್ದರು ಇದು ಉಪಾಸನ ಹೇಳೋ ಹಾಗೆ ಅದು ಅವರ ವೈಯಕ್ತಿಕ ವಿಚಾರ. ರಾಮ್‌ ಚರಣ್ ಮತ್ತು ಉಪಾಸನ ಯಾವುದೇ ವಿವಾದಗಳಿಲ್ಲದೆ, ಆದರ್ಶ ದಂಪತಿ ಆಗಿ ಇದ್ದಾರೆ. ಬ್ಯುಸಿನೆಸ್ ವುಮೆನ್‌ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಇತ್ತೀಚೆಗೆ ಉಪಾಸನ ತಮ್ಮದೇ ಯು ಟ್ಯೂಬ್‌ ಚಾನೆಲ್‌ ಲಾಂಚ್‌ ಮಾಡಿದ್ದಾರೆ. ಅಡುಗೆ ಕಾರ್ಯಕ್ರಮದ ಜೊತೆಗೆ ವಿಧ ವಿಧವಾದ ಕಾರ್ಯಕ್ರಮಗಳನ್ನು ಉಪಾಸನ ಮಾಡುತ್ತಿದ್ದಾರೆ.

Upasana Fed Up with Questions About Her Kids

ಇನ್ನು ನಟ ರಾಮ್‌ಚರಣ್‌ ತೇಜ ಆರ್‌ಆರ್‌ಆರ್‌ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್‌ ಆದ ಆರ್ ಆರ್ ಆರ್ ಚಿತ್ರದ ಹಾಡಿನಲ್ಲಿ ರಾಮ್‌ಚರಣ್ ಜೂನಿಯರ್‌ ಎನ್‌ಟಿಆರ್‌ ಜೊತೆಗೆ ಮಸ್ತ್‌ ಹೆಜ್ಜೆ ಹಾಕಿದ್ದಾರೆ. ಜೊತೆಗೆ ನಿರ್ದೇಶಕ ಶಂಕರ್‌ ಮುಂದಿನ ಚಿತ್ರದ ಶೂಟಿಂಗ್‌ನಲ್ಲೂ ರಾಮ್‌ ಚರಣ್‌ ತೇಜ ಬ್ಯುಸಿ ಆಗಿದ್ದಾರೆ.

More from Filmibeat

English summary
Ram Charam Wife Upasana Fed Up with The Questions About Her Kids
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X