For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸೊಸೆ-ನಾಗಾರ್ಜುನ ಸೊಸೆ, ಅಡುಗೆ ಮನೆಯಲ್ಲಿ ಪ್ರತಿಭಾ ಪ್ರದರ್ಶನ!

  |

  ನಟಿ, ನಾಗಚೈತನ್ಯ ಪತ್ನಿ, ಸಮಂತಾ ಅಕ್ಕಿನೇನಿ ಮತ್ತು ಉದ್ಯಮಿ, ರಾಮ್‌ಚರಣ್ ತೇಜ ಪತ್ನಿ ಉಪಾಸನಾ ಕೋಡಿನೇಲಾ ಅದ್ಭುತ ಗೆಳೆಯರು. ಅವರ ಆತ್ಮೀಯ ಗೆಳೆತನ ಸಿನಿಪ್ರಿಯರಿಗೆ ಪರಿಚಯ ಇಲ್ಲದ್ದಲ್ಲ.

  ಈಗ ಹಠಾತ್ತನೆ ಈ ಇಬ್ಬರೂ ಗೆಳತಿಯರು ಫಿಟ್‌ನೆಸ್‌ ಬಗ್ಗೆ ಆಗಾಗ್ಗೆ ವಿಡಿಯೋಗಳನ್ನು ಹಾಕುತ್ತಿರುತ್ತಾರೆ. ಆದರೆ ಈಗ ಇದ್ದಕ್ಕಿದ್ದಂತೆ ಅಡುಗೆ ಮನೆ ಸೇರಿಬಿಟ್ಟಿದ್ದಾರೆ.

  ಟಾಕ್ ಶೋ ನಿರೂಪಣೆ ಮಾಡಲು ಸಜ್ಜಾದ ಸಮಂತಾಟಾಕ್ ಶೋ ನಿರೂಪಣೆ ಮಾಡಲು ಸಜ್ಜಾದ ಸಮಂತಾ

  ಹೌದು, ಸಮಂತಾ ಅಕ್ಕಿನೇನಿ ಹಾಗೂ ಉಪಾಸನಾ ಕೋಡಿನೇಲ ಇಬ್ಬರೂ ಸೇರಿ ಅಡುಗೆ ಮಾಡಿದ್ದಾರೆ. ಅಡುಗೆಯ ವಿಡಿಯೋ ವನ್ನು ಉಪಾಸನಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರದರ್ಶಿಸಿದ್ದಾರೆ. ಅಭಿಮಾನಿಗಳು ವಿಡಿಯೋವನ್ನು ಭರ್ಜರಿಯಾಗಿ ಹೊಗಳಿದ್ದಾರೆ.

  ಇಬ್ಬರೂ ಆಪ್ತ ಗೆಳತಿಯರು

  ಇಬ್ಬರೂ ಆಪ್ತ ಗೆಳತಿಯರು

  ಬಹುಪಾಲು ಅಡುಗೆ ಮಾಡಿರುವುದು ಸಮಂತಾ ಅಕ್ಕಿನೇನಿ. ಕಾರ್ಯಕ್ರಮ ನಿರೂಪಣೆಯನ್ನು ಚಿರಂಜೀವಿ ಸೊಸೆ ಉಪಾಸನಾ ಕೋಡಿನೇಲ ಮಾಡಿದ್ದಾರೆ. ಇಬ್ಬರೂ ಗೆಳತಿಯರು ತಮಾಷೆ ಮಾಡಿಕೊಳ್ಳುತ್ತಾ, ಪರಸ್ಪರ ಕಾಲೆಳೆದುಕೊಳ್ಳುತ್ತಾ ಅಡುಗೆ ಮಾಡುತ್ತಾರೆ.

  ತಕ್ಕಾಲಿ ಸಾದಂ ಎಂಬ ಖಾದ್ಯ ಮಾಡುವ ಸಮಂತಾ

  ತಕ್ಕಾಲಿ ಸಾದಂ ಎಂಬ ಖಾದ್ಯ ಮಾಡುವ ಸಮಂತಾ

  ಕಾರ್ಯಕ್ರಮದಲ್ಲಿ ಸಮಂತಾ 'ತಕ್ಕಾಲಿ ಸಾದಂ' ಎಂಬ ಖಾದ್ಯವನ್ನು ಮಾಡುತ್ತಾರೆ. ಬ್ರೌನ್ ರೈಸ್ ನಿಂದ ವಿವಿಧ ಮಸಾಲೆ, ಈರುಳ್ಳಿ, ಟಮೆಟೋ, ತುಪ್ಪಾ, ಗೋಡಂಬಿ, ಮೆಣಸಿನಕಾಯಿ, ಜೀರಿಗೆ ಇನ್ನಿತರೆ ಐಟಂ ಗಳನ್ನು ಬಳಸಿ ಅಡುಗೆ ಮಾಡುತ್ತಾರೆ ಸಮಂತಾ.

  ಡ್ರಗ್ಸ್ ಪ್ರಕರಣ: ರಕುಲ್ ಮತ್ತು ಸಾರಾ ಅಲಿ ಖಾನ್ ಪರ ನಿಂತ ನಟಿ ಸಮಂತಾಡ್ರಗ್ಸ್ ಪ್ರಕರಣ: ರಕುಲ್ ಮತ್ತು ಸಾರಾ ಅಲಿ ಖಾನ್ ಪರ ನಿಂತ ನಟಿ ಸಮಂತಾ

  ಚೈತನ್ಯ ಬಹಳ ಲಕ್ಕಿ ಎಂದ ಉಪಾಸನಾ

  ಚೈತನ್ಯ ಬಹಳ ಲಕ್ಕಿ ಎಂದ ಉಪಾಸನಾ

  ಸಮಂತಾ ಚೆನ್ನಾಗಿ ಅಡುಗೆ ಮಾಡುತ್ತಿದ್ದಕ್ಕೆ ಶಹಭಾಸ್ ಎನ್ನುವ ಉಪಾಸನಾ, 'ಚೈತನ್ಯ (ಸಮಂತಾ ಪತಿ) ಬಹಳ ಲಕ್ಕಿ ಎನ್ನುತ್ತಾರೆ. ಅದಕ್ಕೆ ಜೋರಾಗಿ ನಗುತ್ತಾರೆ ಸಮಂತಾ. ಚೈತನ್ಯ ಅಮ್ಮ ಒಮ್ಮೆ ಹೇಳಿದ್ದಂತೆ ಸಮಂತಾ ಮನೆಯಲ್ಲಿ ಅಡುಗೆ ಮಾಡುವುದಿಲ್ಲವಂತೆ!

  ವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾ

  ಸಚಿವರ ಕೆಟ್ಟ ಅಂತ್ಯಕ್ರಿಯೆ ನೋಡಿ ಕಂಬನಿ ಮಿಡಿದ ಜಗ್ಗೇಶ್ | Filmibeat Kannada
  ಅತ್ಯುತ್ತಮ ಸೊಸೆ ಪ್ರಶಸ್ತಿ ಯಾರಿಗೆ?

  ಅತ್ಯುತ್ತಮ ಸೊಸೆ ಪ್ರಶಸ್ತಿ ಯಾರಿಗೆ?

  ಅಡುಗೆ ಎಲ್ಲಾ ಮುಗಿದ ಮೇಲೆ 'ಅತ್ಯುತ್ತಮ ಸೊಸೆ ಪ್ರಶಸ್ತಿಯು ಸಮಂತಾ ಗೆ ಹೋಗುತ್ತದೆ' ಎನ್ನುತ್ತಾರೆ ಉಪಾಸನಾ, ಇದಕ್ಕೆ ಒಪ್ಪದ ಸಮಂತಾ, 'ಇಲ್ಲ ಆ ಪ್ರಶಸ್ತಿ ಉಪಾಸನಾ ಗೆ ಸೇರುತ್ತೆದೆ' ಎನ್ನುತ್ತಾರೆ. ಕಡಿಮೆ ಅವಧಿಯ ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

  ಸಮಂತಾ ಅಂದ್ರೆ ಇಷ್ಟ ಎಂದ ಅರ್ಜುನ್ ಕಪೂರ್ ಗೆ ನಾಗಚೈತನ್ಯ ಪತ್ನಿ ಹೇಳಿದ್ದೇನು?ಸಮಂತಾ ಅಂದ್ರೆ ಇಷ್ಟ ಎಂದ ಅರ್ಜುನ್ ಕಪೂರ್ ಗೆ ನಾಗಚೈತನ್ಯ ಪತ್ನಿ ಹೇಳಿದ್ದೇನು?

  English summary
  Ram Charan Teja's wife Upasana Kodinela and Samantha Akkineni cook food together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X