ಮಕ್ಕಳು ಯಾಕಿಲ್ಲ: ಮತ್ತೆ ಸ್ಪಷ್ಟನೆ ಕೊಟ್ಟ ರಾಮ್‌ ಚರಣ್ ಪತ್ನಿ ಉಪಾಸನಾ!

By Bhagya.s

ತೆಲುಗು ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ವಿಚಾರ ಬಂದಾಗಲೆಲ್ಲಾ ಚರ್ಚೆಯಾಗುವುದು ಒಂದೇ. ಅವರಿಗೆ ಇನ್ನು ಯಾಕೆ ಮಕ್ಕಳಿಲ್ಲ ಎನ್ನುವ ವಿಷಯ. ಈ ಸುದ್ದಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತೆ. ಈ ಬಗ್ಗೆ ಉಪಾಸನ ಹಲವು ಬಾರಿ ಮಾತನಾಡಿದ್ದಾರೆ. ಇತ್ತೀಚೆಗೆ ಇದೆ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಇತ್ತೀಚಿಗೆ ಸದ್ಗುರು ಕಾರ್ಯಕ್ರಮವೊಂದರಲ್ಲಿ ಉಪಾಸನಾ ಭಾಗಿಯಾಗಿದ್ದರು. ಈ ವೇಳೆ ಅವರು ಯಾಕೆ ಮಕ್ಕಳಿಂದ ದೂರವಿದ್ದಾರೆ ಎನ್ನುವ ಬಗ್ಗೆ ಮಾತನಾಡಿದ್ದರು. ಅವರು ಈ ವಿಚಾರದಲ್ಲಿ ಹೇಳಿಕೆ ಕೊಟ್ಟ ಬಳಿಕ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಜನಸಂಖ್ಯೆಯನ್ನು ನಿಯಂತ್ರಣ ಮಾಡುವ ಸಲುವಾಗಿ ಅವರು ಮಕ್ಕಳು ಮಾಡಿಕೊಂಡಿಲ್ಲ ಎನ್ನುವುದರ ಜೊತೆಗೆ ನಾನಾ ರೀತಿಯಲ್ಲಿ ಈ ವಿಚಾರ ಹರಿದಾಡುತ್ತಿದೆ. ಆದರೆ ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಉಪಾಸನಾ, ಮತ್ತೊಮ್ಮೆ ಈ ವಿಚಾರಕ್ಕೆ ಸ್ಪಷ್ಟನೆ ಕೊಡಬೇಕಾಗಿದೆ.

ಗುರಿಗಾಗಿ ರಾಮ್‌ಚರಣ್ ಮಗು ತ್ಯಾಗ?

ಗುರಿಗಾಗಿ ರಾಮ್‌ಚರಣ್ ಮಗು ತ್ಯಾಗ?

ಉಪಾಸನಾ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಹಲವು ಕಡೆ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಪೋಸ್ಟ್‌ಗಳು ಹರಿದಾಡುತ್ತಿವೆ. ಸಿನಿಮಾರಂಗದಲ್ಲಿ ತಮ್ಮ ಗುರಿಯನ್ನು ಸಾಧಿಸಲು ಮಗು ಅಡ್ಡಿಯಾಗುತ್ತದೆ ಎಂದು ರಾಮ್ ಚರಣ್ ಈ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಎಂದು ಹಲವು ಪೋಸ್ಟ್ ಗಳಲ್ಲಿ ಬರೆಯಲಾಗಿತ್ತು. ಇದನ್ನು ಗಮನಿಸಿದ ಉಪಾಸನಾ ಅಂತಹ ಪೋಸ್ಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಗೆ ಹಾಕಿ. ಇದು ಸುಳ್ಳು ಸಂಪೂರ್ಣ ಕಾರ್ಯಕ್ರಮದ ಮಾತುಕತೆಯನ್ನು ಗಮನಿಸಿ ಎಂದು ಬರೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಉಪಾಸನಾ ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಉಪಾಸನಾ ಹೇಳಿದ್ದೇನು?

ಸದ್ಗುರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗಿ ಭಾಗವಹಿಸಿದ್ದ ಚಿರಂಜೀವಿ ಸೊಸೆ, ರಾಮ್ ಚರಣ್ ತೇಜ ಪತ್ನಿ ಉಪಾಸನಾ ಕೋನಿಡೇಲ, ಸದ್ಗುರು ಅವರಿಗೆ ಕೆಲವು ಫನ್ನಿ ಪ್ರಶ್ನೆಗಳನ್ನು ಕೇಳಿದರು. ಜೊತೆಗೆ ತಮ್ಮ ಖಾಸಗಿ ಪ್ರಶ್ನೆಯನ್ನು ಸಹ ಕೇಳಿದರು. ''ನಾನು ಹತ್ತು ವರ್ಷದಿಂದಲೂ ಖುಷಿಯಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದೇನೆ. ಆದರೂ ಹಲವರು ನನ್ನ RRR ಬಗ್ಗೆ ಜನ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅದೇನೆಂದರೆ ರಿಲೇಶನ್‌ಶಿಪ್ (ನನ್ನ ಸಂಬಂಧ), ರಿಪ್ರೊಡ್ಯೂಸ್ (ಸಂತಾನೋತ್ಪತ್ತಿ) ಹಾಗೂ ರೋಲ್ ಆಫ್ ಲೈಫ್ (ಜೀವನದ ಉದ್ದೇಶ) ಎಂದಿದ್ದಾರೆ ಉಪಾಸನಾ.

ಉಪಾಸನ ಪ್ರಶ್ನೆಗೆ ಉತ್ತರ!

ಉಪಾಸನ ಪ್ರಶ್ನೆಗೆ ಉತ್ತರ!

ವೈಯಕ್ತಿಕ ಜೀವನದ RRR ಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಉಪಾಸನಾ ಪ್ರಶ್ನೆ ಸದ್ಗುರು ಉತ್ತರಿಸಿದ್ದು "ರಿಲೇಶನ್‌ಶಿಪ್' ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಅದು ಸಂಪೂರ್ಣವಾಗಿ ನಿಮಗೆ ಬಿಟ್ಟ ವಿಚಾರ. ಆದರೆ ರಿಪ್ರೊಡ್ಯೂಸ್ (ಸಂತಾನೋತ್ಪತ್ತಿ) ಬಗ್ಗೆ ಹೇಳಬಲ್ಲೆ. ಭಾರತದ ಯಾವ ಹೆಣ್ಣು ಮಕ್ಕಳು ಸಂತಾನೋತ್ಪತ್ತಿ ಮಾಡುವ ಶಕ್ತಿ ಹೊಂದಿದ್ದರೂ, ಸಂತಾನೋತ್ಪತ್ತಿ ಮಾಡದೇ ಇರುವ ನಿರ್ಧಾರ ಮಾಡಿದ್ದಾರೊ ಅವರಿಗೆ ನಾನು ಪ್ರಶಸ್ತಿ ನೀಡಲು ಬಯಸುತ್ತೇನೆ. ನಿಜವಾಗಿಯೂ ಆ ಮಹಿಳೆಯರು ಅಭಿನಂದನಾರ್ಹರು'' ಎಂದಿದ್ದಾರೆ ಸದ್ಗುರು.

ಮದುವೆ ಆಗಿ 10 ವರ್ಷ!

ಮದುವೆ ಆಗಿ 10 ವರ್ಷ!

ರಾಮ್ ಚರಣ್ ಹಾಗೂ ಉಪಾಸನಾ ವಿವಾಹವಾಗಿ ಹತ್ತು ವರ್ಷಗಳಾಗಿವೆ ಆದರೆ ಈವರೆಗೆ ಮಕ್ಕಳಾಗಿಲ್ಲ. ಈ ಬಗ್ಗೆ ಉಪಾಸನಾ ಈ ವರೆಗೆ ಬಹಿರಂಗವಾಗಿ ಮಾತನಾಡಿಲ್ಲ. ಸಂದರ್ಶನವೊಂದರಲ್ಲಿ ಈ ಬಗ್ಗೆ ಕೇಳಿದಾಗಲೂ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ್ದರು, ಆದರೆ ಈಗ ಸದ್ಗುರು ಬಳಿ ತಮ್ಮ ಈ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

More from Filmibeat

English summary
Upasana Konidela Clarifies Her Statement On Not Having children In sadhguru Programme, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X