"ನನ್ನ ಗಂಡನ ಪಕ್ಕ ನಾನೇ ಚೆಂದ"; ಪತಿ ರಾಮ್‌ಚರಣ್ ವಿಷ್ಯದಲ್ಲಿ ಉಪಾಸನಾ ಎಷ್ಟು ಪೊಸೆಸಿವ್ ನೋಡಿ
ಟಾಲಿವುಡ್ ಹಾಟ್ ಕಪಲ್ ರಾಮ್‌ಚರಣ್ ಹಾಗೂ ಉಪಾಸನಾ. 7 ತಿಂಗಳ ಹಿಂದೆ ಮನೆಗೆ ಮಗಳನ್ನು ಸ್ವಾಗತಿಸಿದ ದಂಪತಿ ಸದ್ಯ ಆಕೆಯ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆ ಜೊತೆಗೆ ತಮ್ಮ ಸಿನಿಮಾ ಹಾಗೂ ಬ್ಯುಸಿನೆಸ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ಲಿಂಕಾರ ಮೆಗಾ ಫ್ಯಾಮಿಲಿಗೆ ಸಂತಸ ತಂದಿದ್ದಾಳೆ.
ಕೆಲವೊಮ್ಮೆ ಮಗಳ ಜೊತೆ ರಾಮ್-ಉಪಾಸನಾ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಮುದ್ದು ಮಗಳ ಮುಖವನ್ನು ಇನ್ನು ಅಭಿಮಾನಿಗಳಿಗೆ ಪರಿಚಯಿಸಿಲ್ಲ. ರಾಮ್‌ಚರಣ್- ಉಪಸನಾ ಪರಸ್ಪರ ಪ್ರೀತಿಸಿ 2012ರಲ್ಲಿ ಹಸೆಮಣೆ ಏರಿದ್ದರು. ಮದುವೆಯಾದ ಹೊಸತರಲ್ಲಿ ಉಪಾಸನಾ ದಪ್ಪಗಿದ್ದ ಕಾರಣಕ್ಕೆ ಬಾಡಿ ಶೇಮಿಂಗ್ ಎದುರಿಸುವಂತಾಗಿತ್ತು. ಬಳಿಕ ತೂಕ ಇಳಿಸಿಕೊಂಡು ತೆಳ್ಳಗಾದರು.

ಮದುವೆಯಾಗಿ 10 ವರ್ಷಗಳ ಬಳಿಕ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಈ ನಡುವೆ ಮಕ್ಕಳಾಗುತ್ತಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ಟೀಕೆಗಳನ್ನು ಉಪಾಸನಾ ಎದುರಿಸಿದ್ದರು. ಈ ಬಗ್ಗೆ ಆಕೆ ಆಕೆ ಕೂಡ ಮಾತನಾಡಿದ್ದಾರೆ. ಆದರೆ ಇಬ್ಬರು ಪರಸ್ಪರ ಒಪ್ಪಿ ಈ ನಿರ್ಧಾರ ಕೈಗೊಂಡಿದ್ದಾಗಿಯೂ ಹೇಳಿದ್ದರು. ಮಗುವನ್ನು ಉತ್ತಮವಾಗಿ ಬೆಳೆಸು ಸಬಲರಾಗುವವರೆಗೂ ಮಕ್ಕಳು ಬೇಡ ಎಂದುಕೊಂಡಿದ್ದಾಗಿ ಉಪಾಸನಾ ಹೇಳಿ ಅಚ್ಚರಿ ಮೂಡಿಸಿದ್ದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಉಪಾಸನಾ ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸಣ್ಣ ವೀಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿ ರಾಮ್‌ಚರಣ್ ವಿಚಾರದಲ್ಲಿ ಉಪಾಸನಾ ಸಖತ್ ಪೊಸೆಸಿವ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಯಾವ ಹೀರೊಯಿನ್ ಜೊತೆ ರಾಮ್‌ಚರಣ್ ಕೆಮೆಸ್ಟ್ರಿ ಚೆನ್ನಾಗಿದೆ ಎಂದು ನಿಮಗೆ ಅನ್ನಿಸಿದೆ? ಎನ್ನುವ ಪ್ರಶ್ನೆಗೆ ಉಪಾಸನಾ ಉತ್ತರಿಸಲು ನಿರಾಕರಿಸಿದ್ದಾರೆ. ಕೊನೆಗೆ ತಮಾಷೆಯಾಗಿ ಯಾರು ಇಲ್ಲ ಎಂದಿದ್ದಾರೆ.
ಬಳಿಕ ನಿರೂಪಕಿ ಮಾತು ಮುಂದುವರೆಸಿ ಕಾಜಲ್ ಅಗರ್‌ವಾಲ್ ಜೊತೆ ಚೆನ್ನಾಗಿರುತ್ತದೆ ಅಲ್ವಾ? ಎಂದು ಕೇಳಿದ್ದಾರೆ. ಕೂಡಲೇ ಉಪಾಸನಾ ಕೈರಾ, ಆಲಿಯಾ, ಪ್ರಿಯಾಂಕ ಜೊತೆಗೆ ಸಮಂತಾ ಹೆಸರು ಹೇಳಿ ಇವರೊಟ್ಟಿಗೆಲ್ಲಾ ಚೆನ್ನಾಗಿಲ್ವಾ? ಎಂದು ಕೇಳಿದ್ದಾರೆ. ನಿರೂಪಕಿ ಹೌದು ಎಲ್ಲರೊಟ್ಟಿಗೂ ರಾಮ್‌ಚರಣ್ ಕೆಮೆಸ್ಟ್ರಿ ಚೆನ್ನಾಗಿರುತ್ತದೆ ಎಂದಿದ್ದಾರೆ.

ಈ ಸಣ್ಣ ವಿಡಿಯೋ ವೈರಲ್ ಆಗ್ತಿದೆ. ಅಭಿಮಾನಿಗಳು ಇದನ್ನು ನೋಡಿ ಉಪಾಸನಾ ಸಖತ್ ಕ್ಯೂಟ್ ಆಗಿ ಮಾತನಾಡಿದ್ದಾರೆ. ಆಕೆ ಪತಿಯ ವಿಚಾರದಲ್ಲಿ ಪೊಸೆಸಿವ್ ಅನ್ನೋದು ಇಲ್ಲೇ ಗೊತ್ತಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಪೋಲೊ ಆಸ್ಪತ್ರೆ ಸಮೂಹದ ಸ್ಥಾಪಕ ಪ್ರತಾಪ್ ರೆಡ್ಡಿ ಮೊಮ್ಮಗಳು ಉಪಾಸನಾ. ಇನ್ನು ಅಪೋಲೊ ಚಾರಿಟಿಯ ವೈಸ್ ಚೇರ್‌ಮನ್ ಹಾಗೂ ಬಿ ಪಾಸಿಟಿವ್ ಮ್ಯಾಗಝೀನ್ ಮುಖ್ಯ ಸಂಪಾದಕಿ ಆಗಿ ಉಪಾಸನಾ ಕೆಲಸ ಮಾಡುತ್ತಿದ್ದಾರೆ.
ತಮ್ಮ ತಾತ ಪ್ರತಾಪ್ ರೆಡ್ಡಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪಾಸನಾ 'ದಿ ಅಪೋಲೊ ಸ್ಟೋರಿ' ಹೆಸರಿನ ಪುಸ್ತಕ ಹೊರ ತಂದಿದ್ದಾರೆ. ಪ್ರತಾಪ್ ರೆಡ್ಡಿ ಅಪೋಲೊ ಸಂಸ್ಥೆ ಕಟ್ಟಲು ಎಷ್ಟೆಲ್ಲ ಶ್ರಮಪಟ್ಟರು ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ. ಇನ್ನು ಇದೇ ಕಥೆಯನ್ನು ಬಯೋಪಿಕ್ ಸಿನಿಮಾ ಮಾಡ್ತೀರಾ ಎನ್ನಯವ ಪ್ರಶ್ನೆ ನೋಡೊಣ ಎಂದಿದ್ದಾರೆ. ರಾಮ್‌ಚರಣ್ ಹೀರೋ ಆಗಿ ನಟಿಸುತ್ತಾರಾ ಎನ್ನುವ ಪ್ರಶ್ನೆಗೆ ಅದೆಲ್ಲಾ ನಿರ್ದೇಶಕನ ದೃಷ್ಟಿಕೋನದ ಮೇಲೆ ಆಧಾರವಾಗಿರುತ್ತದೆ ಎಂದಿದ್ದಾರೆ.
ಇತ್ತೀಚೆಗೆ ಉಪಾಸನಾ ಮಾವ ನಟ ಚಿರಂಜೀವಿಗೆ ಪದ್ಮವಿಭೂಷಣ ಘೋಷಣೆ ಆಗಿತ್ತು. ಇದೇ ಸಂಭ್ರಮ ಆಚರಿಸಲು ಉಪಾಸನಾ ಭರ್ಜರಿ ಪಾರ್ಟಿ ಕೂಡ ಆಯೋಜಿಸಿದ್ದರು. ನಟ ಶಿವರಾಜ್‌ಕುಮಾರ್ ಸಹ ಮೊನ್ನೆ ಚಿರು ಮನೆಗೆ ಹೋಗಿದ್ದರು. ಆ ಫೋಟೊಗಳು ವೈರಲ್ ಆಗಿತ್ತು.


Click it and Unblock the Notifications










