Ghani Day 1 Box Office Collection : ಉಪೇಂದ್ರ ನಟನೆಯ ತೆಲುಗು ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ನಟ ಉಪೇಂದ್ರ ಕೇವಲ ಸ್ಯಾಂಡಲ್‌ವುಡ್‌ಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪರಭಾಷೆಯ ಹಲವು ಪ್ರಮುಖ ಸಿನಿಮಾಗಳಲ್ಲಿ, ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

Recommended Video

KGF 2 V/S BEAST | ದೊಡ್ಡ ಸಿನಿಮಾ ಪಟ್ಟಿಯಲ್ಲಿ ಎಲ್ಲರನ್ನು ಹಿಂದಿಕ್ಕಿದ KGF 2 | Yash | Vijay

ಇದೀಗ ಉಪೇಂದ್ರ ನಟನೆಯ ತೆಲುಗು ಸಿನಿಮಾ 'ಗನಿ' ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ವರುಣ್ ತೇಜ್ ನಾಯಕ ನಟನಾಗಿರುವ ಈ ಸಿನಿಮಾದಲ್ಲಿ ಸಾಯಿ ಮಂಜ್ರೇಕರ್ ನಟಿಸಿದ್ದಾರೆ.

ಬಾಕ್ಸರ್‌ ಒಬ್ಬನ ಕತೆಯನ್ನು ಈ ಸಿನಿಮಾ ಹೊಂದಿದ್ದು ಶುಕ್ರವಾರ ಬಿಡುಗಡೆ ಆಗಿರುವ ಈ ಸಿನಿಮಾ ಆಂಧ್ರ, ತೆಲಂಗಾಣದಲ್ಲಿ ಒಳ್ಳೆಯ ಓಪನಿಂಗ್ ಅನ್ನೇ ಪಡೆದುಕೊಂಡಿದೆ.

Upendra Acted Ghani Movie First Day Box Office Collection

ಆಂಧ್ರ ಮತ್ತು ತೆಲಂಗಾಣದಲ್ಲಿ ಸುಮಾರು 550 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಗನಿ' ಸಿನಿಮಾ ಬಿಡುಗಡೆ ಆಗಿದ್ದು, ಎರಡೂ ರಾಜ್ಯಗಳಲ್ಲಿ ಮೊದಲ ವಾರ ಸುಮಾರು 4 ಕೋಟಿ ರುಪಾಯಿ ಹಣವನ್ನು ಸಿನಿಮಾ ಗಳಿಸಿಕೊಂಡಿದೆ. ಆದರೆ ಈ ಮೊತ್ತ ನಿರೀಕ್ಷಿಸಿದ್ದಷ್ಟಿಲ್ಲ ಎಂದೇ ಹೇಳಲಾಗುತ್ತಿದೆ.

ಸಿನಿಮಾದ ಆಂಧ್ರ ಹಾಗೂ ತೆಲಂಗಾಣ ವಿತರಣೆ ಹಕ್ಕು 21 ಕೋಟಿ ರುಪಾಯಿಗಳಿಗೆ ಮಾರಾಟವಾಗಿತ್ತು. ಮತ್ತು ದೇಶದ ಇತರೆ ಪ್ರದೇಶಗಳಲ್ಲಿ ಬಿಡುಗಡೆ ಹಕ್ಕು 2.50 ಕೋಟಿಗೆ ಹಾಗೂ ವಿದೇಶದಲ್ಲಿ ವಿತರಣೆ ಹಕ್ಕು 1.80 ಕೋಟಿ ರುಪಾಯಿಗೆ ಮಾರಾಟವಾಗಿತ್ತು. ಇದು ಸಣ್ಣ ಮೊತ್ತವೇನೂ ಅಲ್ಲ. ಆದರೆ ಸಿನಿಮಾವು ಮೊದಲ ದಿನ ಕೇವಲ 4 ಕೋಟಿ ರುಪಾಯಿ ಗಳಿಸಿರುವುದು ವಿತರಕರಲ್ಲಿ ಆತಂಕ ಮೂಡಿಸಿದ್ದು, ಸಿನಿಮಾ ಲಾಭ ಗಳಿಸಬೇಕೆಂದರೆ ಇನ್ನೂ 22 ಕೋಟಿ ರುಪಾಯಿ ಹಣವನ್ನು ಗಳಿಸಬೇಕಾಗಿದೆ. ಅದೂ ಇನ್ನೊಂದು ವಾರದ ಒಳಗೆ.

'ಗನಿ' ಸಿನಿಮಾವು ಬಾಕ್ಸರ್ ಕತೆಯನ್ನು ಹೊಂದಿದ್ದು ಸಿನಿಮಾದಲ್ಲಿ ನಟ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಮಾತ್ರವೇ ಅಲ್ಲದೆ ಜಗಪತಿ ಬಾಬು, ಸುನಿಲ್ ಶೆಟ್ಟಿ ಇನ್ನೂ ಕೆಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ.

ಸಿನಿಮಾವನ್ನು ಕಿರಣ್ ಕೊರ್ರಪಾಟಿ ನಿರ್ದೇಶನ ಮಾಡಿದ್ದು, ಸಿನಿಮಾದ ಕತೆ, ಚಿತ್ರಕತೆ ಹಳತಾಯಿತು ಎಂಬ ವಿಮರ್ಶೆಗಳು ಸಿನಿಮಾದ ಬಗ್ಗೆ ಕೇಳಿ ಬರುತ್ತಿವೆ. ಆದರೆ ಸಿನಿಮಾದ ರಿಚ್‌ನೆಸ್ ಬಗ್ಗೆ ಹಾಗೂ ಸಿನಿಮಾದ ನಟರ ನಟನೆ ಬಗ್ಗೆ ಬಹಳ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಉಪೇಂದ್ರ ನಟನೆಯ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ.

ಉಪೇಂದ್ರ ಈವರೆಗೆ ಎಂಟು ತೆಲುಗು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. 'ಓಂಕಾರ' ಹೆಸರಿನ ಒಂದು ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈಗ ಉಪೇಂದ್ರ ನಟಿಸಿರುವ 'ಗನಿ' ಸಿನಿಮಾದಲ್ಲಿ ವರುಣ್ ತೇಜ್ ನಾಯಕ, ವರುಣ್ ತೇಜ್ ಅವರ ತಂದೆಯ ಜೊತೆ 'ಕನ್ಯಾದಾನಂ' ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದರು. ಮೆಗಾಸ್ಟಾರ್ ಕುಟುಂಬದೊಂದಿಗೆ ಆಪ್ತ ಬಂಧ ಇರುವುದಾಗಿಯೂ 'ಗನಿ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಉಪೇಂದ್ರ ಹೇಳಿದ್ದರು.

More from Filmibeat

English summary
Upendra acted Telugu movie Ghani first day box office collection. Movie collected only 4 crore rs on first day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X